IPL 2022 DC vs MI: ಡೆಲ್ಲಿ ತಂಡಕ್ಕೆ ಮುಂಬೈ ಸವಾಲ್, ಇಂದಿನ ಪಂದ್ಯದ ಫಲಿತಾಂಶದ ಮೇಲೆ RCB ಫ್ಲೇ ಆಫ್ ಭವಿಷ್ಯ ನಿರ್ಧಾರ

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 69ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡಗಳು ಸೆಣಸಾಡಲಿವೆ.

MI vs DC

MI vs DC

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 69ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಇಂದಿನ ಪಂದ್ಯದ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದ್ದು, ಕುತೂಹಲಕಾರಿ ಪಂದ್ಯ ಇದಾಗಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದು ಔಪಚಾರಿಕವಾದರೂ ಟೂರ್ನಿಯ ಕೊನೆಯ ಪಂದ್ಯವನ್ನಾದರೂ ಗೆದ್ದು, ಟೂರ್ನಿಗೆ ವಿಧಾಯ ಹೇಳುವ ಸಾಧ್ಯತೆ ಇದೆ. ಆದರೆ ಇತ್ತ ಡೆಲ್ಲಿ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಪ್ಲೇ ಆಫ್ ಹಂತಕ್ಕೆ ಏರಲು ಡೆಲ್ಲಿ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆದರೆ ಡೆಲ್ಲಿ ಗೆಲುವು ಸೋಲಿನ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ಲೇ ಆಫ್ ನಿರ್ಧಾರವಾಗಲಿದೆ.

ಪಂದ್ಯದ ವಿವರ:

ಐಪಿಎಲ್ 2022ರ 69ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಮೈದಾನದಲ್ಲಿ ನಡೆದ ಕೊನೆಯ ಎರಡು ಪಂದ್ಯಗಳು ಬ್ಯಾಟಿಂಗ್‌ಗೆ ಅತ್ಯುತ್ತಮವಾಗಿವೆ ಮತ್ತು ಈ ಪಂದ್ಯಕ್ಕೂ ಅದೇ ರೀತಿ ನಿರೀಕ್ಷಿಸಬಹುದು. ಕಳೆದ ಕೆಲವು ಪಂದ್ಯಗಳಲ್ಲಿ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡುವುದು ಟ್ರೆಂಡ್ ಆಗಿದ್ದು, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಹೇಳಿಕೆಗೆ RCB ಅಭಿಮಾನಿಗಳ ಬೇಸರ, ಅಂತದೇನಂದ್ರು ಗೊತ್ತಾ ಹಿಟ್​ಮ್ಯಾನ್?

MI vs DC ಹೆಡ್ ಟು ಹೆಡ್:

ಈವರೆಗಿನ ಐಪಿಎಲ್ ನಲ್ಲಿ ಮುಂಬೈ ಮತ್ತು ಡೆಲ್ಲಿ ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 16 ಮತ್ತು ಡೆಲ್ಲಿ 15 ಬಾರಿ ಗೆಲುವು ಸಾಧಿಸುವ ಮೂಲಕ ಸಮಬಲದ ಹೋರಾಟ ನಡೆಸಿವೆ. ಹೀಗಾಗಿ ಇಂದಿನ ಪಂದ್ಯ ಮತ್ತಷ್ಟು ರೋಚಕವಾಗಿರಲಿದೆ ಎಂಬ ನಿರೀಕ್ಷೆಯಿದೆ.

ಇಂದಿನ ಪಂದ್ಯದ ಫಲಿತಾಂಶದ ಮೇಲೆ RCB ಭವಿಷ್ಯ:

ಹೌದು, ಈಗಾಗಲೇ ಗುಜರಾತ್, ರಾಜಸ್ಥಾನ್ ಮತ್ತು ಲಕ್ನೋ ತಂಡಗಳು ಫ್ಲೇ ಆಫ್ ತಲುಪಿದೆ. ಕ್ವಾಲಿಫೈಯರ್ ಹಂತಕ್ಕೆ ಇನ್ನೊಂದು ತಂಡದ ಅವಶ್ಯಕತೆ ಇದ್ದು, ರೇಸ್​ ನಲ್ಲಿ ಡೆಲ್ಲಿ ಮತ್ತು ಆರ್​ಸಿಬಿ ತಂಡ್ಗಳು ಇವೆ. ಈಗಾಗಲೇ 14 ಅಂಕಗಳೊಂದಿಗೆ ಡೆಲ್ಲಿ 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದಲ್ಲಿ 16 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಜಿಗಿದು ಪ್ಲೇ ಆಫ್ ತಲುಪಲಿದೆ. ಆದರೆ ಡೆಲ್ಲಿ ಗೆದ್ದಲ್ಲಿ ಆರ್​ಸಿಬಿ ತಂಡ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಹೌದು, ಆರ್​ಸಿಬಿ 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, ಡೆಲ್ಲಿ ಗೆದ್ದರೆ 16 ಅಂಕಗೊಂದಿಗೆ ಎರಡೂ ತಂಡಗಳು ಸಮಬಲ ಸಾಧಿಸುತ್ತದೆ. ಆಗ ರನ್ ರೇಟ್ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಇಂದಿನ ಪಂದ್ಯವನ್ನು ಡೆಲ್ಲಿ ಗೆದ್ದರೂ ಉತ್ತಮ ರನ್ ರೇಟ್ ಇರದಿದ್ದಲ್ಲಿ ಆರ್​ಸಿಬಿ ಮುಂದಿನ ಹಂತಕ್ಕೆ ತಲುಪಲಿದೆ.

ಇದನ್ನೂ ಓದಿ: MS Dhoni: ಇಂದಿನ ಪಂದ್ಯವೇ ಧೋನಿಗೆ ಕೊನೆಯ ಐಪಿಎಲ್​ ಆಗಲಿದೆಯೇ? ನಿವೃತ್ತಿ ಕುರಿತು ಮಾತನಾಡಿದ ಕ್ಯಾಪ್ಟನ್ ಕೂಲ್

MI vs DC ಸಂಭಾವ್ಯ ತಂಡ:

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (wk), ರೋಹಿತ್ ಶರ್ಮಾ (c), ಡೇನಿಯಲ್ ಸಾಮ್ಸ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಸಂಜಯ್ ಯಾದವ್ / ಬಸಿಲ್ ಥಂಪಿ, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್ / ಫ್ಯಾಬಿಯನ್ ಅಲೆನ್, ಮಯಾಂಕ್ ಮಾರ್ಕಂಡೆ.

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಸರ್ಫರಾಜ್ ಖಾನ್/ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಬ್ ಪಂತ್ (c & wk), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್.
Published by:shrikrishna bhat
First published: