IPL 2022 GT vs RR: ಗುಜರಾತ್ ತಂಡಕ್ಕೆ ರಾಜಸ್ಥಾನ್ ಸವಾಲ್, ಗೆದ್ದವರು ನೇರವಾಗಿ ಫೈನಲ್​ಗೆ

ಐಪಿಎಲ್ 2022ರ (IPL 2022) 15ನೇ ಫ್ಲೇ ಆಫ್​ ನ ಮೊದಲ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ (GT) ಮತ್ತು ರಾಜಸ್ಥಾನ್ ರಾಯಲ್ಸ್ (RR) ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ನಡೆಯಲಿದೆ.

GT vs RR

GT vs RR

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 71ನೇ ಪಂದ್ಯ ಮತ್ತು ಫ್ಲೇ ಆಫ್​ ನ ಮೊದಲ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ (GT) ಮತ್ತು ರಾಜಸ್ಥಾನ್ ರಾಯಲ್ಸ್ (RR) ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಐಪಿಎಲ್ 2022ರ ಮೊದಲ ಫ್ಲೇ ಆಫ್ ತಂಡವಾಗಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟನ್ಸ್ ತಲುಪಿತ್ತು. ತದನಂತರದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಫ್ಲೇ ಆಫ್ ಹಂತಕ್ಕೆ 2ನೇ ತಂಡವಾಗಿ ತಲುಪಿತು. ಇಂದು ಗೆದ್ದ ತಂಡ ನೇರವಾಗಿ ಫೈನಲ್ ತಲುಪಿದರೆ, ಸೋತ ತಂಡಕ್ಕೆ ಇನ್ನೊಂದು ಅವಕಾಶವಿರಲಿದೆ. ಹಾಗಿದ್ದರೆ ಮೊದಲು ಫೈನಲ್ ಗೆ ಯಾವ ತಂಡ ತಲುಪಲಿದೆ, ಉಭಯ ತಂಡಗಳ ಬಲಾಬಲ ಹೇಗಿದೆ ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ ಮೊದಲ ಫ್ಲೇ ಆಫ್​ ನ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಇನ್ನು, ಈ ಬಾರಿಯ ಮೊದಲ ಐಪಿಎಲ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಈ ಪಿಚ್ ಹೆಚ್ಚು ಬ್ಯಾಟಿಂಗ್​ ಸ್ನೇಹಿ ಆಗಲಿದೆ. ಅದರೂ ಸ್ಪಿನ್ನರ್ ಗಳಿಗೂ ಹೆಚ್ಚು ಸಹಾಯಕವಾಗಲಿದೆ. ಆದ್ದರಿಂದ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಫ್ಲೇ ಆಫ್ ನಲ್ಲಿ RCB ತಂಡಕ್ಕೆ ಲಕ್ನೋ ಸವಾಲ್, ಬೆಂಗಳೂರು ತಂಡಕ್ಕೆ ಇವರುಗಳೇ ವಿಲನ್

GT vs RR ಹೆಡ್ ಟು ಹೆಡ್:

ಇನ್ನು, ಲೀಗ್ ಹಂತದಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ್ ತಂಡದ ವಿರುದ್ಧ 37 ರನ್ ಗಳ ಜಯ ದಾಖಲಿಸಿತ್ತು.

ಗೆದ್ದ ತಂಡ ನೇರವಾಗಿ ಫೈನಲ್:

ಇಂದಿನ ಪಂದ್ಯದಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ತಂಡಗಳು ಸೆಣಸಾಡಲಿವೆ. ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಆದರೆ ಸೋತ ತಂಡಕ್ಕೆ ಇನ್ನೊಂದು ಅವಕಾಶ ಇರಲಿದೆ. ಸೋತ ತಂಡವು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಎಲಿಮಿನೇಟರ್ ಪಂದ್ಯದಲ್ಲಿ ಆಡಬೇಕಾಗುತ್ತದೆ. ಹೀಗಾಗಿ ಉಭಯ ತಂಡಗಳು ಇಂದಿನ ಪಂದ್ಯ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಲು ಯೋಚಿಸುತ್ತಿದೆ.

ಮಳೆ ಬಂದಲ್ಲಿ ಏನಾಗಲಿದೆ ಪಂದ್ಯ?:

ಇಂದು ಕೋಲ್ಕತ್ತಾದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಒಂದು ವೇಳೆ ಮಳೆ ಆದಲ್ಲಿ ಸೂಪರ್ ಓವರ್ ಅಥವಾ ಅವಕಾಶವಿದ್ದಲ್ಲಿ ಪ್ರತಿ ತಂಡಗಳಿಗೂ 5 ಓವರ್ ಗಳ ಪಂದ್ಯ ಆಡಿಸುವ ಅವಕಾಶ ಐಪಿಎಲ್ ನಿಯಮದಲ್ಲಿದೆ. ಇದಲ್ಲದೇ ಸಂಪೂರ್ಣ ಮಳೆಯಿಂದ ಪಂದ್ಯ ರದ್ಧಾದಲ್ಲಿ ಲೀಗ್ ಹಂತದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 CSK vs RR: ಫ್ಲೇ ಆಫ್ ಹಂತಕ್ಕೆ ತಲುಪಿದ ರಾಜಸ್ಥಾನ್, ಅಂತಿಮ ಪಂದ್ಯದಲ್ಲಿಯೂ ಸೋತ ಸಿಎಸ್​ಕೆ

GT vs RR ಸಂಭಾವ್ಯ ತಂಡ:

ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (C), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ.

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಚಾಹಲ್, ಮೆಕಾಯ್.
Published by:shrikrishna bhat
First published: