IPL 2022: ಮೊದಲ ಪಂದ್ಯದಲ್ಲೇ ಧೋನಿಗೆ ಡಬಲ್ ಟೆನ್ಶನ್​.. ನಂಬಿಕೊಂಡಿದ್ದವರೇ ಕೈ ಕೊಟ್ರೆ ಹೇಗೆ ಆಗಬೇಡ ಹೇಳಿ!

ಮೊದಲ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ನಡುವೆ ಇದೆ, ಆದರೆ ಪಂದ್ಯಕ್ಕೂ ಮೊದಲು, MS ಧೋನಿ(Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡು ಪ್ರಮುಖ ಹಿನ್ನಡೆ ಅನುಭವಿಸಿದೆ

ಎಂ.ಎಸ್​.ಧೋನಿ

ಎಂ.ಎಸ್​.ಧೋನಿ

  • Share this:
ಮುಂಬೈ, ಮಾರ್ಚ್ 23: ಐಪಿಎಲ್ 2022 (IPl 2022) ಮಾರ್ಚ್ 26 ರಿಂದ ಆರಂಭವಾಗಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ನಡುವೆ ಇದೆ, ಆದರೆ ಪಂದ್ಯಕ್ಕೂ ಮೊದಲು, MS ಧೋನಿ(Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡು ಪ್ರಮುಖ ಹಿನ್ನಡೆ ಅನುಭವಿಸಿದೆ. ವೀಸಾ(Visa)ದ ಕಾರಣ ತಂಡದ ಆಲ್‌ರೌಂಡರ್ ಮೊಯಿನ್ ಅಲಿ(Moeen ali) ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ, ತಂಡದ ವೇಗದ ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಹಾರ್(Deepak Chahar) ಇನ್ನೂ ಫಿಟ್(Fit) ಆಗಿಲ್ಲ. ದೀಪಕ್ ಚಹಾರ್ ಅವರು ಫಿಟ್ ಆಗುವವರೆಗೆ ಮತ್ತು ಬಿಸಿಸಿಐನಿಂದ ಅನುಮತಿ ಪಡೆಯುವವರೆಗೆ ಎನ್‌ಸಿಎಂನಲ್ಲಿ ಉಳಿಯಲಿದ್ದಾರೆ.

ಗಾಯದ ಸಮಸ್ಯೆಯಿಂದ ಹೊರ ಉಳಿದ ದೀಪಕ್​ ಚಹಾರ್​!

ಕಳೆದ ತಿಂಗಳು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದ ವೇಳೆ ದೀಪಕ್ ಚಹಾರ್ ಗಾಯಗೊಂಡಿದ್ದರು. ದೀಪಕ್ ಅವರ ತೊಡೆಯ ಸ್ನಾಯುಗಳಿಗೆ ಗಾಯವಾಗಿತ್ತು. ಸದ್ಯ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎಂ) ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಾಜಿನಲ್ಲಿ ದೀಪಕ್ ಚಹಾರ್ ಅವರನ್ನು ಚೆನ್ನೈ 14 ಕೋಟಿ ರೂ.ಗೆ ಖರೀದಿಸಿತ್ತು.

ಮೊದಲ ಪಂದ್ಯದಲ್ಲೇ ಧೋನಿಗೆ ಹೆಚ್ಚಾಯ್ತು ಟೆನ್ಶನ್​!

ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಫಿಟ್ನೆಸ್ ಅನ್ನು ಬಿಸಿಸಿಐ ಅನುಮೋದಿಸುವವರೆಗೆ ದೀಪಕ್ ಚಹಾರ್ ಎನ್‌ಸಿಎಂನಲ್ಲಿ ಉಳಿಯುತ್ತಾರೆ ಎಂದು ಹೇಳಿದ್ದಾರೆ. ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಸಿಎಸ್ ಕೆ ಇದುವರೆಗೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಕಳೆದ ಋತುವಿನಲ್ಲಿ, ಅವರು CSK ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸಿದರು ಮತ್ತು ನಾಲ್ಕನೇ ಬಾರಿಗೆ ಚಾಂಪಿಯನ್ ಆದರು.

ಇದನ್ನೂ ಓದಿ: ಟೆನ್ಶನ್​ ಎಲ್ಲ ಬಿಟ್ಟಾಕಿ.. ಚಿಯರ್​ ಮಾಡೋಕೆ ರೆಡಿಯಾಗಿ.. ಗ್ರೌಂಡ್​ನಲ್ಲಿ ಮ್ಯಾಚ್​ ನೋಡೋಕೆ ಸಿಕ್ತು ಗ್ರೀನ್​ ಸಿಗ್ನಲ್​!

ಮೊಯಿನ್​ ಆಲಿಗೆ ಸಿಗದ ವೀಸಾ!

ಮಾರ್ಚ್ 26 ರಿಂದ ಮುಂಬೈನಲ್ಲಿ ಐಪಿಎಲ್ 15 ನೇ ಸೀಸನ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಮೊಯಿನ್​ಗೆ ಇನ್ನೂ ವೀಸಾ ಸಿಗದಿರುವುದು ಚೆನ್ನೈನ ಚಿಂತೆಗೆ ಕಾರಣವಾಗಿದೆ. ನಿರಂತರವಾಗಿ ಭಾರತಕ್ಕೆ ಪ್ರಯಾಣ ಬೆಳೆಸುವುದರ ನಡುವೆಯೂ ಮೊಯಿನ್​ಗೆ ವೀಸಾ ವಿಳಂಬವಾಗುತ್ತಿರುವುದು ಫ್ರಾಂಚೈಸಿಗೂ ಆಶ್ಚರ್ಯ ಉಂಟು ಮಾಡಿದೆ. ಇನ್ನೂ 8 ಕೋಟಿ ಕೊಟ್ಟು ಖರೀದಿ ಮಾಡಿರುವ ಚೆನ್ನೈ ಮ್ಯಾನೇಜ್​ಮೆಂಟ್​ಗೆ ಆತಂಕ ಶುರುವಾಗಿದೆ.

ಇದನ್ನೂ ಓದಿ: ದೇಶಕ್ಕಾಗಿ ಆಡದಿದ್ದರೂ ಸಹ IPL ನಲ್ಲಿ ಈ ಹುಡುಗರಿಗೆ ಬೇಡಿಕೆ ಸ್ವಲ್ಪ ಹೆಚ್ಚು!

8 ಕೋಟಿಗೆ ಚೆನ್ನೈ ಪಾಲಾಗಿದ್ದ ಮೊಯಿನ್ ಅಲಿ!

ಎಡಗೈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್ ಸ್ಪಿನ್ನರ್ ಮೊಯಿನ್ ಅಲಿ ತಮ್ಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ಚೆನ್ನೈ ನಾಲ್ಕನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.  ಕಳೆದ ವರ್ಷದ ಹರಾಜಿನಲ್ಲಿ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಈ ಇಂಗ್ಲೆಂಡ್ ಆಲ್ರೌಂಡರ್ ಅನ್ನು ರೂ 8 ಕೋಟಿಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಇದೀಗ ಆದಷ್ಟು ಬೇಗ ಅವರು ತಂಡವನ್ನು ಸೇರಿಕೊಳ್ಳುಲಿದ್ದಾರೆ ಎಂದು ಚೆನ್ನೈ ಮ್ಯಾನೆಂಜ್​ಮೆಂಟ್ ತಿಳಿಸಿದೆ.
Published by:Vasudeva M
First published: