RCB ಗೆಲ್ಲಬೇಕು ಅಂದ್ರೆ ಕೊಹ್ಲಿನೇ ಬರಬೇಕಿಲ್ಲ.. ಈ ಸಲ ಇವ್ರಿಬ್ಬರು ರೊಚ್ಚಿಗೆದ್ರು ಅಂದ್ರೆ ಕಪ್​​ ನಮ್ದೆ ಬಾಸ್!

ಕಪ್​ ಒಂದನ್ನು ಬಿಟ್ಟು ಆರ್​ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಈ ಸಲನಾದರೂ ಆರ್​ಸಿಬಿ ಕಪ್​ ಗೆಲ್ಲಲ್ಲಿ ಎಂದು ಈಗಿನಿಂದಲೇ ದೇವರ ಮೊರೆ ಹೋಗಿದ್ದಾರೆ ಅಭಿಮಾನಿಗಳು(Fan). ಈ ಬಾರಿ ಆರ್​ಸಿಬಿಯಲ್ಲಿ ಸೂಪರ್​ ಮ್ಯಾನ್​ ಎಬಿಡಿ(Super Man ABD) ಇಲ್ಲದೇ  ಇರೋದು ಮತ್ತಷ್ಟು ಆತಂಕ ಮೂಡಿಸಿದೆ. 

ಫಾಫ್​ ಡು ಪ್ಲೆಸಿಸ್, ಅನೂಜ್​ ರಾವತ್​​

ಫಾಫ್​ ಡು ಪ್ಲೆಸಿಸ್, ಅನೂಜ್​ ರಾವತ್​​

  • Share this:
ಬೆಂಗಳೂರಿ(Bengaluru)ಗರಿಗೆ ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್​ಸಿಬಿ(RCB) ತಂಡ ಕಪ್(Cup)​ ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಇಂದಲ್ಲ, ನಾಳೆ ಅಥವಾ ಮುಂದೊಂದು ದಿನ ಅವರು ಗೆದ್ದೆ ಗೆಲ್ಲುತ್ತಾರೆ ಅನ್ನುವ ವಿಶ್ವಾಸದಲ್ಲಿ ಇದ್ದೇವೆ. ಆರ್​ಸಿಬಿ ಅನ್ನುವುದು ಕೇವಲ ತಂಡವಲ್ಲ. ಬೆಂಗಳೂರಿಗರ ಎಮೋಷನ್​(Emotion) ಅದು. ಈ ಬಾರಿ ಹೊಸ ಹುರುಪು, ಹೊಸ ನಾಯಕ(New Captain)ನೊಂದಿಗೆ ಆರ್​ಸಿಬಿ ಕಣಕ್ಕಿಳಿಯಲಿದೆ. ಕಳೆದ ಐಪಿಎಲ್​ ಸೀಸನ್​ಗಳಲ್ಲಿ ಫೈನಲ್(FInal)​ ಪ್ರವೇಶಸಿದ್ದರೂ ಕಪ್​ ಗೆಲ್ಲಲ್ಲು ಆರ್​ಸಿಬಿ ಆಟಗಾರರರಿಗೆ ಸಾಧ್ಯವಾಗಿರಲಿಲ್ಲ. ಕಪ್​ ಒಂದನ್ನು ಬಿಟ್ಟು ಆರ್​ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಈ ಸಲನಾದರೂ ಆರ್​ಸಿಬಿ ಕಪ್​ ಗೆಲ್ಲಲ್ಲಿ ಎಂದು ಈಗಿನಿಂದಲೇ ದೇವರ ಮೊರೆ ಹೋಗಿದ್ದಾರೆ ಅಭಿಮಾನಿಗಳು(Fan). ಈ ಬಾರಿ ಆರ್​ಸಿಬಿಯಲ್ಲಿ ಸೂಪರ್​ ಮ್ಯಾನ್​ ಎಬಿಡಿ(Super Man ABD) ಇಲ್ಲದೇ  ಇರೋದು ಮತ್ತಷ್ಟು ಆತಂಕ ಮೂಡಿಸಿದೆ. 

ವಿರಾಟ್​ ಕೊಹ್ಲಿ ಮೇಲೆ ಸಂಪೂರ್ಣ ಜವಾಬ್ದಾರಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಟೂರ್ನಿಯ ಎರಡನೇ ದಿನದಂದು ( ಮಾರ್ಚ್ 27 ) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೆಣಸಾಡುವ ಮೂಲಕ ತನ್ನ ಚೊಚ್ಚಲ ಪಂದ್ಯವನ್ನಾಡಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಲವಾರು ನೂತನ ಆಟಗಾರರ ಆಗಮನವಾಗಿದೆ. ಇಷ್ಟು ವರ್ಷಗಳ ಕಾಲ ಕ್ಯಾಪ್ಟನ್​ ಜವಾಬ್ದಾರಿ ಹೊತ್ತಿದ್ದ ವಿರಾಟ್​ ಕೊಹ್ಲಿ, ಈ ಸೀಸನ್​ನಲ್ಲೂ ಕ್ಯಾಪ್ಟನ್​ ಅಲ್ಲದಿದ್ದರೂ ತಂಡದ ಜವಾಬ್ದಾರಿಯನ್ನು ಹೊರಬೇಕಿದೆ.

ವಿರಾಟ್​ ಬದಲು ಇವ್ರಿಬ್ಬರು ಓಪೆನಿಂಗ್​ಗೆ ಬರಬೇಕಂತೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಡುವ ಬಳಗ ಯಾವ ರೀತಿ ಇರಬೇಕು, ಯಾವ ಆಟಗಾರರು ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಈ ಕುರಿತಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ತಂಡದ ಆರಂಭಿಕ ಆಟಗಾರರಾಗಿ ಫಾಫ್ ಡು ಪ್ಲೆಸಿಸ್ ಮತ್ತು ಯುವ ಕ್ರಿಕೆಟಿಗ ಅನೂಜ್ ರಾವತ್ ಕಣಕ್ಕಿಳಿಯಬೇಕು ಎಂದು ಅವರು ಹೇಳಿದ್ದಾರೆ. ಕಳೆದ ಬಾರಿ ಕಿಂಗ್​ ವಿರಾಟ್​ ಕೊಹ್ಲಿ ಹೆಚ್ಚಾಗಿ ಆರಂಭಿಕ ಆಟಗಾರನಾಗಿ ಕಣ್ಣಕ್ಕಿಳಿದಿದ್ದರು.

ಇದನ್ನೂ ಓದಿ: ಈ ಮೂರು ಕಾರಣಗಳು ಆರ್​ಸಿಬಿಗೆ ಮಾರಕವಾಗಲಿದ್ಯಂತೆ! ಸರಿಪಡಿಸಿಕೊಳ್ಳದಿದ್ರೆ ಈ ಬಾರಿಯ ಪ್ಲೇ ಆಫ್​ ಕನಸು ಭಗ್ನ?

ಯಾವ ಕ್ರಮಾಂಕದಲ್ಲಿ ಆಡ್ತಾರೆ ವಿರಾಟ್​ ಕೊಹ್ಲಿ?

ಈ ಬಾರಿ ಆರ್​ಸಿಬಿ ತಂಡಕ್ಕೆ ದೊಡ್ಡ ಹೊಡೆತ ಎಂದರೆ, ಅದು ಎಬಿಡಿ. ಎಬಿಡಿ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.ಎಂತಹ ಕಠಿಣ ಸಮಯದಲ್ಲೂ ಮೂರನೇ ಕ್ರಮಾಂಕ, ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿ ತಂಡವನ್ನು ಗೆಲ್ಲಿಸಿದ್ದಾರೆ. ಆದರೆ, ಈ ಬಾರಿ ಎಬಿಡಿ ಇಲ್ಲ. ಹೀಗಾಗಿ ಆ ಹೊಣೆ ವಿರಾಟ್​ ಕೊಹ್ಲಿ ಹೆಗಲ ಮೇಲಿದೆ. ಹೀಗಾಗಿ ವಿರಾಟ್​ ಆರಂಭಿಕ ಆಟಗಾರನಾಗಿ ಬರದೇ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕು ಎಂದು ವಾಸಿಂ ಜಾಫರ್​ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಐಪಿಎಲ್​ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದ ದಾಂಡಿಗರು..!

ಈ ಬಾರಿ ಆರ್​​ಸಿಬಿಯಲ್ಲಿ ಯಾವ ಯಾವ ಆಟಗಾರರಿದ್ದಾರೆ?

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್
Published by:Vasudeva M
First published: