IPL 2022 CSK vs SRH: ಇಂದಿನ ಪಂದ್ಯದ ಮೂಲಕ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ? ಚೆನ್ನೈ-ಹೈದರಾಬಾದ್ ಸಂಭಾವ್ಯ ತಂಡ

ಇಂದು 2 ಪಂದ್ಯಗಳು ನಡೆಯಲಿದ್ದು ಮಧ್ಯಾಹ್ನದ ಪಂದ್ಯದಲ್ಲಿ ಅಂದರೆ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (CSK vs SRH) ನಡುವೆ ನಡೆಯಲಿದೆ.

CSK vs SRH

CSK vs SRH

  • Share this:
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2022) 15 ನೇ ಸೀಸನ್‌ನಲ್ಲಿ ಇಂದು 2 ಪಂದ್ಯಗಳು ನಡೆಯಲಿದ್ದು ಮಧ್ಯಾಹ್ನದ ಪಂದ್ಯದಲ್ಲಿ ಅಂದರೆ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (CSK vs SRH) ನಡುವೆ ನಡೆಯಲಿದೆ. ಈ ಪಂದ್ಯದ ನಂತರ 18ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವೆ ನಡಯಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಹೈದರಾಬಾದ್ ಮುಖಾಮುಖಿಯಾಗುತ್ತಿದ್ದು, ಈ ಋತುವಿನಲ್ಲಿ ಇನ್ನೂ ಒಂದು ಪಂದ್ಯವನ್ನು ಈ 2 ತಂಡಗಳು ಗೆದ್ದಿಲ್ಲ. ಹೀಗಾಗಿ ಚೆನ್ನೈ ಮತ್ತು ಹೈದರಾಬಾದ್ ಅಂಕಪಟ್ಟಿಯಲ್ಲಿ ಕ್ರಮವಾಗಿ 8 ಮತ್ತು 10 ನೇ ಸ್ಥಾನದಲ್ಲಿದ್ದು, ಇಂದಿನ ಪಮದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಎರಡೂ ತಂಡಗಳಿಗಿದೆ. ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ 3 ಪಂದ್ಯಗಳನ್ನಾಡಿದ್ದು 3 ಪಂದ್ಯಗಳನ್ನೂ ಸೋತಿದ್ದರೆ, ಇತ್ತ ಹೈದರಾಬಾದ್ ಸಹ 2 ಪಂದ್ಯಗಳನ್ನು ಕೈಚೆಲ್ಲಿದ್ದು ಇಂದಿನ ಪಂದ್ಯದ ಮೂಲಕ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ ಎಂದು ಕಾದುನೋಡಬೇಕಿದೆ.

ಪಂದ್ಯದ ವಿವರ:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮದ್ಯಾಹ್ನದ ಮೊದಲ ಪಂದ್ಯದಲ್ಲಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಸೆಣಸಾಡಲಿದೆ. 3 ಗಂಟೆಗೆ ಟಾಸ್ ಹಾಗೂ 3:30ಕ್ಕೆ ಪಂದ್ಯ ಆರಂಭವಾಗಲಿದೆ.

ಎರಡೂ ತಂಡಗಳ ಬಲಾಬಲ:

ಉಭಯ ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 17
CSK ಗೆದ್ದ ಪಂದ್ಯಗಳು: 13
SRH ಗೆದ್ದ ಪಂದ್ಯಗಳು: 4
ಏಪ್ರಿಲ್‌ ತಿಂಗಳಲ್ಲಿ ಆಡಿದ ಪಂದ್ಯಗಳು: 7 (CSK 6, SRH 1)
ಭಾರತದಲ್ಲಿ ಆಡಿದ ಪಂದ್ಯಗಳು: 13 (CSK 10, SRH 3)
ಹೈದರಾಬಾದ್ ವಿರುದ್ಧ CSK ಸರಾಸರಿ ಸ್ಕೋರ್: 172
ಚೆನ್ನೈ ವಿರುದ್ಧ SRH ಸರಾಸರಿ ಸ್ಕೋರ್: 164
ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದವರು: 413 (MS ಧೋನಿ)

ಇದನ್ನೂ ಓದಿ: IPL 2022 PBKS vs GT: ಪಂಜಾಬ್ ರಾಜರಿಗೆ ಗುಜರಾತ್ ಸವಾಲು, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI

SRH ಪರ ಅತಿ ಹೆಚ್ಚು ರನ್‌ ಗಳಿಸಿದವರು: 338 (ಕೇನ್ ವಿಲಿಯಮ್ಸನ್)
CSK ಪರ ಅತಿ ಹೆಚ್ಚು ವಿಕೆಟ್‌ ಪಡೆದವರು: 19 (ಡ್ವೇನ್ ಬ್ರಾವೋ)
ಹೈದರಾಬಾದ್ ಪರ ಅತಿ ಹೆಚ್ಚು ವಿಕೆಟ್‌ಗಳು: 8 (ಭುವನೇಶ್ವರ್ ಕುಮಾರ್)
CSK ಗಾಗಿ ಹೆಚ್ಚಿನ ಕ್ಯಾಚ್‌ಗಳು: 11 (MS ಧೋನಿ)
ಹೈದರಾಬಾದ್ ಪರ ಹೆಚ್ಚಿನ ಕ್ಯಾಚ್‌ಗಳು: 9 (ಕೇನ್ ವಿಯಮ್ಸನ್)
SRH ವಿರುದ್ಧದ ಅವರ ಕೊನೆಯ 5 ಪಂದ್ಯಗಳಲ್ಲಿ 4ನ್ನು ಗೆದ್ದಿರುವ ಚೆನ್ನೈ 6 ತಿಂಗಳ ಹಿಂದೆ ಶಾರ್ಜಾದಲ್ಲಿ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದು ಬೀಗಿತ್ತು.

ಎರಡೂ ತಂ ಡಗಳ ಸಂಭಾವ್ಯ  ತಂಡ: 

ಚೆನ್ನೈ ಸೂ ಪರ್ ಕಿಂ ಗ್ಸ್: ರವೀಂ ದ್ರ ಜಡೇಜಾ (ನಾಯಕ), ರುತುರಾಜ್ ಗಾಯಕ್ವಾಡ್, ರಾಬಿನ್ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು , ಶಿವಂ ದುಬೆ, ಮಹೇಂದ್ರ ಸಿಂಗ್​ ಧೋನಿ, ಡ್ವೇನ್ ಬ್ರಾವೋ , ಡ್ವೇನ್ ಪ್ರಿಟೋರಿಯಸ್, ಕ್ರಿ ಸ್ ಜೋರ್ಡಾ ನ್, ರಾಜವರ್ಧ ನ್ ಹೆಂಗರ್ಗೆಕರ್, ತುಷಾರ್ ದೇಶಪಾಂಡೆ.

ಇದನ್ನೂ ಓದಿ: IPL 2022: RCB ಬೇಡ ಎಂದು ರಿಜೆಕ್ಟ್ ಮಾಡಿದ ಆಟಗಾರರು ಇದೀಗ ಮತ್ತೊಂದು ತಂಡದ ಸೂಪರ್ ಪ್ಲೇಯರ್ಸ್..!

ಸನ್​ ರೈಸರ್ಸ್ ಹೈ ದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇ ಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್​ ಪೂರನ್, ವಾಷಿಂಗ್ಟನ್ ಸುಂದರ್, ಪ್ರಿಯಾಂಗಾರ್ಗ್ ,ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ. ನಟರಾಜನ್.
Published by:shrikrishna bhat
First published: