IPL 2022 GT vs MI: ಬಲಿಷ್ಠ ಗುಜರಾತ್​ಗೆ ಮುಂಬೈ ಸವಾಲ್, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಸೀಸನ್​ ನ 51ನೇ ಪಂದ್ಯದಲ್ಲಿ ಇಂದು ಬಲಿಷ್ಠ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ (GT vs MI) ತಂಡಗಳು ಸೆಣಸಾಡಲಿವೆ.

GT vs MI

GT vs MI

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ ನ 51ನೇ ಪಂದ್ಯದಲ್ಲಿ ಇಂದು ಬಲಿಷ್ಠ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ (GT vs MI) ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ರೋಹಿತ್ (Rohit) ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದು ಅಷ್ಟು ಮುಖ್ಯ ಪಂದ್ಯವಾಗಿಲ್ಲದಿದ್ದರೂ ಕೊನೆಯ ಪಂದ್ಯಗಳನ್ನಾದರೂ ಗೆಲ್ಲುವ ವಿಶ್ವಾಸದಲ್ಲಿದೆ. ಅಂತೆಯೇ ಹಾರ್ದಿಕ್ ಪಾಂಡ್ಯ (Hardik pandya) ನೇತೃತ್ವದ ಗುಜರಾತ್ ಟೈಟನ್ಸ್ ತಂಡವು ಇಂದಿನ ಪಂದ್ಯವನ್ನು ಗೆದ್ದು, ಪ್ಲೇ ಆಪ್ ಸುತ್ತಿಗೆ ಮೊದಲ ತಂಡವಾಗಿ ಎಂಟ್ರಿ ಕೊಡಲು ಕಾತುರದಿಂದ ಕಾಯುತ್ತಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲಾ ಏನಿದೆ ಎಂದು ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 51ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಬ್ರಬೋರ್ನ್ ಸ್ಟೇಡಿಯಂ ಹೆಚ್ಚು ಬ್ಯಾಟರ್​ ಗಳಿಗೆ ಅನುಕೂಲವಾಗುವಂತಿದ್ದು, ಹೆಚ್ಚಿನ ರನ್ ಹರಿದುಬರುವ ನಿರೀಕ್ಷೆಯಿದೆ. ಹೀಗಾಗಿ ಇ ಂದು ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ತೆಗದುಕೊಳ್ಳುವ ಸಾಧ್ಯತೆ ಇದ್ದು, ಹೆಚ್ಚು ರನ್ ಕಲೆಹಾಕುವ ಸಾಧ್ಯತೆಗಳೂ ಇವೆ.

GT vs MI ಹೆಡ್ ಟು ಹೆಡ್:

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಯಾವುದೇ ರೀತಿಯ ಹಣಾಹಣಿಗಳ ಅಂಕಿಅಂಶ ಇಲ್ಲವಾಗಿದೆ. ಆದರೆ ಈ ಬಾರಿ ಐಪಿಎಲ್ ನಲ್ಲಿ ಉಭಯ ತಂಡಗಳ ಪ್ರದರ್ಶನ ಇಂದಿನ ಪಂದ್ಯಕ್ಕೆ ಹೆಚ್ಚು ಸಂಬಂಧದಿಮದ ಕೂಡಿರುತ್ತದೆ.

ಇದನ್ನೂ ಓದಿ: IPL 2022 RCB vs CSK: ಚೆನ್ನೈ ಪರ ಹೊಸ ದಾಖಲೆ ನಿರ್ಮಿಸಿದ ಕ್ಯಾಪ್ಟನ್ ಕೂಲ್ ಧೋನಿ

ಉಭಯ ತಂಡಗಳ ಐಪಿಎಲ್ 2022ರಲ್ಲಿ ಪ್ರದರ್ಶನ:

ಇನ್ನು, ಉಭಯ ತಂಡಗಳಲ್ಲಿ ಹೆ್ಚು ಬಿಷ್ಠವಾಗಿ ಈ ಬಾರಿ ಗುಜರಾತ್ ತಂಡ ಕಾಣುತ್ತಿದೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ ಒಟ್ಟು 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಕೇವಲ 2ರಲ್ಲಿ ಸೋಲುವ ಮೂಲಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೇ ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಪ್ ಸುತ್ತಿಗೆ ಮೊದಲ ತಂಡವಾಗಿ ಎಂಟ್ರಿ ಕೊಡಲು ಕಾತುರದಿಂದ ಕಾಯುತ್ತಿದೆ. ಆದರೆ ಇತ್ತ ಮುಂಬೈ ಇಂಢಿಯನ್ಸ್ ಈ ಬಾರಿ ತೀರಾ ಕಳಪೆ ಪ್ರದರ್ಶನದಿಂದ ಆಡಿರುವ ಒಟ್ಟು 9 ಪಂದ್ಯಗಳಲ್ಲಿ 8ರಲ್ಲಿ ಸೋತು ಕೇವಲ 1ರಲ್ಲಿ ಗೆಲ್ಲುವ ಮೂಲಕ ಐಪಿಎಲ್ 2022ರ ಲೀಗ್ ಹಂತದಿಂದಲೇ ಹೊರನಡೆಯುತ್ತಿದೆ. ಇಂದಿನ ಪಂದ್ಯ ಔಪಚಾರಿಕ ಪಮದ್ಯ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ: IPL 2022: ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಬಿಡುಗಡೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ

GT vs MI ಸಂಭಾವ್ಯ ತಂಡ:

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (wk), ರೋಹಿತ್ ಶರ್ಮಾ (c), ಟಿಮ್ ಡೇವಿಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್

ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (WK), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (c), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ
Published by:shrikrishna bhat
First published: