IPL 2022 GT vs MI: ಸತತ 2ನೇ ಸೋಲು ಕಂಡ ಗುಜರಾತ್, ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್

ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು. ಈ ಮೂಲಕ ಮುಂಬೈ ತಂಡ 5 ರನ್ ಗಳ ಗೆಲುವನ್ನು ದಾಖಲಿಸಿತು.

ಮುಂಬೈ ತಂಡಕ್ಕೆ ಗೆಲುವು

ಮುಂಬೈ ತಂಡಕ್ಕೆ ಗೆಲುವು

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 51ನೇ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ (GT) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು. ಈ ಮೂಲಕ ಮುಂಬೈ ತಂಡ 5 ರನ್ ಗಳ ಗೆಲುವನ್ನು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ:

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಸಿತು. ಮುಂಬೈ ಪರ ಓಪನರ್​ ಗಳು ಉತ್ತಮವಾಗಿ ಬ್ಯಾಟ್ ಬೀಸಿದರು. ಇಶಾನ್ ಕಿಶನ್ 45 ರನ್, ರೋಹಿತ್ ಶರ್ಮಾ 43 ರನ್ ಮತ್ತು ಟೀಂ ಡೇವಿಡ್ 44 ರನ್ ಗಳಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾದರು. ಉಳಿದಂತೆ ಸೂರ್ಯಕುಮಾರ್ ಯಾದವ್ 13 ರನ್, ತಿಲಕ್ ವರ್ಮಾ 21 ರನ್, ಕಿರಾನ್ ಪೊಲಾರ್ಡ್ 4 ರನ್, ಡ್ಯಾನಿಶ್ ಸ್ಯಾಮ್ಸ್ ಮತ್ತು ಮುರುಗನ್ ಅಶ್ವೀನ್ ಶೂನ್ಯ ಸುತ್ತಿದರು.

ಉತ್ತಮ ಬೌಲಿಂಗ್ ಮಾಡಿದ ಗುಜರಾತ್:

ಗುಜರಾತ್ ಟೈಟನ್ಸ್ ತಂಡದ ಪರ ಸಂಘಟಿತ ಬೌಲಿಂಗ್ ಮಾಡುವ ಮೂಲಕ ಮುಂಬೈ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಗುಜರಾತ್ ತಂಡದ ಪರ ರಶೀಧ್ ಖಾನ್ 2 ವಿಕೆಟ್, ಅಲ್ಜಮರ್ ಜೋಸೆಪ್, ಲುಕಿ ಪರ್ಗ್ಯೂಸನ್, ಮತ್ತು ಪ್ರದೀಪ್ ಸಾಂಗ್ವಾನ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: IPL 2022 David Warner: ಧೋನಿ, ಕೊಹ್ಲಿ ದಾಖಲೆಗಳನ್ನೂ ಹಿಂದಿಕ್ಕಿದ ಡೇವಿಡ್ ವಾರ್ನರ್

ಟೈಟನ್ಸ್ ಪರ ಉತ್ತಮ ಓಪನಿಂಗ್:

ಇನ್ನು, ಮುಂಬೈ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡಕ್ಕೆ ಉತ್ತಮ ಆರಂಬ ದೊರಕಿತು. ಮೊದಲ ಜೊತೆಯಾಟದಲ್ಲಿಯೇ 106 ರನ್ ಗಳಸಿವ ಮೂಲಕ ಗೆಲುವಿನ ಸನೀಹಕ್ಕೆ ತಂಡವನ್ನು ಓಪನರ್ ಗಳು ತಂದು ನಿಲ್ಲಿಸಿದ್ದರು. ಆರಂಭಿಕರಾದ ವೃದ್ಧಿಮಾನ್ ಸಾಹಾ 55 ಮತ್ತು ಶುಭಂ ಗಿಲ್ 52 ರನ್ ಗಳಿಸುವ ಮೂಲಕ ಇಬ್ಬರೂ ಆಕರ್ಷಕ ಅರ್ಧಶತಕ ಗಳಸಿದರು. ಉಳಿದಂತೆ ನಂತರದಲ್ಲಿ ಬ್ಯಾಟಿಂಗ್​ ಗೆ ಬಂದಂತಹ ನಾಯಕ ಹಾರ್ಧಿಕ್ ಪಾಂಡ್ಯ 24 ರನ್, ಸಾಯಿ ಸುದರ್ಶನ್ 14 ರನ್, ಡೇವಿಡ್ ಮಿಲ್ಲರ್ 19 ರನ್ ಮತ್ತು ರಾಹುಲ್ ತೇವಾಟಿಯಾ 3 ರನ್ ಗಳಿಸಿದರೂ ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರುವಲ್ಲಿ ವಿಫಲರಾದರು.

ಇದನ್ನೂ ಓದಿ: IPL 2022: ಐಪಿಎಲ್ ಇತಿಹಾಸದಲ್ಲಿ 2ನೇ ಅತಿ ವೇಗದ ಬಾಲ್ ಮಾಡಿದ ಭಾರತೀಯ ಬೌಲರ್

ಸಂಘಟಿತ ಬೌಲಿಂಗ್ ಮಾಡಿದ ಮುಂಬೈ

ಇನ್ನು, ಉತ್ತಮ ಮೊತ್ತ ಗಳಸಿದರೂ ಬೌಲಿಂಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಎಡವಿತು. ಯಾರೊಬ್ಬ ಬೌಲರ್ ಸಹ ಮುಂಬೈ ಪರ ಉತ್ತಮ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನು, ಮುಂಬೈ ಇಂಡಿಯನ್ಸ್ ಪರ ಮುರುಗನ್ ಅಶ್ವೀನ್ 2 ವಿಕೆಟ್ ಮತ್ತು ಕಿರಾನ್ ಪೋಲಾರ್ಡ್ 1 ವಿಕೆಟ್ ಪಡೆದರೆ ಜಸ್ಪ್ರಿತ್ ಬೂಮ್ರಾ 4 ಓವರ್ ಗೆ 48 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಆದರೂ ಅಂತಿಮ ಓವರ್ ನಲ್ಲಿ ಡೇನಿಯಲ್ ಸ್ಯಾಮ್ಸ್ ಕರಾರುವಕ್ ದಾಳಿಗೆ ಮುಂಬೈ ತಂಡ ಗೆಲುವಿನ ನಗೆ ಬೀರಿತು.
Published by:shrikrishna bhat
First published: