IPL 2022 CSK vs RR: ಬಲಿಷ್ಠ ರಾಜಸ್ಥಾನ್ ತಂಡಕ್ಕೆ ಚೆನ್ನೈ ಸವಾಲ್, ಹೇಗಿರಲಿದೆ ಉಭಯ ತಂಡಗಳ ಬಲಾಬಲ

ಐಪಿಎಲ್ 2022ರ 15ನೇ ಆವೃತ್ತಿಯ 68ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

CSK vs RR

CSK vs RR

  • Share this:
ಐಪಿಎಲ್ 2022ರ 15ನೇ ಆವೃತ್ತಿಯ 68ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂದಿನ ಪಂದ್ಯ ಔಪಚಾರಿಕವಾಗಿದ್ದರೂ ಟೂರ್ನಿಯ ಕೊನೆಯ ಪಂದ್ಯವನ್ನಾದರೂ ಗೆಲ್ಲುವ ಹಂಬಲದಲ್ಲಿದೆ. ಇತ್ತ ಫ್ಲೇ ಆಫ್ ಹೊಸ್ತಿಲಿನಲ್ಲಿರುವ ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಈಗಾಗಲೇ ಫ್ಲೇ ಆಫ್ ಸನಿಹದಲ್ಲಿರುವುದರಿಂದ ಇಂದಿನ ಪಂದ್ಯ ಗೆಲ್ಲುವ ಮೂಲಕ ಫ್ಲೇ ಆಫ್ ಅನ್ನು ಇನ್ನಷ್ಟು ಖಚಿತ ಪಡಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಬಲಾಬಲ ಹೇಗಿದೆ ನೋಡೋಣ.

ಪಂದ್ಯದ ವಿವರ:

ಐಪಿಎಲ್ 2022ರ 68ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಹೆಚ್ಚು ಸ್ಕೋರ್ ಮಾಡುವ ಮೈದಾನವಾಗಿದೆ. T20 ಗಳಲ್ಲಿ ಕ್ರೀಡಾಂಗಣದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತವು 157 ಆಗಿದ್ದರೆ, ಸರಾಸರಿ 2ನೇ ಇನ್ನಿಂಗ್ಸ್ ಒಟ್ಟು 147 ಆಗಿದೆ. ಇದಲ್ಲದೇ ತೇವಾಂಶವು ಒಂದು ಪಂದ್ಯದ ಮೇಲೆ ಪರಿಣಾಮ ಬೀರುವುದರಿಂದ ಟಾಸ್ ಗೆದ್ದ ತಂಡದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಹೇಳಿಕೆಗೆ RCB ಅಭಿಮಾನಿಗಳ ಬೇಸರ, ಅಂತದೇನಂದ್ರು ಗೊತ್ತಾ ಹಿಟ್​ಮ್ಯಾನ್?

RR vs CSK ಹೆಡ್ ಟು ಹೆಡ್:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 26 ಬಾರಿ ಮೂಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 16 ಬಾರಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವು 11 ಬಾರಿ ಗೆದ್ದಿದೆ. ಕಳೆದ ಸೀಸನ್​ ನಲ್ಲಿ ನಡೆದ 2 ಪಮದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದೆ.

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಇನ್ನು, ಈ ಬಾರಿ ಧೋನಿ ನಾಯಕತ್ವದ ಚೆನ್ನೈ ತಂಡವು ಕಳಪೆ ಪ್ರದರ್ಶನದ ಕಾರಣ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದೆ. ಈವರೆಗೆ ಒಟ್ಟು 13 ಪಂದ್ಯದಲ್ಲಿ 4ರಲ್ಲಿ ಗೆದ್ದು 9ರಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಅದರಂತೆ ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ತಂಡವು ಆಡಿರುವ 13 ಪಂದ್ಯದಲ್ಲಿ 8ರಲ್ಲಿ ಗೆದ್ದು, 5ರಲ್ಲಿ ಸೋಲುವ ಮೂಲಕ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Arjun Tendulkar: ಅರ್ಜುನ್ ತೆಂಡೂಲ್ಕರ್ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್, ಈ ಬಾರಿಯೂ ಬೆಂಚ್ ಕಾಯಬೇಕಾ ಸಚಿನ್ ಪುತ್ರ?

RR vs CSK ಸಂಭಾವ್ಯ ತಂಡ:

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (C & WK), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಓಬೇದ್ ಮೆಕಾಯ್.

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಶಿವಂ ದುಬೆ, ಅಂಬಟಿ ರಾಯುಡು, ಎಂಎಸ್ ಧೋನಿ (C & WK), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಮತೀಶ ಪತಿರಾನ, ಮುಖೇಶ್ ಚೌಧರಿ.
Published by:shrikrishna bhat
First published: