ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ (GT vs PBKS) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ (GT) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಗುಜರಾತ್ ಪರ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಮಿಂಚಿದರು. ಈ ಮೊತ್ತ ಬೆನ್ನತ್ತಿದ ಪಂಜಾಬ್ (PBKS) ತಂಡವು ನಿಗದಿತ 16 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಜಯ ದಾಖಲಿಸಿತು. ಈ ಮೂಲಕ ಗುಜರಾತ್ ತಂಡಕ್ಕೆ 2ನೇ ಸೋಲಾಯಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್:
ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಗುಜರಾತ್ ಪರ ಸಾಯಿ ಸುದರ್ಶನ್ 50 ಎಸೆತದಲ್ಲಿ 1 ಸಿಕ್ಸ್ ಮತ್ತು 5 ಪೋರ್ ಗಳ ನೆರವಿನಿಂದ ಆಕರ್ಷಕ 65 ರನ್ ಗಳಸಿ ಮಿಂಚಿದರು.
ಉಳಿದಂತೆ ಎಲ್ಲಾ ಬ್ಯಾಟ್ಸ್ಮನ್ ಗಳು ಪಂಜಾಬ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋದರು. ವೃದ್ಧಿಮಾನ್ ಸಾಹಾ 21 ರನ್, ಶುಭ್ಮನ್ ಗಿಲ್ 9 ರನ್, ನಾಯಕ ಹಾರ್ದಿಕ್ ಪಾಂಡ್ಯ 1 ರನ್, ಡೇವಿಡ್ ಮಿಲ್ಲರ್ 11 ರನ್, ರಾಹುಲ್ ತೇವಾಟಿಯಾ 11 ರನ್, ರಷಿಧ್ ಖಾನ್ ಶೂನ್, ಪ್ರದೀಪ್ ಸಾಂಗ್ವಾನ್ 2 ರನ್, ಲುಕಿ ಪರ್ಗ್ಯೂಸನ್ 5 ರನ್ ಮತ್ತು ಜೋಸೆಫ್ 4 ರನ್ ಗಳಸಿದರು.
ಇದನ್ನೂ ಓದಿ: MS Dhoni: ಕನ್ನಡಿಗನ ದಾಖಲೆ ಮುರಿದ ಧೋನಿ, ಹೊಸ ಸಾಧನೆ ಮಾಡಿದ ಕ್ಯಾಪ್ಟನ್ ಕೂಲ್
ಸಂಘಟಿತ ಬೌಲಿಂಗ್ ಮಾಡಿದ ಪಂಜಾಬ್:
ಪಂಜಾಬ್ ಪರ ಕಹೀಸೋ ರಬಾಡಾ 4 ಓವರ್ ಮಾಡಿ 33 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಗುಜರಾತ್ ತಂಡದ ಪತನಕ್ಕೆ ಕಾರಣರಾದರು. ರಬಾಡಾ ಕರಾರುವಕ್ ದಾಳಿಗೆ ಗುಜರಾತ್ ಬ್ಯಾಟರ್ ಗಳು ತತ್ತರಿಸಿ ಹೋದರು. ಉಳಿದಂತೆ ಆಶದೀಪ್ ಸಿಂಗ್, ರಿಷಿ ಧವನ್ ಮತ್ತು ಲಿವಿಂಗ್ಸ್ಟನ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಪಂಜಾಬ್ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ಗುಜರಾತ್ ತಂಡ ಸಾಧಾರಣ ಮೊತ್ತ ಕಲೆಹಾಕುವಂತಾಯಿತು.
ಅಬ್ಬರಿಸಿದ ಗಬ್ಬರ್ ಸಿಂಗ್:
ಇನ್ನು, ಗುಜರಾತ್ ನೀಡಿದ ಸಾಧಾರಣ ಮೊತ್ತ ಬೆನ್ನತ್ತಿದ ಪಂಜಾಬ್ ತಂಡ 19 ಓವರ್ ಗಳ್ಲಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಪಂಜಾಬ್ ಪರ ಗಬ್ಬರ್ ಸೀಮಗ್ ಖಾ್ಯತಿಯ ಶಿಖರ್ ಧವನ್ 53 ಎಸೆತದಲ್ಲಿ 1 ಸಿಕ್ಸ್ ಮತ್ತು 8 ಬೌಂಡರಿಗಳ ನೆರವಿನಿಂದ 62 ರನ್ ಗಳಸಿದರೆ, ರಅಜಪಕ್ಷೆ 28 ಎಸೆತದಲ್ಲಿ 1 ಸಿಕ್ಸ್ ಮತ್ತು 5 ಫೊರ್ ಮೂಲಕ 40 ರ್ನ ಗಳಸಿದರು. ಅಂತಿಮವಅಗಿ ಕ್ರಿಸ್ ಗೆ ಬಂದ ಲಿವೀಂಗ್ಸಟ್ನ್ ಕೇವಲ 10 ಎಸೆತದಲ್ಲಿ 3 ಸಿಕ್ಸ್ ಮತ್ತಿ 2 ಬೌಂಡರಿಗಲ ನೆರವಿನಿಂದ 30 ರನ್ ಗಳಿಸಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ: IPL 2022 LSG vs DC: ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಡೆಲ್ಲಿ, ಗೆಲುವಿನ ನಗೆಬೀರಿದ ಲಕ್ನೋ ತಂಡ
ಬೌಲಿಂಗ್ ನಲ್ಲಿ ಎಡವಿದ ಟೈಟನ್ಸ್:
ಇನ್ನು, ಬೌಲಿಂಗ್ ನಲ್ಲಿ ಇಂದು ಎಡವಿದ ಗುಜರಾತ್ ತಂಡವು, ಪಂಜಾಬ್ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವರಾದರು. ಗುಜರಾತ್ ಪರ ಮೊಹ್ಮದ್ ಶಮಿ ಮತ್ತು ಪಾರ್ಗ್ಯೂಸನ್ ತಲಾ 1 ವಿಕೆಟ ಪಡೆಯಲಷ್ಟೇ ಶಕ್ತರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ