IPL 2022: ಐಪಿಎಲ್​ನ ಮೊದಲ ವಾರದಲ್ಲಿ ದಾಖಲಾದ ವಿಶೇಷ ದಾಖಲೆಗಳು..!

ಈ ವಾರದ ಅಂತ್ಯದಲ್ಲಿಯೇ ಸುಮಾರು ದಾಖಲೆಗಳು ಸೃಷ್ಟಿಯಾಗಿದೆ. ಹಾಗಾದರೆ ಈ ವಾರದಲ್ಲಿ ನಿರ್ಮಾಣವಾದ ದಾಖಲೆಗಳು ಯಾವುವೆಂದು ನೋಡೋಣ ಬನ್ನಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಪಿಎಲ್ 2022ರ ಸೀಸನ್ 15 (IPL 2022) ಆರಂಭವಾಗಿ 10 ಪಂದ್ಯಗಳು ಮುಗುದಿವೆ. ಪ್ರತಿ ಪಂದ್ಯದಿಮದಲೂ ಐಪಿಎಲ್ (IPL) ಅಂಕಪಟ್ಟಿ ಬದಲಾಗುತ್ತಿದ್ದು, ಆಟಗಾರರು ಪರ್ಪಲ್​ ಕ್ಯಾಪ್ (Purple Cap), ಆರೆಂಜ್ ಕ್ಯಾಪ್​ಗಾಗಿ (Orange Cap) ಸಖತ್ ಪೈಪೋಟಿ ನಡೆಸುತ್ತಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್​ ತಂಡದ ಓಪನರ್ ಆಗಿರುವ ಇಶಾನ್ ಕಿಶನ್ ಬಳಿ ಆರೆಂಜ್ ಕ್ಯಾಪ್ ಇದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಉಮೇಶ್ ಯಾದವ್ ಬಳಿ ಪರ್ಪಲ್​ ಕ್ಯಾಪ್ ಇದೆ. ವಿಶೇಷವೆಂದರೆ ಸದ್ಯ ಪರ್ಪಲ್​ ಕ್ಯಾಪ್, ಆರೆಂಜ್ ಕ್ಯಾಪ್​ ಎರಡೂ ಸಹ ಭಾರತೀಯ (Indians) ಆಟಗಾರರ ಬಳಿಯೇ ಉಳಿದುಕೊಂಡಿದೆ. ಈ ನಡುವೆ ಪ್ರತಿಯೊಂದು ಪಂದ್ಯದಲ್ಲಿಯೂ ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದ್ದು, ಈ ವಾರದ ಅಂತ್ಯದಲ್ಲಿಯೇ ಸುಮಾರು ದಾಖಲೆಗಳು ಸೃಷ್ಟಿಯಾಗಿದೆ. ಹಾಗಾದರೆ ಈ ವಾರದಲ್ಲಿ ನಿರ್ಮಾಣವಾದ ದಾಖಲೆಗಳು ಯಾವುವೆಂದು ನೋಡೋಣ ಬನ್ನಿ.

ಐಪಿಎಲ್ 2022ರ ಮೊದಲ ವಾರದ ದಾಖಲೆಗಳು:

ಧೋನಿ ಅರ್ಧ ಶತಕ: ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೆಕೆಆರ್​ ವಿರುದ್ದ ಅರ್ಧಶತಕ ಬಾರಿಸುವ ಮೂಲಕ ಅರ್ಧಶತಕ ಬಾರಿಸಿದ ಮೂರನೇ ಅತಿ ಹಿರಿಯ ಬ್ಯಾಟರ್ ಎಂಬ ದಾಖಲೆಯನ್ನು ಮಾಡಿದ್ದಾರೆ. ಇವರು 40 ವರ್ಷ, 262 ದಿನಗಳ ವಯಸ್ಸಿನಲ್ಲಿರುವಾಗ ಅರ್ಧ ಶತಕ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್​ಗೆ ಸೋಲು: ಮುಂಬೈ ಇಂಡಿಯನ್ಸ್ ತಂಡವು​ 10ನೇ ಬಾರಿ ಐಪಿಎಲ್​ನ ಉದ್ಘಾಟನಾ ಪಂದ್ಯ ಸೋಲುವ ಮೂಲಕ ಕೆಟ್ಟ ದಾಖಲೆ ಬರೆದಿದೆ.

ರವೀಂದ್ರ ಜಡೇಜಾ: ಐಪಿಎಲ್​ನಲ್ಲಿ 200 ಪಂದ್ಯಗಳನ್ನಾಡಿದ ಬಳಿಕ ನಾಯಕನಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರವಿಂದ್ರ ಜಡೇಜಾ ಪಾತ್ರರಾಗಿದ್ದಾರೆ. ಈ ಮೂಲಕ ಅತೀ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ದಾಖಲೆಯನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2022 Record: ಟಿ20 ಅಲ್ಲಿ ಹೊಸ ದಾಖಲೆ ಬರೆದ ಧೋನಿ, ಬ್ರಾವೋ ಈಗ ನಂಬರ್ ಒನ್ ಬೌಲರ್

200+ ರನ್ ಚೇಸಿಂಗ್: ಪಂಜಾಬ್ ಕಿಂಗ್ಸ್ 2ನೇ ಬಾರಿ 206 ರನ್‌ಗಳನ್ನು ಚೇಸ್ ಮಾಡುವ ಮೂಲಕ ಅತಿ ಹೆಚ್ಚು ಬಾರಿ 200+ ರನ್ ರನ್​ ಅನ್ನು ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತಿ ಹೆಚ್ಚು ಬಾರಿ 200+ ರನ್ ಹೊಡೆದ ತಂಡ: RCB ತಂಡವು 21 ನೇ ಬಾರಿಗೆ 200+ ರನ್ ಹೊಡೆಯುವ ಮೂಲಕ ಐಪಿಎಲ್ ನಲ್ಲಿ ಅತಿಹೆಚ್ಚು ಬಾರಿ 200+ ರನ್ ಹೊಡೆದ ತಂಡ ಎಂಬ ದಾಖಲೆ ಮಾಡಿದೆ. ದಕ್ಕೂ ಮುನ್ನ ಈ ದಾಖಲೆ 20 ಬಾರಿ 200+ ರನ್​ ಬಾರಿಸಿದ CSK ಹೆಸರಿನಲ್ಲಿತ್ತು.

ಮಹೇಂದ್ರ ಸಿಂಗ್ ಧೋನಿ: ಟಿ20 ಕ್ರಿಕೆಟ್​ನಲ್ಲಿ 7000 ಸಾವಿರ ರನ್ ಪೂರೈಸುವ ಮೂಲಕ ಧೋನಿ ಟಿ20 ಕ್ರಿಕೆಟ್​ನಲ್ಲಿ 700 ರನ್ ಪೂರೈಸಿದ ಸಾಧನೆ ಮಾಡಿದ ಭಾರತದ 5ನೇ ಬ್ಯಾಟ್ಸ್​ಮನ್ ಎಂಬ ದಾಖಲೆ ಬರೆದರು.

ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್: 171 ವಿಕೆಟ್‌ ಪಡೆಯುವ ಮೂಲಕ ಐಪಿಎಲ್​ ನಲ್ಲಿ ಡ್ವೇನ್ ಬ್ರಾವೋ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಮಾಲಿಂಗ ಅವರ ದಾಖಲೆಯನ್ನು ಮುರಿದಿದ್ದಾರೆ.

ವೇಗವಾಗಿ 3000 ರನ್ ಪೂರೈಸಿದ ಆಟಗಾರ: ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ 94 ಇನ್ನಿಂಗ್ಸ್‌ಗಳಲ್ಲಿ 3000 IPL ರನ್‌ಗಳನ್ನು ಮಾಡುವ ಮೂಲಕ ವೇಗವಾಗಿ ಮೂರು ಸಾವಿರ ರನ್ ಪೂರೈಸಿದ 3ನೇ ಆಟಗಾರರಾಗಿದ್ದಾರೆ. ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಕ್ರಮವಾಗಿ 75 ಮತ್ತು 80 ಇನ್ನಿಂಗ್ಸ್ 3 ಸಾವಿರ ರನ್ ಪೂರೈಸಿದ್ದರು.

ಇದನ್ನೂ ಓದಿ: IPL 2022 - Umesh Yadav: ಐಪಿಎಲ್​ನಲ್ಲಿ ವಿನೂತನ ದಾಖಲೆ ಬರೆದ ಉಮೇಶ್ ಯಾದವ್, ಟಿ20 ಫಾರ್ಮ್​ಗೆ ಮತ್ತೆ ಕಂಬ್ಯಾಕ್!

ಉಮೇಶ್ ಯಾದವ್: ಇವರು 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವೇಗಿ ಎಂಬ ದಾಖಲೆ ಹಾಗೂ ಒಂದೇ ತಂಡದ ವಿರುದ್ಧ 33 ವಿಕೆಟ್ ಪಡೆಯುವ ಮೂಲಕ ಒಂದು ತಂಡದ ಎದುರು ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನೂ ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದಾರೆ.

ಹರ್ಷಲ್ ಪಟೇಲ್: ಕಳೆದ ಬಾರಿಯ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಐಪಿಎಲ್​ನಲ್ಲಿ ಸತತವಾಗಿ ಎರಡು ಮೇಡನ್‌ ಓವರ್​ಗಳನ್ನು ಎಸೆಯುವ ಮೂಲಕ ದಾಖಲೆ ಬರೆದಿದ್ದಾರೆ.

ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ಪರ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರ ಎಂಬ ದಾಖಲೆ ನಾಯಕ ಸಂಜು ಸ್ಯಾಮ್ಸನ್ ನಿರ್ಮಿಸಿದ್ದಾರೆ. ಆರ್‌ಆರ್‌ ಪರ ಸ್ಯಾಮ್ಸನ್ 110 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಶೇನ್ ವ್ಯಾಟ್ಸನ್ ಅವರ 109 ಸಿಕ್ಸರ್‌ಗಳ ದಾಖಲೆ ಮುರಿದು ಹಾಕಿದ್ದಾರೆ.
Published by:shrikrishna bhat
First published: