ಟಾಟಾ IPL 2022 ರ 15ನೇ (Tata IPL 2022) ಆವೃತ್ತಿಯಲ್ಲಿ ಇಂದು 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್ (MI vs LSG) ಸೆಣಸಾಡಲಿವೆ. ಅದರಂತೆ 2ನೇ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ವಾಂಖೆಡೆ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಇನ್ನು, RCB ಈ ಋತುವಿನಲ್ಲಿ ಮೂರು ಬ್ಯಾಕ್-ಟು-ಬ್ಯಾಕ್ ಗೆಲುವುಗಳ ನಂತರ ಸಿಎಸ್ಕೆ ವಿರುದ್ಧ ಸೋತಿತು. ಆದರೆ ಡೆಲ್ಲಿ ತನ್ನ ಕೊನೆಯ ಪಂದ್ಯವನ್ನು ಗೆದ್ದು ಆತ್ನವಿಶ್ವಾಸದಲ್ಲಿದೆ. ಹೀಗಿರುವಾಗ ಉಭಯ ತಂಡಗಳ ಬಲಾಬಲ ಪ್ರಮುಖ ಅಂಶವಾಗುತ್ತದೆ. ಹಾಗಿದ್ದರೆ 2 ತಂಡಗಳ ಹೆಡ್ ಟು ಹೆಡ್ ಹೇಗಿದೆ ನೋಡೋಣ ಬನ್ನಿ.
ಪಂದ್ಯದ ವಿವರ:
ಇಂದಿನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂಬೈನ ವಾಂಖಡೆ ಮೈದಾನದಲ್ಲಿ ಸೆಣಸಾಡಲಿವೆ. ಭಾರತೀಯ ಕಾಲಮಾನ ಸಂಜೆ 7ಕ್ಕೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಪಿಚ್ ವರದಿ:
ವಾಂಖೆಡೆ ಸ್ಟೇಡಿಯಂ ಇಲ್ಲಿಯವರೆಗಿನ ಪಂದ್ಯಗಳಲ್ಲಿ ಬೌಲರ್ಗಳಿಗೆ ಉತ್ತಮವಾಗಿ ಸಹಾಯ ಮಾಡಿದೆ ಮತ್ತು ಇತರರಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆ ಸ್ಕೋರಿಂಗ್ ಪಿಚ್ ಆಗಿದೆ. ಆದಾಗ್ಯೂ, ಟಾಸ್ ಗೆದ್ದ ನಾಯಕ ಸಂಜೆಯ ನಂತರ ಬರಬಹುದಾದ ಇಬ್ಬನಿ ಅಂಶವನ್ನು ಪರಿಗಣಿಸಿ ಮೊದಲು ಬೌಲಿಂಗ್ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: IPL 2022: RCB - CSK ಪಂದ್ಯದ ಬಳಿಕ ಹೇಗಿದೆ ಐಪಿಎಲ್ ಅಂಕಪಟ್ಟಿ, ಯಾರ ಬಳಿಯಿದೆ ಆರೆಂಜ್, ಪರ್ಪಲ್ ಕ್ಯಾಪ್?
RCB vs DC ಹೆಡ್ ಟು ಹೆಡ್:
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ ಆಡಿದ ಒಟ್ಟು ಪಂದ್ಯಗಳು: 28
DC ಗೆದ್ದ ಪಂದ್ಯಗಳು: 10
RCB ಗೆದ್ದ ಪಂದ್ಯಗಳು: 17
ಭಾರತದಲ್ಲಿ ಆಡಿದ ಪಂದ್ಯಗಳು: 22 (DC 8, RCB 14)
ಯುಎಇಯಲ್ಲಿ ಆಡಿದ ಪಂದ್ಯಗಳು: 3 (DC 1, RCB 2)
RCB ವಿರುದ್ಧ DC ಸರಾಸರಿ ಸ್ಕೋರ್: 163
DC ವಿರುದ್ಧ RCB ಸರಾಸರಿ ಸ್ಕೋರ್: 154
DC ಪರ ಅತಿ ಹೆಚ್ಚು ರನ್: 311 ರಿಷಬ್ ಪಂತ್
RCB ಪರ ಅತಿ ಹೆಚ್ಚು ರನ್: 892 ವಿರಾಟ್ ಕೊಹ್ಲಿ
ಡೆಲ್ಲಿ ಪರ ಹೆಚ್ಚು ವಿಕೆಟ್: 10 ಕಗಿಸೊ ರಬಾಡ
ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್: 14 ಯುಜುವೇಂದ್ರ ಚಹಾಲ್
ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:
ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 3ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಅದರಂತೆ ಅಂಕಪಟ್ಟಿಯಲ್ಲಿ6ನೇ ಸ್ಥಾನದಲ್ಲಿದೆ. ಇನ್ನು, ಡೆಲ್ಲಿ ತಂಡವು 4 ಪಂದ್ಯದಲ್ಲಿ 2ರಲ್ಲಿ ಸೋತು 2ರಲ್ಲಿ ಗೆದ್ದು 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: IPL 2022 RR vs GT: ಬಲಿಷ್ಠ ರಾಜಸ್ಥಾನ್ ತಂಡಕ್ಕೆ ಗುಜರಾತ್ ಸವಾಲು, ಉಭಯ ತಂಡಗಳ ಪ್ಲೇಯಿಂಗ್ 11
RCB vs DC ಸಂಭಾವ್ಯ ತಂಡಗಳು:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ (ವಿಕೆ), ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್, ಸಿದ್ದಾರ್ಥ್ ಕೌಲ್.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್ (c & wk), ರೋವ್ಮನ್ ಪೊವೆಲ್/ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ