ಐಪಿಎಲ್ 2022 (IPL 2022) 15ನೇ ಸೀಸನ್ ಅಂತಿ ಘಟ್ಟ ತಲುಪಿದೆ. 74 ದಿನಗಳ ಸುದೀರ್ಘ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ಈ ಸೀಸನ್ 10 ಫ್ರಾಂಚೈಸಿಗಳು ಸ್ಪರ್ಧಿಸಿದ್ದವು ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಫೈನಲ್ ನಲ್ಲಿ ಸೆಣಸಾಡಲಿವೆ. ಅಹಮದಾಬಾದ್ ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿರುವ ಈ ಪಂದ್ಯಗಳ ಟಿಕೆಟ್‌ಗಳನ್ನು ಬಿಸಿಸಿಐ (BCCI) ಈಗಾಗಲೇ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದೆ. ಕೊರೋನಾ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, ಬಿಸಿಸಿಐಗೆ 100 ಪ್ರತಿಶತ ಪ್ರೇಕ್ಷಕರ ನಡುವೆ ಪಂದ್ಯಗಳನ್ನು ನಡೆಸಲು ಅನುಮತಿಸಲಾಗಿದೆ. ಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಐಪಿಎಲ್ 2022 ರ ಸಮಾರೋಪ ಸಮಾರಂಭವು ಟಾಸ್‌ಗೆ ಒಂದು ಗಂಟೆ ಮೊದಲು ನಡೆಯಲಿದೆ ಎಂದು BCCI ಅಧಿಕೃತವಾಗಿ ತಿಳಿಸಿದೆ.
ಐಪಿಎಲ್ 2022 ಸಮಾರೋಪ ಸಮಾರಂಭ:
ಐಪಿಎಲ್ 2022 ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಪಂದ್ಯದ ಸಮಾರೋಪ ಸಮಾರಂಭ ಮುಗಿದ ನಂತರ ಪಂದ್ಯದ ಟಾಸ್ ಆಗಲಿದ್ದು, ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಸಮಾರೋಪ ಸಮಾರಂಭವನ್ನು ಬಿಸಿಸಿಐ ಅದ್ಧೂರಿಯಾಗಿ ಆಯೋಜಿಸಿದೆ. 3 ವರ್ಷಗಳ ನಂತರ ಸಮಾರೋಪ ಸಮಾರಂಭ ನಡೆಯದ ಕಾರಣ ಈ ಬಾರಿ ಅದ್ಧೂರಿಯಾಗಿ ನಡೆಸಲು ಸಿದ್ಧತೆಗಳು ನಡೆದಿವೆ. ಕೊರೋನಾದಿಂದ ಕಳೆದ ಎರಡು ವರ್ಷಗಳ ಐಪಿಎಲ್‌ನಲ್ಲಿ ಯಾವುದೇ ಸಂಭ್ರಮಾಚರಣೆ ನಡೆದಿಲ್ಲ.
ಸಮಾರೋಪ ಸಮಾರಂಭದಲ್ಲಿ ರಣವೀರ್ ಮತ್ತು ರೆಹಮಾನ್:
ಸಮಾರೋಪ ಸಮಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಮತ್ತು ಭಾರತದ ಮಾಜಿ ನಾಯಕರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಂಗೀತ ಮಾಂತ್ರಿಕ, ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ಸಂಜೆ ಸಹ ಇರಲಿದೆ. ಅದಲ್ಲದೇ ಸಮಾರೋಪ ಸಮಾರಂಭದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ಚೌ ನೃತ್ಯವೂ ವಿಶೇಷ ಆಕರ್ಷಣೆಯಾಗಿ ಪ್ರದರ್ಶನಗೊಳ್ಳಲಿದೆ. ಇದಕ್ಕಾಗಿ ಬಿಸಿಸಿಐ ಜಾರ್ಖಂಡ್‌ನ 10 ನೃತ್ಯ ನಿರ್ದೇಶಕರ ತಂಡವನ್ನು ಅಂತಿಮಗೊಳಿಸಿದೆ.
ಇದನ್ನೂ ಓದಿ: IPL Final 2022: ನಾಳಿನ IPL ಫೈನಲ್ ಪಂದ್ಯವನ್ನು ಹೀಗೆ ಉಚಿತವಾಗಿ ವೀಕ್ಷಿಸಿ
40 ನಿಮಿಷಗಳ ಕಾರ್ಯಕ್ರಮ:
ಸಮಾರಂಭವು ಸಂಜೆ 6.15ಕ್ಕೆ ಪ್ರಾರಂಭವಾಗುತ್ತದೆ ಮತ್ತು 40 ನಿಮಿಷಗಳವರೆಗೆ ಇರುತ್ತದೆ. ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ಮುಕ್ತಾಯವಾಗುತ್ತದೆ. ನಂತರ 7.30ಕ್ಕೆ ಉಭಯ ತಂಡಗಳ ನಾಯಕರು ಟಾಸ್‌ಗಾಗಿ ಮೈದಾನಕ್ಕೆ ಬರುತ್ತಾರೆ. ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ. ಸಮಾರೋಪ ಸಮಾರಂಭವು ವಿಶೇಷವಾಗಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: IPL 2022: ಐಪಿಎಲ್ ಬಹುಮಾನದ ಮೊತ್ತ ಎಷ್ಟು ಗೊತ್ತಾ? RCB ಗೆ ಸಿಕ್ಕ ಹಣವೆಷ್ಟು ಎಂದು ಗೊತ್ತಾದ್ರೆ ಶಾಕ್ ಆಗ್ತಿರಾ!
75 ವರ್ಷಗಳ ಭಾರತೀಯ ಕ್ರಿಕೆಟ್ ಜರ್ನಿ:
ಈ 75 ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಹೇಗೆ ಆಳ್ವಿಕೆ ನಡೆಸಿದೆ ಎಂಬುದನ್ನು ತೋರಿಸಲು ಬೃಹತ್ ಪರದೆಯ ಮೇಲೆ ಪ್ರಸ್ತುತಿಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಆರಂಭದಲ್ಲಿ, ಕೊರೋನಾದಿಂದಾಗಿ ಮುಕ್ತಾಯ ಸಮಾರಂಭವನ್ನು ನಡೆಸಬೇಕೇ ಎಂಬ ಸಂದಿಗ್ಧತೆಯಲ್ಲಿ ಬಿಸಿಸಿಐ ಇತ್ತು. ಆದರೆ ಕೊರೋನಾ ಪ್ರಕರಣಗಳು ಹೆಚ್ಚಿಲ್ಲದ ಕಾರಣ ಸಮಾರೋಪ ಸಮಾರಂಭವನ್ನು ನಡೆಸುವುದಾಗಿ ಬಿಸಿಸಿಐ ಘೋಷಿಸಿದೆ. ಇದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ. ನಾಳೆ ಅಂತಿಮವಾಗಿ 15ನೇ ಆವೃತ್ತಿಯ ಐಪಿಎಲ್ಗೆ ವಿದ್ಯಕ್ತವಾಗಿ ತೆರೆಬೀಳಲಿದ್ದು, ಅಭಿಮಾನಿಗಳ ಕಾತುರಕ್ಕೆ ನಾಳೆ ಉತ್ತರ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ