IPL 2022 CSK vs SRH: ಚೆನ್ನೈ ತಂಡಕ್ಕೆ ಹೈದರಾಬಾದ್ ಸವಾಲ್, ಧೋನಿ ನಾಯಕತ್ವದಲ್ಲಿ ಮತ್ತೆ ಬದಲಾಗಲಿದೆಯಾ CSK ಲಕ್

ಐಪಿಎಲ್ 2022ರ 15ನೇ ಸೀಸನ್​ ನ 46ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.

CSK vs SRH

CSK vs SRH

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ ನ 46ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಸೆಣಸಾಡಲಿವೆ. ಇಂದಿನ ಈ 2ನೇ ಪಂದ್ಯವು ಪುಣೆಯ ಎಂಸಿಎ (MCA) ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು, ಕೇನ್ ವಿಲಯಂಸನ್ ನಾಯಕತ್ವದ ಹೈದರಾಬಾದ್ ತಂಡಕ್ಕೆ ಇಂದಿನ ಪಂದ್ಯ ಗೆದ್ದಲ್ಲಿ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಅಂತೆಯೇ ಎಂಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ತಂಡ ಸಹ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದಲ್ಲಿ ಪ್ಲೇ ಆಫ್ ಗೆ ಹೋಗುವ ಸಾಧ್ಯತೆಗಳಿದ್ದು, ಇಂದಿನ ಪಂದ್ಯ ಸಹ ಸಿಎಸ್​ಕೆ ಗೆ ಮಹತ್ವದ್ದಾಗಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆ ಎಂದು ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 46ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ. ಇಂದಿನ ಈ 2ನೇ ಪಂದ್ಯವು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸರಿಯಾಗಿ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಬವಾಗಲಿದೆ.

ಪಿಚ್ ವರದಿ:

ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಕೊನೆಯ 2 ಪಂದ್ಯಗಳಲ್ಲಿಯೂ ಲೋ ಸ್ಕೋರ್ ದಾಖಲಾಗಿತ್ತು. ಇಬ್ಬನಿ ಅಂಶವು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿರುವುದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡುವ ನಿರೀಕ್ಷೆಯಿದೆ.

ಒಟ್ಟು ಪಂದ್ಯಗಳು - 3
ಮೊದಲ ಬ್ಯಾಟಿಂಗ್‌ನಲ್ಲಿ ಗೆದ್ದ ಪಂದ್ಯಗಳು - 1
ಮೊದಲು ಬೌಲಿಂಗ್‌ನಲ್ಲಿ ಗೆದ್ದ ಪಂದ್ಯಗಳು - 2
ಸರಾಸರಿ 1ನೇ ಇನ್ನಿಂಗ್ಸ್ ಸ್ಕೋರ್ - 153
ಸರಾಸರಿ 2ನೇ ಇನ್ನಿಂಗ್ಸ್ ಸ್ಕೋರ್ - 128

ಇದನ್ನೂ ಓದಿ: IPL 2022: CSK ಗೆ ಮತ್ತೆ ಧೋನಿ ನಾಯಕ! ಕ್ಯಾಪ್ಟನ್ ಪಟ್ಟ ಬಿಟ್ಟುಕೊಟ್ಟ ರವೀಂದ್ರ ಜಡೇಜಾ

SRH vs CSK ಹೆಡ್​ ಟು ಹೆಡ್​:

ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ ಐಪಿಎಲ್ ನಲ್ಲಿ ಒಟ್ಟು 17 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ 12 ಬಾರಿ ಗೆದ್ದರೆ, 5ಬಾರಿ ಹೈದರಾಬಾದ್ ತಂಡ ಗೆಲುವು ದಾಖಲಿಸಿದೆ. ಅಂಕಿಅಂಶದ ಪ್ರಕಾರ ಚೆನ್ನೈ ಹೆಚ್ಚು ಬಲಿಷ್ಠವಾಗಿ ಕಂಡರೂ ಈ ಬಾರಿ ಚೆನ್ನೈಗಿಂತ ಹೈದರಾಬಾದ್ ಉತ್ತಮ ಪ್ರದರ್ಶನ ನೀಡುತ್ತಿದೆ. ಅಲ್ಲದೇ ಈ ಬಾರಿ ನಡೆದ 1 ಪಂದ್ಯದಲ್ಲಿಯೂ ಎಸ್​ಆರ್​ಎಚ್​ ಗೆದ್ದಿದೆ,

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಈ ಬಾರಿ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಮಢವು ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 3ರಲ್ಲಿ ಸೋತಿದೆ. ಒಟ್ಟು 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದಲ್ಲಿ ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿರುವ 8 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 6ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2022 PBKS vs LSG: ಮೊಹ್ಸಿನ್ ಖಾನ್ ದಾಳಿಗೆ ಬೆದರಿದ ಪಂಜಾಬ್, ಗೆಲುವಿನ ನಗೆಬೀರಿದ ಲಕ್ನೋ ತಂಡ

SRH vs CSK ಸಂಭಾವ್ಯ ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (c & wk), ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಡ್ವೈನ್ ಪ್ರಿಟೋರಿಯಸ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ.

ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (c), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.
Published by:shrikrishna bhat
First published: