IPL 2022 CSK vs SRH: ಗಾಯಕ್ವಾಡ್ ಅಬ್ಬರಕ್ಕೆ ತತ್ತರಿಸಿದ ಹೈದರಾಬಾದ್, ಮತ್ತೆ ಗೆಲುವಿನ ಲಯಕ್ಕೆ ಮರಳಿದ ಚೆನ್ನೈ

ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಹೈದರಾಬಾದ್ (SRH) ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವ ಮೂಲಕ 13 ರನ್ ಗಳಿಂದ ಸೋಲನ್ನಪ್ಪಿತು.

ಚೆನ್ನೈ ತಂಡ್ಕಕೆ ಗೆಲುವು

ಚೆನ್ನೈ ತಂಡ್ಕಕೆ ಗೆಲುವು

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH vs CSK) ತಂಡವನ್ನು ಎದುರಿಸಿದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಓಪನರ್​ ಗಳ ಉತ್ತಮ ಜೊತೆಯಾಟದಿಂದ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಹೈದರಾಬಾದ್ (SRH) ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸುವ ಮೂಲಕ 13 ರನ್ ಗಳಿಂದ ಸೋಲನ್ನಪ್ಪಿತು.

ಚೆನ್ನೈ ಪರ ಮಿಂಚಿದ ರುತುರಾಜ್ ಗಾಯಕ್ವಾಡ್:

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ ನಷ್ಟಕ್ಕೆ 202 ರನ್ ಗಳಿಸಿತು. ಇನ್ನು ಚೆನ್ನೈ ಪರ ಓಪನರ್ ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವಾನ್ ಕಾನ್ವೇ ಅದ್ಭುತ ಜೊತೆಯಾಟವಾಡಿದರು. ರುತುರಾಜ್ ಗಾಯಕ್ವಾಡ್ 57 ಎಸೆತದಲ್ಲಿ 6 ಸಿಕ್ಸ್ ಮತ್ತು 6 ಪೋರ್ ಗಳ ನೆರವಿನಿಂದ 99 ರನ್ ಗಳಿಸಿದಶತಕ ವಂಚಿತರಾದರೆ, ಕಾನ್ವೇ 55 ಎಸೆತದಲ್ಲಿ 4 ಸಿಕ್ಸ್ ಹಾಗೂ 8 ಬೌಂಡರಿಗಳ ನೆರವಿನಿಂದ 85 ರನ್ ಗಳಿಸಿ ಮಿಂಚಿದರು. ಉಳಿದಂತೆ ನಾಯಕ ಧೋನಿ 8 ರನ್ ಮತ್ತು ಜಡೇಜಾ 1 ರನ್ ಗಳಿಸಿದರು.

ಬೌಲಿಂಗ್​ ನಲ್ಲಿ ಹೈದರಾಬಾದ್ ವಿಪಲ:

ಇನ್ನು, ಸನ್ ರೈಸರ್ಸ್ ಹೈದರಾಬಾದ್ ಪರ ಯಾವೊಬ್ಬ ಬೌಲರ್ ಸಹ ಚೆನ್ನೈ ಓಪನರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೈದರಾಬಾದ್ ಪರ ಟಿ. ನಟರಾಜನ್ 2 ವಿಕೆಟ್ ಉರುಳಿಸುವ ಮೂಲಕ ಏಕ ಮಾತ್ರ ಬೌಲರ್ ವಿಕೆಟ್ ಪಡೆದಂತಾದರು.

ಇದನ್ನೂ ಓದಿ: IPL 2022 CSK vs SRH: ಚೆನ್ನೈ ತಂಡಕ್ಕೆ ಹೈದರಾಬಾದ್ ಸವಾಲ್, ಧೋನಿ ನಾಯಕತ್ವದಲ್ಲಿ ಮತ್ತೆ ಬದಲಾಗಲಿದೆಯಾ CSK ಲಕ್

ಚೇಸಿಂಗ್ ನಲ್ಲಿ ಎಡವಿದ ಎಸ್ ​ಆರ್ ​ಎಚ್​:

ಇನ್ನು, ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ನೀಡಿದ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡುವಲ್ಲಿ ವಿಫಲವಾಯಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ 39 ರನ್, ನಾಯಕ ಕೇನ್ ವಿಲಿಯಂಸನ್ 47 ರನ್, ರಾಹುಲ್ ತ್ರಿಪಾಠಿ ಶೂನ್ಯ, ಮಾರ್​ಕ್ರಮ್ 17 ರನ್, ನಿಕೊಲಸ್ ಪೂರನ್ 64 ರನ್, ಶಶಾಂಕ್ ಸಿಂಗ್ 15 ರನ್, ವಾಶಿಂಗ್ ಟನ್ ಸುಂದರ್ 2 ರನ್ ಗಳಿಸಿದರು. ಹೈದರಾಬಾದ್ ಪರ್ ಪೂರನ್ ಅರ್ಧಶತಕದ ಆಟವೂ ವ್ಯರ್ಥವಾಯಿತು.

ಚೌದ್ರಿಗೆ ದಾಳಿಗೆ ತತ್ತರಿಸಿದ ಹೈದರಾಬಾದ್:

ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಬೌಲಿಂಗ್ ಮಾಡಿದ ಮುಕೇಶ್ ಚೌದ್ರಿ 4 ಓವರ್​ ಗೆ 46 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಉಳಿದಮತೆ ಮಿಚೆಲ್ ಮತ್ತು ಡ್ವೈನ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖಪಾತ್ರ ನಿರ್ವಹಿಸಿದರು.

ಇದನ್ನೂ ಓದಿ: IPL 2022: ನಾಯಕನ ಸ್ಥಾನದಿಂದ ಜಡೇಜಾ ಕೆಳಗಿಳಿಯಲು ಇಲ್ಲಿವೆ 3 ಪ್ರಮುಖ ಕಾರಣಗಳು

ಗೆಲುವಿನ ಲಯಕ್ಕೆ ಮರಳಿದ ಚೆನ್ನೈ:

ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿಯೇ ಗೆಲುವನ್ನು ದಾಖಲಿಸುವ ಮೂಲಕ ಮತ್ತೊಮ್ಮೆ ತಮ್ಮ ನಾಯಕತ್ವದ ಮಹತ್ವವನ್ನು ಸಾರಿದರು. ತಂಡದಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್​ ಗೆ ಮರಳುವಂತೆ ಧೋನಿ ಮಾಡಿದರು ಎಂದರೂ ತಪ್ಪಾಗಲಾರದು.
Published by:shrikrishna bhat
First published: