ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 71ನೇ ಪಂದ್ಯ ಮತ್ತು ಫ್ಲೇ ಆಫ್ ನ ಮೊದಲ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ (GT) ಮತ್ತು ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾದವು. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ನಡೆಯಿತು. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ನ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡವು 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಜಯದ ನಗೆ ಬೀರುವ ಮೂಲಕ ಐಪಿಎಲ್ 2022ರ ಫೈನಲ್ ತಲುಪಿದ ಮೊದಲ ತಂಡವಾಯಿತು.
ಮತ್ತೆ ಅಬ್ಬರಿಸಿದ ಬಟ್ಲರ್:
ಇನ್ನು, ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ರಾಜಸ್ಥಾನ್ ಪರ ಅಬ್ಬರಿಸಿದ ಜೋಸ್ ಬಟ್ಲರ್ ಕೇವಲ 56 ಎಸೆತದಲ್ಲಿ 2 ಸಿಕ್ಸ್ ಮತ್ತು 12 ಪೋರ್ ಗಳ ನೆರವಿನಿಂದ 89 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶ್ಸವಿಯಾದರು. ಉಳಿದಂತೆ, ನಾಯಕ ಸಂಜು ಸ್ಯಾಮ್ಸನ್ 47 ರನ್, ದೇವ್ದತ್ ಪಡಿಕಲ್ 28 ರನ್, ಜೈಸ್ವಾಲ್ 3 ರನ್, ಹಿಟ್ ಮಾಯರ್ 4 ರನ್, ರಿಯಾನ್ ಪರಾಗ್ 4 ರನ್ ಮತ್ತು ರವಿಚಂದ್ರನ್ ಅಶ್ವೀನ್ 2 ರನ್ ಗಳಸಿವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾದರು.
ಬೌಲಿಂಗ್ ನಲ್ಲಿ ಎಡವಿದಿ ಪಾಂಡ್ಯ ಪಡೆ:
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್ ತಂಡವು, ಬೌಲಿಂಗ್ ನಲ್ಲಿ ವಿಫಲವಾಯಿತು. ಗುಜರಾತ್ ಟೈಟನ್ಸ್ ಪರ ಮೊಹ್ಮದ್ ಶಮಿ, ಯಶ್ ದಯಾಳ್, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರವಿಶ್ರೀನಿವಾಸನ್ ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಆದರೆ ರಾಜಸ್ಥಾನ್ ತಂಡದ ಬ್ಯಾಟ್ಸ್ಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾದರು.
ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ 189 ರನ್ ಗಳ ಟಾರ್ಗೇಟ್ ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡವು 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಜಯದ ನಗೆ ಬೀರಿತು. ಟೈಟನ್ಸ್ ಆರಂಭಿಕರಾದ ವೃದ್ಧಿಮಾನ್ ಸಾಹಾ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ನಂತರದಲ್ಲಿ ಶುಭಮನ್ ಗಿಲ್ 35 ರನ್, ಮ್ಯಾಥ್ಯೂ ವೇಡ್ 35 ರನ್ , ನಅಯಕ ಹಾರ್ದಿಕ್ ಪಾಂಡ್ಯ 40 ರನ್ ಡೇವಿಡ್ ಮಿಲ್ಲರ್ 68 ರನ್ ಗಳಿಸುವ ಮೂಲಕ ತಂಡವು ಅಂತಿಮವಾಗಿ ಗೆಲುವಿನ ನಗೆ ಬೀರಲುವಲ್ಲಿ ಪ್ರಮುಖ ಕಾರಣೀಕರ್ತರಾದರು. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡವು ಐಪಿಎಲ್ 2022ರ ಮೊದಲ ಫೈನಲ್ ಸ್ಪರ್ಧಿಯಾಗಿ ತಲುಪಿತು.
ಇನ್ನು, ರಾಜಸ್ಥಾನ್ ರಾಯಲ್ಸ್ ತಂಡವು 188 ರನ್ ಗಳ ಬೃಹತ್ ಮೊತ್ತ ಕಲೆಹಾಕಿದರೂ ಅದನ್ನು ಡಿಫೈಂಡ್ ಮಾಡಿಕೊಳ್ಳುವಲ್ಲಿ ಎಡವಿತು. ರಾಜಸ್ಥಾನ್ ಪರ ಯಾವೊಬ್ಬ ಬೌಲರ್ ಸಹ ಗುಜರಾತ್ ಅಬ್ಬರವನ್ನು ನಿ್ಲಿಸಲು ಆಗಲಿಲ್ಲ. ರಾಜಸ್ಥಾನ್ ರಾಯಲ್ಸ್ ಪರ ಟ್ರಂಟ್ ಬೋಲ್ಟ್ ಮತ್ತು ಒಬೆಡ್ ಮೆಕ್ಓಯ್ ತಲಾ ಒಂದುಯ ವಿಕೆಟ್ ಪಡೆದರಷ್ಟೇ ಈ ಮೂಲಕ ಎಲಿಮಿನೇಟರ್ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ತಂಡ ಆಡಬೇಕಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ