IPL 2022 RCB vs CSK: ಗೆಲುವಿನ ಲಯಕ್ಕೆ ಮರಳುತ್ತಾ RCB? ಹೇಗಿದೆ ಉಭಯ ತಂಡಗಳ ಬಲಾಬಲ

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಸೆಣಸಾಡಲಿವೆ.

RCB vs CSK

RCB vs CSK

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(MCA) ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದಿನ ಪಂದ್ಯವು ಐಪಿಎಲ್ 15ನೇ ಸೀಸನ್​ನ ಹೈವೋಲ್ಟೇಜ್ ಪಂದ್ಯವಾಗಿದ್ದು, ಇಂದು ಗೆದ್ದವರು ಪ್ಲೇ ಆಫ್ ಹಾದಿ ಸ್ವಲ್ಪ ಮಟ್ಟಿಗೆ ಸುಗಮವಾಗಲಿದೆ. ಅದರಲ್ಲಿಯೂ ಸತತ ಸೋಲಿನಿಂದ ಕಂಗೆಟ್ಟಿರುವ ಡುಪ್ಲೇಸಿಸ್ ನೇತೃತ್ವದ ಆರ್​ಸಿಬಿ ತಂಡಕ್ಕೆ ಇಂದಿನ ಪಂದ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಧೋನಿ (Dhoni) ನಾಯಕತ್ವದ ಸಿಎಸ್​ಕೆ ತಂಡಕ್ಕೂ ಇದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಹೆಚ್ಚು ನಿರೀಕ್ಷೆಗಳಿವೆ.

ಪಂದ್ಯದ ವಿವರ:

ಐಪಿಎಲ್ 2022ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು, ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಎಂಸಿಎ ಸ್ಟೇಡಿಯಂನಲ್ಲಿರುವ ಪಿಚ್ ಇಲ್ಲಿಯವರೆಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಹಾಯ ಮಾಡಿದೆ. ಹಿಂದಿನ ಪಂದ್ಯಗಳು ಕೆಲವು ಯೋಗ್ಯ ಸ್ಕೋರ್‌ಗಳಿಗೆ ಸಾಕ್ಷಿಯಾಗಿದ್ದವು, ಆದರೆ ಹೊಸ ಬಾಲ್ ಬೌಲರ್‌ಗಳು ಪಂದ್ಯದ ಮೇಲೆ ಪ್ರಭಾವ ಬೀರಿದ್ದಾರೆ. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಜೆಯ ಆಟವಾದ್ದರಿಂದ, ಇಬ್ಬನಿ ಅಂಶವು ಕಾರ್ಯರೂಪಕ್ಕೆ ಬರಬಹುದು.

ಇದನ್ನೂ ಓದಿ: IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

RCB vs CSK ಹೆಡ್ ಟು ಹೆಡ್:

ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 30
CSK ಗೆದ್ದ ಪಂದ್ಯಗಳು: 20
RCB ಗೆದ್ದ ಪಂದ್ಯಗಳು: 9
CSK ಪರ ಅತಿ ಹೆಚ್ಚು ರನ್: 748 MS ಧೋನಿ
RCB ಪರ ಅತಿ ಹೆಚ್ಚು ರನ್: 963 ವಿರಾಟ್ ಕೊಹ್ಲಿ
CSK ಪರ ಹೆಚ್ಚಿನ ವಿಕೆಟ್: ಡ್ವೇನ್ ಬ್ರಾವೋ - 16
RCB ಪರ ಅತಿ ಹೆಚ್ಚು ವಿಕೆಟ್: ವಿನಯ್ ಕುಮಾರ್- 15

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಇನ್ನು, ಹಿಂದಿನ ಅಂಕಿಅಂಶಗಳನ್ನು ಹೊರತುಪಡಿಸಿ ನೋಡುವುದಾದರೆ, ಈ ಬಾರಿ ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈಗೆ ಮತ್ತೆ ಧೋನಿ ನಾಯಕತ್ವ ಮರಳಿದ ಮೊದಲ ಪಂದ್ಯದಲ್ಲಿಯೇ ಗೆಲುವ ಸಾಧಿಸುವ ಮೂಲಕ ಆತ್ಮವಿರ್ಶವಾಸ ಹೆಚ್ಚಿದೆ. ಆದರೆ ಟೂರ್ನಿಯ ಮೊದಲಾರ್ಧದಲ್ಲಿ ಉತ್ತಮವಾಗಿ ಆಡಿದ್ದ ಆರ್​ಸಿಬಿ ದ್ವಿತಿಯಾರ್ಧದಲ್ಲಿ ಹ್ಯಾಟ್ರಿಕ್ ಸೋಲಿನ ಮೂಲಕ ಪ್ಲೇ ಆಫ್ ಹಂತಕ್ಕೆ ತಲುಪುವ ಹಾದಿಯನ್ನು ಕಠಿಣ ಮಾಡಿಕೊಂಡಿದೆ.

ಆರ್​ಸಿಬಿ ಈವರೆಗೂ ಒಟ್ಟು 10 ಪಂದ್ಯಗಳನ್ನಾಡಿದ್ದು, ಅದರಲ್ಲಿ 5ರಲ್ಲಿ ಸೋತು 5ರಲ್ಲಿ ಗೆಲ್ಲುವ ಮೂಲಕ 10 ಅಂಕಗಳೊಂದಿಗೆ 6ನೇ ಸ್ಥಾನದ್ಲಲಿದೆ. ಇತ್ತ ಚೆನ್ನೈ ತಂಡ ಆಡಿರುವ 9ರಲ್ಲಿ 6ರಲ್ಲಿ ಸೋತು 3ರಲ್ಲಿ ಗೆದ್ದು 6 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯವು ಉಭಯ ತಂಡಗಳೆರಡಕ್ಕೂ ಮಹತ್ವದ ಮ್ಯಾಚ್ ಆಗಿದೆ.

ಇದನ್ನೂ ಓದಿ: IPL 2022 GT vs PBKS: ಅಬ್ಬರಿಸಿದ ಗಬ್ಬರ್ ಸಿಂಗ್, ಗುಜರಾತ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಂಜಾಬ್

RCB vs CSK ಸಂಭಾವ್ಯ ತಂಡ:

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (c & wk), ಮಿಚೆಲ್ ಸ್ಯಾಂಟ್ನರ್ / ಡ್ವೇನ್ ಬ್ರಾವೋ, ಡ್ವೈನ್ ಪ್ರಿಟೋರಿಯಸ್, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (c), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (WK), ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೋರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
Published by:shrikrishna bhat
First published: