IPL 2022: ಐಪಿಎಲ್​ ನಲ್ಲಿ ಮೊಳಗಿದ ಕೆಜಿಎಫ್ ಹಾಡು, ದಾಖಲೆ ಬರೆದ ಟೀ ಶರ್ಟ್; ಇಲ್ಲಿದೆ ಐಪಿಎಲ್ ಸಮಾರೋಪ ಸಮಾರಂಭದ ಹೈಲೈಟ್ಸ್

ಐಪಿಎಲ್ 2022 ಸಮಾರೋಪ ಸಮಾರಂಭ ನಡೆಯುತ್ತಿದ್ದು, ಇದರಲ್ಲಿ ಸಿನಿ ಲೋಕದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇವರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (A. R. Rahman) ಮತ್ತು ಗಾಯಕಿ ನೀತಿ ಮೋಹನ್ ನೆರೆದ ಪ್ರೇಕ್ಷಕರನ್ನು ರಂಜಿಸಿದರು.

GT vs RR

GT vs RR

  • Share this:
ರಾಜಸ್ಥಾನ್ ರಾಯಲ್ಸ್ ಮತ್ತು ಲೀಗ್‌ನ ಹೊಸ ತಂಡ ಗುಜರಾತ್ ಟೈಟಾನ್ಸ್ (RR vs GT) ನಡುವಿನ ಐಪಿಎಲ್ (IPL) 15 ನೇ ಸೀಸನ್‌ನ ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಇನ್ನು, ಸಮಾರೋಪ ಸಮಾರಂಭ ನಡೆಯುತ್ತಿದ್ದು, ಇದರಲ್ಲಿ ಸಿನಿ ಲೋಕದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇವರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh), ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (A. R. Rahman) ಮತ್ತು ಗಾಯಕಿ ನೀತಿ ಮೋಹನ್ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಇದರ ನಡುವೆ ರಣವೀರ್ ಸಿಂಗ್ ಕನ್ನಡದ ಕೆಜಿಎಫ್ 2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು, ರೆಹಮಾನ್ ದೇಶಭಕ್ತಿ ಹಾಡಿನ ಮೂಲಕ ಕ್ರೀಡಾ ಪ್ರಪಂಚವನ್ನು ಮತ್ತೊಂದು ದಿಕ್ಕಿನೆಡೆ ಕರೆದುಕೊಂಡು ಹೋದರು.

ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ರವಿಶಾಸ್ತ್ರಿ:

ಇನ್ನು, ಐಪಿಎಲ್ 2022 ಸಮಾರೋಪ ಸಮಾರಂಭವನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆರಂಭಿಸಿದರು. ಅಲ್ಲದೇ ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಮತ್ತು ಪ್ರತಿ ವರ್ಷ ಐಪಿಎಲ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸುತ್ತಿರುವುದಕ್ಕೆ ಧನ್ಯವಾದವನ್ನು ತಿಳಿಸಿದರು. ಜೊತೆಗೆ ಗುಜರಾತ್ ಮತ್ತು ರಾಜಸ್ಥಾನ್ ತಂಡಗಳ ನಾಯಕರುಗಳು ಟ್ರೋಫಿಯೊಂದಿಗೆ ಸ್ವಾಗತಿಸಿ, ಶುಭಾಷಯ ಕೋರಿದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊಳಗಿದ ಕೆಜಿಎಫ್ ಹಾಡು:

ಸಮಾರೋಪ ಸಮಾರಂಭದಲ್ಲಿ ಮೊದಲಿಗೆ ಅದ್ಭುತವಾಗಿ ಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆಹಾಕಿದರು. ಕೈಯಲ್ಲಿ ಐಪಿಎಲ್ ಧ್ವಜ ಹಿಡಿದುಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಅವರು, ಪ್ರೇಕ್ಷಕರಲ್ಲಿನ ಜೋಶ್​ ಅನ್ನು ಇಮ್ಮಡಿಗೊಳಿಸಿದರು. ಇದರ ನಡುವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಜಿಎಫ್ 2 ಚಿತ್ರದ ಹಾಡು ಮೊಳಗಿದ್ದು, ರಣವೀರ್ ಸಿಂಗ್ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ‘ ಮತ್ತು ಥೀಮ್​ ಸಾಂಗ್​ ಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಮೂಲಕ ಐಪಿಎಲ್​ ನಲ್ಲಿಯೂ ರಾಕಿ ಭಾಯ್ ಹವಾ ಆದಂತಾಗಿದೆ.

ಇದನ್ನೂ ಓದಿ: IPL ಸಮಾರೋಪ ಸಮಾರಂಭದಲ್ಲಿ ಬಾಲಿವುಡ್​ ತಾರೆಯರ ಜೊತೆ ಕರ್ನಾಟಕ, ಜಾರ್ಖಂಡ್‌ನ ಜಾನಪದ ಕಲಾ ಪ್ರದರ್ಶನ

ಐಪಿಎಲ್​ ನಲ್ಲಿ ದಾಖಲೆ ಬರೆದ ಟೀ ಶರ್ಟ್:

ವೇದಿಕೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಂಡಳಿ ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಉಪಸ್ಥಿತರಿದ್ದರು. ಏತನ್ಮಧ್ಯೆ, ಕ್ರೀಡಾಂಗಣದಲ್ಲಿ ಅತಿದೊಡ್ಡ ಟಿ-ಶರ್ಟ್ ಅನ್ನು ಹಾಕಲಾಗಿತ್ತು. ಅದರ ಉದ್ದವು 66 ಮೀಟರ್ ಇದ್ದು, ಈ ಮೂಲಕ ಐಪಿಎಲ್​ ನಲ್ಲಿ ಗಿನ್ನಿಸ್ ದಾಖಲೆಯೊಂದು ಸೃಷ್ಟಿಯಾಗಿದೆ.

ಭಾರತೀಯ ಕ್ರಿಕೆಟ್‌ನ ಸುವರ್ಣ ಕ್ಷಣಗಳ ಸಾಕ್ಷ್ಯಚಿತ್ರ:

ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ನೀತಿ ಮೋಹನ್ ಅವರ ತಂಡವು 'ಮಾ ತುಜೆ ಸಲಾಮ್' ಮತ್ತು ವಂದೇ ಮಾತರಂ ಹಾಡಿನ ಮೂಲಕ ಕ್ರೀಡಾಂಗಣದಲ್ಲಿ ದೇಶಭಕ್ತಿಯನ್ನು ಸಾರಿದರು. ಅಲ್ಲದೇ ಒಂದು ವರದಿಯ ಪ್ರಕಾರ ಈ ವೇಳೆ ಮೈದಾನದಲ್ಲಿ ನೆರೆದಿದ್ದ ಸುಮಾರು 1 ಲಕ್ಷ ಜನರು ರೆಹಮಾನ್ ಜೊತೆ ವಂದೇ ಮಾತರಂ ಗೀತೆಗೆ ಧ್ವನಿ ಗೂಡಿಸಿದ್ದರು. ಇದಲ್ಲದೇ ರೆಹಮಾನ್ ಹಾಡಿನ ನಡುವೆಯೇ ಭಾರತೀಯ ಕ್ರಿಕೆಟ್ ನ ಮಹತ್ವದ ಕ್ಷಣಗಳ ಸಾಕ್ಷ್ಯಚಿತ್ರ ಬಿತ್ತರಿಸಲಾಗಿದೆ.

ಇದರಲ್ಲಿ 1983ರ ವಿಶ್ವಕಪ್ ಪ್ರಶಸ್ತಿ ಗೆಲುವು, ವೀರೇಂದ್ರ ಸೆಹ್ವಾಗ್ ಅವರ ತ್ರಿಶತಕ, ಸಚಿನ್ ತೆಂಡೂಲ್ಕರ್ ODI ದ್ವಿಶತಕ, 2011 ರಲ್ಲಿ ಭಾರತದ ODI ವಿಶ್ವಕಪ್ ಗೆಲುವು, 2013 ರಲ್ಲಿ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವು ಸೇರಿಂದತೆ ಟೀಂ ಇಂಡಿಯಾ ಕ್ರಿಕೆಟ್ ಜಗತ್ತಿನಲ್ಲಿ ನಡೆದುಬಂದ ಸುವರ್ಣ ಕ್ಷಣಗಳನ್ನು ಪರದೆಯ ಮೂಲಕ ಬಿತ್ತರಿಸಲಾಯಿತು. ಇನ್ನು, ಇಂದಿನ ಪಂದ್ಯ ವೀಕ್ಷಣೆಗೆ ಬಾಲಿವುಡ್​ ನಟ ಅಕ್ಷಯ್ ಕುಮಾರ್ ಆಗಮಿಸಿದ್ದು, ಅಮೀತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆಗಳಿವೆ.

ಟಾಸ್​ ಗೆದ್ದ ರಾಜಸ್ಥಾನ್ ರಾಯಲ್ಸ್:

ಪಂದ್ಯದ ಟಾಸ್ ಆಗಿದ್ದು, ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಇದನ್ನೂ ಓದಿ: IPL T20 League: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಐಪಿಎಲ್ ಅಪಾಯ; ಐಸಿಸಿ ಅಧ್ಯಕ್ಷರ ಶಾಕಿಂಗ್ ಹೇಳಿಕೆ

GT vs RR ಪ್ಲೇಯಿಂಗ್ ಇಲೆವೆನ್:

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆ), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ಸಿ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (wk/c), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಣಂದ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಹಾಲ್.
Published by:shrikrishna bhat
First published: