IPL 2022: ಅವ್ರೊಬ್ರು ನಮ್​ ಜೊತೆ ಇದ್ರೆ ಸಾಕು.. ಗೇಮ್​ನಲ್ಲಿ ಫೋಕಸ್​ ಹೆಚ್ಚಾಗುತ್ತೆ ಎಂದಿದ್ದು ಯಾರಿಗೆ ಪಂತ್​​?

ತಂಡದ ನಾಯಕ(Captain)ರಾದ ರಿಷಭ್ ಅವರು ರಿಕಿ ಅವರ ಬಗ್ಗೆ ಏನ್ ಹೇಳಿದ್ರು ಅಂತ ನಿಮಗೆ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ..? ರಿಷಭ್ ಹೇಗೆ ತಂಡದ ಕೋಚ್(Team Coach) ರಿಕಿ ಪಾಂಟಿಂಗ್ ಅವರು ಯುವ ಆಟಗಾರರಲ್ಲಿ ನಿರೀಕ್ಷೆ ಮತ್ತು ಉತ್ಸಾಹದ ಭಾವನೆಯನ್ನು ಹೇಗೆ ತುಂಬುತ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ರಿಷಭ್​ ಪಂತ್​

ರಿಷಭ್​ ಪಂತ್​

  • Share this:
    ಇನ್ನೇನು ಇಂಡಿಯನ್ ಪ್ರಿಮಿಯರ್ ಲೀಗ್ (Indian Premier league) ನ 15ನೇ ಆವೃತ್ತಿಯು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಎಲ್ಲಾ ತಂಡಗಳು ತಮ್ಮ ಕಠಿಣವಾದ ಅಭ್ಯಾಸ(Practice)ದಲ್ಲಿ ತೊಡಗಿವೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಾಯಕ ರಿಷಭ್ ಪಂತ್(Rishbah Pant) ಅವರು ತಮ್ಮ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್(Ricky Ponting)ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ ನೋಡಿ. ತಂಡದ ನಾಯಕ(Captain)ರಾದ ರಿಷಭ್ ಅವರು ರಿಕಿ ಅವರ ಬಗ್ಗೆ ಏನ್ ಹೇಳಿದ್ರು ಅಂತ ನಿಮಗೆ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ..? ರಿಷಭ್ ಹೇಗೆ ತಂಡದ ಕೋಚ್(Team Coach) ರಿಕಿ ಪಾಂಟಿಂಗ್ ಅವರು ಯುವ ಆಟಗಾರರಲ್ಲಿ ನಿರೀಕ್ಷೆ ಮತ್ತು ಉತ್ಸಾಹದ ಭಾವನೆಯನ್ನು ಹೇಗೆ ತುಂಬುತ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

    ರಿಕ್ಕಿ ಪಾಂಟಿಗ್​ ಜೊತೆ ಚರ್ಚಿಸಿದ ರಿಷಭ್​ ಪಂತ್​!

    ಪಂತ್ ಭಾನುವಾರ ಈ ಆವೃತ್ತಿಯ ತಮ್ಮ ಮೊದಲ ಅಭ್ಯಾಸ ಸೆಷನ್‌ನಲ್ಲಿ ಪಾಂಟಿಂಗ್ ಅವರನ್ನು ಭೇಟಿಯಾದರು. ಆಸೀಸ್ ದಂತಕಥೆಯನ್ನು ಭೇಟಿಯಾಗುವುದು ಯಾವಾಗಲೂ ಒಬ್ಬ "ಕುಟುಂಬದ ಸದಸ್ಯರನ್ನು ಭೇಟಿ ಮಾಡಿದಂತೆ" ಅನಿಸುತ್ತದೆ ಎಂದು ಅವರು ಹೇಳಿದರು. ಡಿಸಿ ತಂಡದಲ್ಲಿರುವ ಯುವಕರು ಆಗಾಗ್ಗೆ ಪಾಂಟಿಂಗ್ ಅವರನ್ನು "ವಿಭಿನ್ನವಾಗಿ ಏನನ್ನಾದರೂ ಹೇಳಲು" ಮತ್ತು "ಎಲ್ಲರನ್ನೂ ಆಕರ್ಷಿಸಲು" ನೋಡುತ್ತಾರೆ. ಇದು ತಂಡದಲ್ಲಿನ ಒಂದು ಪರಿಸರವನ್ನು ಸಕಾರಾತ್ಮಕತೆಯಿಂದ ತುಂಬುತ್ತದೆ ಎಂದು ರಿಷಭ್ ಹೇಳಿದರು.

    ರಿಕ್ಕಿ ಪಾಂಟಿಗ್​ ಒಂದು ಶಕ್ತಿ ಇದ್ದಂತೆ ಎಂದ ರಿಷಭ್​!

    "ನಾನು ಅವರನ್ನು ಭೇಟಿಯಾದಾಗಲೆಲ್ಲಾ ಅದು ತುಂಬಾನೇ ವಿಶೇಷವಾಗಿರುತ್ತದೆ. ಇದು ಕುಟುಂಬದ ಸದಸ್ಯರನ್ನು ಭೇಟಿ ಮಾಡಿದಂತೆ. ಅವರು ಆಟದ ಮೈದಾನಕ್ಕೆ ಬಂದಾಗಲೆಲ್ಲಾ ಅವರು ಆ ಶಕ್ತಿಯನ್ನು ಎಲ್ಲರಲ್ಲೂ ತುಂಬುತ್ತಾರೆ. ಅವರು ವಿಭಿನ್ನವಾಗಿ ಏನನ್ನಾದರೂ ಹೇಳಲು ಬಯಸುತ್ತಾರೆ, ಅವರ ಮಾತಿನಿಂದ, ನಡೆಯಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ" ಎಂದು ಹೇಳಿದರು.

    ಇದನ್ನೂ ಓದಿ: CSK ಯಲ್ಲಿ ಫಾಫ್ ಡುಪ್ಲೆಸಿಸ್ ಸ್ಥಾನ ತುಂಬುವ ಆಟಗಾರ ಯಾರು? ಇರ್ಫಾನ್ ಪಠಾಣ್ ಉತ್ತರ ಓದಿ!

    ಆರಂಭಿಕ ಅಭ್ಯಾಸ ಸೆಷನ್‌ಗಳ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, "ಅಭ್ಯಾಸ ಸೆಷನ್‌ಗಳು ವಿಶೇಷವಾಗಿ ಹೊಸ ಆಟಗಾರರಿಗೆ ನೆಟ್ಸ್‌ನಿಂದ ಏನು ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ಪಂದ್ಯದಲ್ಲಿ ನಾವು ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಲು ನೋಡುತ್ತೇವೆ ಎಂದು ಅವರಿಗೆ ತಿಳಿಸಲು ನಾವು ವೈಯಕ್ತಿಕ ಮಟ್ಟದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದೇವೆ. ಒಂದು ತಂಡವಾಗಿ, ನಾವು ರಚಿಸಲು ಬಯಸುವ ತಂಡದ ಪರಿಸರದ ಬಗ್ಗೆ ನಾವು ಚರ್ಚೆಗಳನ್ನು ನಡೆಸುತ್ತಿದ್ದೇವೆ. ತಂಡದ ವಾತಾವರಣಕ್ಕೆ ಏನು ಒಳ್ಳೆಯದು ಎಂದು ಹೇಳಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.

    ಮುಂಬೈ ವಿರುದ್ಧ ಡೆಲ್ಲಿ ಮೊದಲ ಫೈಟ್​!

    ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುವ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಎರಡು ವರ್ಷಗಳ ನಂತರ ಐಪಿಎಲ್ ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಮರಳುವುದರ ಪರಿಣಾಮದ ಬಗ್ಗೆ ಮಾತನಾಡಿದ ಪಂತ್, ತವರಿನ ಪ್ರೇಕ್ಷಕರ ಮುಂದೆ ಆಡುವ ಭಾವನೆಯನ್ನು ಆನಂದಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದರು.

    ಇದನ್ನೂ ಓದಿ: ಬಯೋ ಬಬಲ್ ಪ್ರವೇಶಿಸಿದ ಕಿಂಗ್ ಕೊಹ್ಲಿ! ವೈರಲ್ ಫೋಟೊ ನೋಡಿ

    ಪಂತ್ ನಾಯಕತ್ವದಲ್ಲಿ ಎರಡನೇ ಆವೃತ್ತಿ!

    ಇದು ಪಂತ್ ನಾಯಕತ್ವದಲ್ಲಿ ಎರಡನೇ ಆವೃತ್ತಿಯಾಗಿದ್ದು, ಅವರು ಈಗ ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ತಮ್ಮ ಅದ್ಭುತ ಅಂತಾರಾಷ್ಟ್ರೀಯ ಫಾರ್ಮ್ ಅನ್ನು ಮರುಸೃಷ್ಟಿಸುವ ಭರವಸೆಯನ್ನು ಹೊಂದಿದ್ದಾರೆ.
    Published by:Vasudeva M
    First published: