IPL 2022 CSK vs RCB: ಐಪಿಎಲ್​ನಲ್ಲಿ ಇಂದು ರಣ ರೋಚಕ ಪಂದ್ಯ, RCB ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಚೆನ್ನೈ?

ಐಪಿಎಲ್ 2022 (IPL 2022) ರ15ನೇ ಆವೃತ್ತಿಯಲ್ಲಿ ಇಂದು ಭರ್ಜರಿ ಪಂದ್ಯ ನಡೆಯಲಿದೆ. ಹೌದು, ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ಪರಸ್ಪರ ಮುಖಾಮುಖಿಯಾಗಲಿವೆ.

RCB vs CSK

RCB vs CSK

  • Share this:
ಐಪಿಎಲ್ 2022 (IPL 2022) ರ15ನೇ ಆವೃತ್ತಿಯಲ್ಲಿ ಇಂದು ಭರ್ಜರಿ ಪಂದ್ಯ ನಡೆಯಲಿದೆ. ಹೌದು, ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ಪರಸ್ಪರ ಮುಖಾಮುಖಿಯಾಗಲಿವೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ RCB ಮತ್ತು CSK ತಂಡಗಳು ಸೆಣಸಾಡಲಿವೆ. ಐಪಿಎಲ್​ ನಲ್ಲಿ ಪ್ರತಿಬಾರಿಯೂ ಈ ಎರಡು ತಂಡಗಳು ಮುಖಾಮುಖಿಯಾದಾಗ ಅಭಿಮಾನಿಗಳು ನಿರೀಕ್ಷೆ ಮಟ್ಟ ಉತ್ತುಂಗದಲ್ಲಿರುತ್ತದೆ. ಅಂತೆಯೇ ಈ ಬಾರಿಯೂ ಚೆನ್ನೈ ಮತ್ತು ಬೆಂಗಳೂರು ತಂಡವು ಮುಖಾಮುಖಿಯಾಗುತ್ತಿದ್ದು, ಇಂದಿನ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈ ಪಂದ್ಯದಲ್ಲಿ ಸಿಎಸ್​ಕೆ ಗೆಲ್ಲುವ ಮೂಲಕ ಈ ಬಾರಿ ಐಪಿಎಲ್​ ನಲ್ಲಿ ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿದ್ದರೆ, ಇತ್ತ ಆರ್​ಸಿಬಿ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಹಾಗಿದ್ರೆ ಉಭಯ ತಂಡಗಳ ಐಪಿಎಲ್ (IPL) ಅಂಕಿಅಂಶ ಏನು ಹೇಳುತ್ತದೆ ಎಂದು ನೋಡೋಣ.

ಪಂದ್ಯದ ವಿವರ:

ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಬೆಂಗಳೂರು ರಾಯಲ್ ಚಾಂಲೆಂಜರ್ಸ್ ತಂಡಗಳು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಐಪಿಎಲ್ 2022 ಅಲ್ಲಿ ಉಭಯ ತಂಡಗಳ ಜರ್ನಿ:

ಐಪಿಎಲ್ 2022 ರಲ್ಲಿ ಸಿಎಸ್‌ಕೆ ಇಲ್ಲಿಯವರೆಗೆ 4 ಪಂದ್ಯಗಳನ್ನು ಆಡಿದ್ದು, 4ರ್ಲಲಿಯೂ ಸೋಲನ್ನಪ್ಪುವ ಮೂಲಕ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದ್ಲಲಿದೆ. ಆದರೆ ಆರ್‌ಸಿಬಿ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1 ಪಂದ್ಯದಲ್ಲಿ ಸೋತು ಉಳಿದ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 6 ಅಂಕಗಳೊಂದಿಗೆ, 4ನೇ ಸ್ಥಾನದಲ್ಲಿದ್ದು, ಇಂದು ಸಹ ಗೆಲ್ಲುವ ಫೇವರೇಟ್ ತಂಡವಾಗಿದೆ.

ಇದನ್ನೂ ಓದಿ: IPL 2022: ಅನುಜ್ ರಾವತ್ ಮೊದಲ ಫಿಫ್ಟಿ, RCB ಗೆ ಹ್ಯಾಟ್ರಿಕ್ ಗೆಲುವು

CSK vs RCB ಹೆಡ್-ಟು-ಹೆಡ್:

ಐಪಿಎಲ್​ ನಲ್ಲಿ ಈವರೆಗೆ ಸಿಎಸ್​ಕೆ ಹಾಗೂ ಆರ್​ಸಿಬಿ ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಸಿಎಸ್​ಕೆ 18 ಬಾರಿ ಗೆದ್ದಿದೆ. ಆದರೆ ಆರ್​ಸಿಬಿ ಸಿಎಸ್​ಕೆ ವಿರುದ್ಧ 9 ಬಾರಿ ಜಯ ದಾಖಲಿಸಿದೆ. 1 ಪಂದ್ಯದಮಾತ್ರ ಯಾವ ಫಲಿತಾಂಶ ಬರಲಿಲ್ಲವಾಗಿದೆ. ಇನ್ನು, ಐಪಿಎಲ್ 14ನೇ ಸೀಸನ್​ ನಲ್ಲಿ 2 ಪಂದ್ಯಗಳಲ್ಲಿ ಉಭಯ ತಂಡಗಳು ಸೆಣಸಾಡಿದ್ದು, ಇದರಲ್ಲಿ ಎರಡೂ ಪಂದ್ಯಗಳನ್ನು ಚೆನ್ನೈ ತಂಡ ಗೆದ್ದಿದೆ.

ಪಿಚ್ ವರದಿ:

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇದುವರೆಗೆ ನಡೆದ 6  ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಚೇಸಿಂಗ್ ತಂಡ ಗೆದ್ದಿದೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತವು 163 ಆಗಿದೆ. ಏತನ್ಮಧ್ಯೆ, RCB ಮತ್ತು CSK ಎರಡೂ ತಂಡಗಳು ಆಡಿರುವ ಪಂದ್ಯಗಳಲ್ಲಿ ಸೋತಿವೆ. ಸಂಜೆ ಮೇಲೆ ಇಲ್ಲಿ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದ್ದು, ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: CSK vs SRH: ಟಾಸ್​ ಗೆದ್ದ ​ಹೈದರಾಬಾದ್​.. ಬೌಲಿಂಗ್​ ಆಯ್ಕೆ! ಇಲ್ಲಿವರೆಗೂ ಇವ್ರಿಬ್ಬರು ಗೆಲುವಿನ​ ಅಕೌಂಟ್​ ಓಪನ್​ ಮಾಡಿಲ್ಲ..

ಉಭಯ ತಂಡಗಳ ಸಂಭಾವ್ಯ ಪಟ್ಟಿ:

ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಶಿವಂ ದುಬೆ, ಎಂಎಸ್ ಧೋನಿ (WK), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ವನಿಂದು ಹಸರಂಗ, ಚಾಮ ಮಿಲಿಂದ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
Published by:shrikrishna bhat
First published: