IPL 2022: ಸೋಲಿನ ಸುಳಿಯಿಂದ ಹೊರ ಬರ್ತಾರಾ ಮುಂಬೈ? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ 15ನೇ ಸೀಸನ್​ನ 33ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

CSK vs MI

CSK vs MI

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ನ 33ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MI vs CSK) ತಂಡಗಳು ಸೆಣಸಾಡಲಿವೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.ಈ IPL ಋತುವಿನಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳಾದ MI ಮತ್ತು CSK ಗೆ ತುಂಬಾ ನಿರಾಶಾದಾಯಕವಾಗಿದೆ, ಅವರು ಪ್ರಸ್ತುತ ಅಂಕಪಟ್ಟಿಯಲ್ಲಿ ಕೆಳಗಿನ ಎರಡು ಸ್ಥಾನಗಳಲ್ಲಿದ್ದಾರೆ. 10ರಲ್ಲಿ 4 ತಂಡಗಳು ಮಾತ್ರ ಅರ್ಹತೆ ಪಡೆಯಬಹುದಾದ ಪ್ಲೇಆಫ್‌ಗಳಿಗೆ ಸ್ಪರ್ಧೆಯಲ್ಲಿ ಉಳಿಯಲು ಎರಡೂ ತಂಡಗಳಿಗೆ ಗೆಲುವಿನ ಅವಶ್ಯಕತೆಯಿದೆ. ಹಾಗಿದ್ದರೆ ಉಭಯ ತಂಡಗಳ ಹೆಡ್​ ಟು ಹೆಡ್​ ಹೇಗಿವೆ ಎಂದು ನೋಡೋಣ ಬನ್ನಿ.

ಪಂದ್ಯದ ವಿವರ:

ಇಂದಿನ 33ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 7ಕ್ಕೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ಈ ಮೈದಾನದಲ್ಲಿ ಆಡಿದ 11 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿದೆ. ಹೀಗಾಗಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಇದೆ. ಕೊನೆಯ ಪಂದ್ಯದಲ್ಲಿ ಬ್ಯಾಟರ್‌ಗಳು ಉತ್ತಮ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: DC vs PBKS: ಪಂಜಾಬ್​ ಕಿಂಗ್ಸ್​​ ಕಳಪೆ ಪ್ರದರ್ಶನ, ಡೆಲ್ಲಿ ಕ್ಯಾಪಿಟಲ್ಸ್​ಗೆ ಸುಲಭ ಜಯ!

MI - CSK ಹೆಡ್​ ಟು ಹೆಡ್​:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ತಂಡಗಳು ಈವರೆಗೆ ಐಪಿಎಲ್​ ನಲ್ಲಿ 32 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 19 ಬಾರಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿದೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ವಿರುದ್ಧ 13 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಅಂಕಿಅಂಶಗಳನ್ನು ಗಮನಿಸಿದರೆ ಮುಂಬೈ ಸಿಎಸ್​ಕೆ ವಿರುದ್ಧ ಹೆಚ್ಚು ಗೆದ್ದಿದೆ. ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಹೆಚ್ಚು ಕಳಪೆಯಾಗಿರುವುದರಿಂದ ಈ ಅಂಕಿಅಂಶಗಳು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:

ಈ ಬಾರಿ ಐಪಿಎಲ್​ ನಲ್ಲಿ ಉಭಯ ತಂಡಗಳ ಪ್ರದರ್ಶನ ಕಳಪೆಯಾಗಿದೆ. ಈವೆರಗೂ ಆಡಿರುವ ಪಂದ್ಯಗಳಲ್ಲಿ ಎರಡೂ ತಂಡಗಳು ಗೆಲುವಿಗಿಂತ ಹಚ್ಚು ಸೋಲನ್ನೇ ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿದ್ದು, 1ರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು, ಮುಂಬೈ ಇಂಡಿಯನ್ಸ್ ತಂಡವು ಆಡಿರುವ 6 ಪಂದ್ಯದಲ್ಲಿ 6ರಲ್ಲಿಯೂ ಸೋಲನ್ನು ಕಾಣುವ ಮೂಲಕ 10ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2022 KKR vs RR: ಕೆಕೆಆರ್​ ಮೇಲೆ ರೈಡ್ ಮಾಡುತ್ತಾ ರಾಜಸ್ಥಾನ್? ಹೇಗಿದೆ ಉಭಯ ತಂಡಗಳ ಬಲಾಬಲ

ಮುಂಬೈ ಮತ್ತು ಚೆನ್ನೈ ತಂಡದ ಸಂಭಾವ್ಯ ತಂಡ:

ಚೆನ್ನೈ ಸೂಪರ್ ಕಿಂಗ್ಸ್: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (c), ಎಂಎಸ್ ಧೋನಿ (WK), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (c), ಇಶಾನ್ ಕಿಶನ್ (wk), ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಜಯದೇವ್ ಉನದ್ಕತ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್
Published by:shrikrishna bhat
First published: