ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 58ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RR vs DC) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ನವಿ ಮುಂಬೈನ DY ಪಾಟೀಲ್ (DY Patil) ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಇಂದಿನ ಪಂದ್ಯವು ತಂಡಗಳೆರಡಕ್ಕೂ ಹೆಚ್ಚು ಮಹತ್ವದ್ದಾಗಿದ್ದು, ಇಂದಿನ ಪಂದ್ಯ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇ ಆಫ್ (Play Off) ಹಂತವನ್ನು ಖಚಿತಪಡಿಸಿಕೊಳ್ಳಲು ಹವಣಿಸುತ್ತಿದೆ. ಇತ್ತ ಡೆ್ಲ್ಲಿ ಕ್ಯಾಪಿಟಲ್ಸ್ ತಂಡವು ಇಂದಿನ ಪಂದ್ಯ ಗೆಲ್ಲುವ ಮುಲಕ ಪ್ಲೇ ಆಫ್ ರೇಸ್ ನಲ್ಲಿ ಉಳಿದುಕೊಳ್ಳು ಪ್ರಯತ್ನಿಸುತ್ತಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿರಲಿದೆ ಮತ್ತು ಇಂದಿನ ಪಂದ್ಯದಲ್ಲಿ ಯಾವ ತಂಡಕ್ಕೆ ಹೆಚ್ಚಿನ ಗೆಲುವಿನ ನಿರೀಕ್ಷೆಯಿದೆ ಎಂಬುದನ್ನು ನೋಡೋಣ.
ಪಂದ್ಯದ ವಿವರ:
ಐಪಿಎಲ್ 2022ರ 58ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ನವಿ ಮುಂಬೈನ DY ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಪಿಚ್ ವರದಿ:
ನವಿ ಮುಂಬೈನ DY ಪಾಟೀಲ್ ಸ್ಟೇಡಿಯಂ ಹೆಚ್ಚು ಬೌಲರ್ ಗಳಿಗೆ ನೆರವಾಗಲಿದೆ. ಅಲ್ಲದೇ ಸಂಜೆಯ ಪಂದ್ಯವಾದ್ದರಿಂದ ತೇವಾಂಶ ಮತ್ತು ಇಬ್ಬನಿಯ ಪರಿಣಾಮ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಟಾಸ್ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: MS Dhoni: ಬ್ಯಾಟಿಂಗ್ಗೂ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಏಕೆ? ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಮಿಶ್ರಾ
RR vs DC ಹೆಡ್ ಟು ಹೆಡ್:
ಉಭಯ ತಂಡಗಳು ಆಡಿದ ಒಟ್ಟು ಪಂದ್ಯಗಳು: 25
RR ಗೆದ್ದ ಪಂದ್ಯಗಳು: 13
DC ಗೆದ್ದ ಪಂದ್ಯಗಳು: 12
DC ವಿರುದ್ಧ RR ಸರಾಸರಿ ಸ್ಕೋರ್: 155
RR ವಿರುದ್ಧ DC ಸರಾಸರಿ ಸ್ಕೋರ್: 151
ಕೊನೆಯ 5 ಪಂದ್ಯಗಳಲ್ಲಿ ಡೆಲ್ಲಿ 3 ಮತ್ತು ರಾಜಸ್ಥಾನ್ 2 ಪಂದ್ಯಗಳಲ್ಲಿ ಗೆದ್ದಿದೆ.
ಐಪಿಎಲ್ 2021ರಲ್ಲಿ ನಡೆದ 2 ಪಂದ್ಯದಲ್ಲಿ ಉಭಯ ತಂಡಗಳು ತಲಾ 1 ಪಂದ್ಯವನ್ನು ಗೆದ್ದಿದೆ.
ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:
ಉಭಯ ತಂಡಗಳು ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ರಾಜಸ್ಥಾನ್ ತಂಡವು ಈವರೆಗೆ ಆಡಿರುವ ಒಟ್ಟು 11 ಪಂದ್ಯದಲ್ಲಿ 7ರಲ್ಲಿ ಗೆದ್ದು, 4ರಲ್ಲಿ ಸೋತಿದೆ. ಈ ಮೂಲಕ ಐಪಿಎಲ್ 2022ರ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ಸಹ 11 ಪಂದ್ಯದಲ್ಲಿ 5ರಲ್ಲಿ ಗೆದ್ದು, 6ರಲ್ಲಿ ಸೋಲುವ ಮೂಲಕ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ ರೇಸ್ ನಲ್ಲಿ ಉಳಿದುಕೊಳ್ಳಲು ಡೆಲ್ಲಿ ಹವಣಿಸುತ್ತಿದ್ದರೆ, ಇತ್ತ ಇಂದಿನ ಪಂದ್ಯದ ಮೂಲಕ ಪ್ಲೇ ಆಫ್ ಹಂತವನ್ನು ಖಚಿತಗೊಳಿಸಿಕೊಳ್ಳಲು ರಾಜಸ್ಥಾನ್ ಎದುರು ನೋಡುತ್ತಿದೆ.
ಇದನ್ನೂ ಓದಿ: IPL 2022: RCB ತಂಡಕ್ಕೆ ಫೈನಲ್ ಟಿಕೆಟ್ ಕನ್ಫರ್ಮ್, 6 ವರ್ಷಗಳ ನಂತರ ವಿಶೇಷ ಯೋಗ!
RR vs DC ಸಂಭಾವ್ಯ ತಂಡ:
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ಡೇರಿಲ್ ಮಿಚೆಲ್ / ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ.
ಡೆಲ್ಲಿ ಕ್ಯಾಪಿಟಲ್ಸ್: ಕೆಎಸ್ ಭರತ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (c & wk), ರೋವ್ಮನ್ ಪೊವೆಲ್, ಅಕ್ಸರ್ ಪಟೇಲ್, ಲಲಿತ್ ಯಾದವ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ