IPL 2022 CSK vs DC: ಗುರು - ಶಿಷ್ಯರ ಕದನದಲ್ಲಿ ಗೆಲ್ಲುವರಾರು? ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 55 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (CSK vs DC) ತಂಡಗಳು ಸೆಣಸಾಡಲಿವೆ.

CSK vs DC

CSK vs DC

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 55 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (CSK vs DC) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಡಾ. ಡಿವೈ ಪಾಟೀಲ್ (DY Patel) ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಈಗಾಗಲೇ ಪ್ಲೇ ಆಫ್ (Play - Off) ಹಂತದಿಂದ ಹೊರಬಿದ್ದಿರುವ ಎಂ ಎಸ್ ಧೋನಿ ಚೆನ್ನೈ ತಂಡಕ್ಕೆ ಇಂದಿನ ಪಂದ್ಯವು ಅಷ್ಟಾಗಿ ಮಹತ್ವದ್ದಲ್ಲದ್ದಾಗಿದೆ. ಆದರೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ಗೆ ಇಂದಿನ ಪಂದ್ಯ ಹೆಚ್ಚು ಮಹತ್ವದ್ದಾಗಿದ್ದು, ಇಂದಿನ ಪಂದ್ಯ ಗೆಲ್ಲುವ ಮೂಲಕ ಪ್ಲೇ ಆಫ್ ಹಂತಕ್ಕದ ರೇಸ್​ ನಲ್ಲಿ ಉಳಿದುಕೊಳ್ಳುವ ಅವಕಾಶವಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆ ಎನ್ನುವುದು ಇಲ್ಲಿ ಪ್ರಮುಖವಾಗುತ್ತದೆ.

ಪಂದ್ಯದ ವಿವರ:

ಐಪಿಎಲ್ 2022ರ 55 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಹಿಂದಿನ ಪಂದ್ಯವು ಕಡಿಮೆ ಸ್ಕೋರಿಂಗ್ ನಿಂದ ಕೊನೆಗೊಂಡಿತ್ತು. ಆದರೂ ಪಿಚ್​ ತೇವಾಂಶದಿಂದ ಬದಲಾಗುವ ನಿರೀಕ್ಷೆಯಿದ್ದು, ನಂತರದಲ್ಲಿ ಪಿಚ್ ಬ್ಯಾಟಿಂಗ್ ಮಾಡಲು ಉತ್ತಮವಾಗುವ ಸಾಧ್ಯತೆಯಿದೆ. ಟಾಸ್ ಗೆದ್ದ ನಾಯಕ ಮತ್ತೆ ಮೊದಲು ಬೌಲಿಂಗ್ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2022 SRH vs RCB: ಬೆಂಗಳೂರು ತಂಡಕ್ಕೆ ಹೈದರಾಬಾದ್ ಸವಾಲ್, ಹೇಗಿದೆ ಉಭಯ ತಂಡಗಳ ಬಲಾಬಲ

CSK vs DC ಹೆಡ್ ಟು ಹೆಡ್:

ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 26
DC ಗೆದ್ದ ಪಂದ್ಯಗಳು: 10
CSK ಗೆದ್ದ ಪಂದ್ಯಗಳು: 16
CSK ವಿರುದ್ಧ DC ಸರಾಸರಿ ಸ್ಕೋರ್: 148
DC ವಿರುದ್ಧ CSK ಸರಾಸರಿ ಸ್ಕೋರ್: 162
ಡಿಸಿಗೆ ಅತಿ ಹೆಚ್ಚು ರನ್: 426 ಶಿಖರ್ ಧವನ್
CSK ಪರ ಅತಿ ಹೆಚ್ಚು ರನ್: 565 MS ಧೋನಿ
ಡಿಸಿಗೆ ಹೆಚ್ಚು ವಿಕೆಟ್: 9 ಅಮಿತ್ ಮಿಶ್ರಾ
CSK ಪರ ಅತಿ ಹೆಚ್ಚು ವಿಕೆಟ್: 16 ಡ್ವೇನ್ ಬ್ರಾವೋ

ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ:

ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯಗಳಿಂದ 6 ಅಂಕಗಳನ್ನು ಹೊಂದಿದ್ದು, ಪ್ಲೇಆಫ್ ಸ್ಪರ್ಧೆಯಿಂದ ಬಹುತೇಕ ಹೊರಗುಳಿದಿದೆ. ಡೆಲ್ಲಿ ಕ್ಯಾಪಿಟಲ್ಸ್ 10 ಪಂದ್ಯಗಳಿಂದ 10 ಅಂಕಗಳನ್ನು ಹೊಂದಿದೆ ಮತ್ತು ಪ್ರಸ್ತುತ ಅಂಕಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಪ್ರದರ್ಶನ ಲೆಕ್ಕ ನೋಡುವುದಾದಲ್ಲಿ ಚೆನ್ನೈ ತಂಡಕ್ಕಿಂತ ಡೆಲ್ಲಿ ತಂಡ ಹೆಚ್ಚು ಬಲಿಷ್ಠವಾಗಿದ್ದು, ಇಂದಿನ ಪಂದ್ಯ ಗೆಲ್ಲುವ ಮೆಚ್ಚಿನ ಟೀಂ ಆಗಿದೆ.

ಇದನ್ನೂ ಓದಿ: IPL 2022 RCB vs CSK: ಚೆನ್ನೈ ಪರ ಹೊಸ ದಾಖಲೆ ನಿರ್ಮಿಸಿದ ಕ್ಯಾಪ್ಟನ್ ಕೂಲ್ ಧೋನಿ

CSK vs DC ಗಾಗಿ ಸಂಭಾವ್ಯ ತಂಡ:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಎಂಎಸ್ ಧೋನಿ (ಸಿ & ವಿಕೆ), ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್ / ಡ್ವೇನ್ ಬ್ರಾವೋ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ.

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಪೃಥ್ವಿ ಶಾ / ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್ (c & wk), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್ / ರಿಪಾಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ.
Published by:shrikrishna bhat
First published: