IPL 2022 CSK vs RR: ಫ್ಲೇ ಆಫ್ ಹಂತಕ್ಕೆ ತಲುಪಿದ ರಾಜಸ್ಥಾನ್, ಅಂತಿಮ ಪಂದ್ಯದಲ್ಲಿಯೂ ಸೋತ ಸಿಎಸ್ಕೆ
ಚೆನ್ನೈ ನೀಡಿದ್ದ 150 ರನ್ ಗಳನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸುವ ಮೂಲಕ 5 ವಿಕೆಟ್ ಗಳಿಂದ ಜಯ ದಾಖಲಿಸಿ, ಪ್ಲೇ ಆಫ್ ಹಂತಕ್ಕೆ ತಲುಪಿತು.
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 68ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ (RR) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಸೆಣಸಾಡಿದವು. ಇಂದಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ (MS Dhoni) ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಚೆನ್ನೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಸಿತು. ಚೆನ್ನೈ ಪರ ಮೋಯಿನ್ ಅಲಿ ಅದ್ಭುತ ಬ್ಯಾಟಿಂಗ್ ಮಾಡಿ ಮಿಂಚಿದರು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸುವ ಮೂಲಕ 5 ವಿಕೆಟ್ ಗಳಿಂದ ಜಯ ದಾಖಲಿಸಿ, ಪ್ಲೇ ಆಫ್ ಹಂತಕ್ಕೆ ತಲುಪಿತು.
ಚೆನ್ನೈ ಪರ ಮಿಂಚಿದ ಮೋಯಿನ್ ಅಲಿ:
ಇನ್ನು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಚೆನ್ನೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಸಿತು. ಚೆನ್ನೈ ಪರ ಮೋಯಿನ್ ಅಲಿ ಅದ್ಭುತ ಬ್ಯಾಟಿಂಗ್ ಮmಾಡಿದರು. ಅವರು 57 ಎಸೆತದಲ್ಲಿ 3 ಸಿಕ್ಸ್ ಮತ್ತು 13 ಫೊರ್ ಬಾರಿಸುವ ಮೂಲಕ ಬರೋಬ್ಬರಿ 93 ರನ್ ಗಳಸಿಉವ ಮೂಲಕ ತಂಡ 150 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಗಾಕ್ವಾಡ್ 2 ರನ್, ಡೆವೋನ್ ಕಾನ್ವೆ 16 ರನ್, ನಾಯಕ ಧೋನಿ 26 ರನ್ ಗಳಸಿದರು. ಉಳಿದ ಬ್ಯಾಟ್ಸ್ಮನ್ ಗಳು ಕೇವಲ ಒಂದಕ್ಕಿಂಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿದರು.
ಉತ್ತಮ ಬೌಲಿಂಗ್ ಪ್ರದರ್ಶಿಸಿದ ರಾಜಸ್ಥಾನ್:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳು ಚೆನ್ನೈ ತಂಡದ ಬ್ಯಾಟರ್ ಗಳನ್ನು ಕಟ್ಟಿ ಹಾಕುವಲ್ಲಿ ಯಶ್ಸವಿಯಾದರು. ಆ ಮೂಲಕ ಸಿಎಸ್ಕೆ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ರಾಜಸ್ಥಾನ್ ಪರ ಚಹಾಲ್ ಮತ್ತು ಒಬೆಡ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಟ್ರೆಂಟ್ ಬೋಲ್ಟ್ ಮತ್ತು ರವಿಚಂದ್ರನ್ ಅಶ್ವೀನ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 150 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತವಾದರೂ, ಓಪನರ್ ಆದ ಯಶಸ್ವಿ ಜ್ವಾಲ್ 44 ಎಸೆತದಲ್ಲಿ 1 ಸಿಕ್ಸ್ ಮತ್ತು 8 ಬೌಂಡರಿಗಳ ನೆರವಿನಿಂದ 59 ರನ್ ಗಳಿಸಿ ಮೀಮಚಿದರು. ಆದರೆ ಉಳಿದ ಬ್ಯಾಟ್ಸ್ಮನ್ ಗಳು ಕೇವಲ ಒಂದಕ್ಕಿಂಗೆ ಫೆವೆಲಿಯನ್ ಪರೇಡ್ ನಡಸಿದರೆ, ಅಂತಿಮವಾಗಿ ರವಿಚಂದ್ರನ್ ಅಶ್ವೀನ್ 40 ರನ್ ಮತ್ತು ರಿಯಾನ್ 10 ಪರಾಗ್ ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 2ನೇ ಸ್ಥಾನದಲ್ಲಿ ರಾಜಸ್ಥಾನ್ ಪ್ಲೇ ಆಫ್ ತಲುಪಿತು.
ಸಾಧಾರಣ ಮೊತ್ತ ಕಲೆಹಾಕಿದ್ದ ಚೆನ್ನೈ ತಂಡ ನಂತರದಲ್ಲಿ ಬೌಲಿಂಗ್ ನಲ್ಲಿಯೂ ಎಡವಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಪ್ರಶಾಮತ್ ಸೋಲಂಕಿ 2 ವಿಕೆಟ್ ಪಡೆದರೆ, ಸಿಮ್ರಜಿತ್ ಸಿಂಗ, ಮಿಚೆಲ್ ಸಟ್ನೇರ್ ಮತ್ತು ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ