MS Dhoni: ಬ್ಯಾಟಿಂಗ್​ಗೂ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಏಕೆ? ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಮಿಶ್ರಾ

ಧೋನಿ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಬರುವ ಮೊದಲು ಬ್ಯಾಟ್ ಅನ್ನು ಬಾಯಿಯಿಂದ ಕಚ್ಚುವುದನ್ನು ಕಾಣಬಹುದು. ಧೋನಿಯ ಈ ಅಭ್ಯಾಸಕ್ಕೆ ಕಾರಣವನ್ನು ಅವರ ಹಳೆಯ ಸಹೋದ್ಯೋಗಿ ಅಮಿತ್ ಮಿಶ್ರಾ ಬಹಿರಂಗ ಪಡಿಸಿದ್ದಾರೆ.

ಡೆಲ್ಲಿ ಪಂದ್ಯದಲ್ಲಿ ಧೋನಿ ಬ್ಯಾಟ್ ಕಚ್ಚುತ್ತಿರುವ ದೃಶ್ಯ

ಡೆಲ್ಲಿ ಪಂದ್ಯದಲ್ಲಿ ಧೋನಿ ಬ್ಯಾಟ್ ಕಚ್ಚುತ್ತಿರುವ ದೃಶ್ಯ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ ಸುಮಾರು ಅರ್ಧಕ್ಕಿಂತ ಹೆಚ್ಚಿನ ಪಂದ್ಯಗಳು ಈಗಾಗಲೇ ಮುಗಿದಿವೆ. ಆದರೂ ಈವರೆಗೂ ಯಾವೊಂದು ತಂಡವೂ ಸಹ ಪ್ಲೇ ಆಫ್ (Play -Off) ಹಂತಕ್ಕೆ ಅಧಿಕೃತವಾಗಿ ಕಾಲಿಟ್ಟಿಲ್ಲ. ಗುಜರಾತ್ (GT) ಮತ್ತು ಲಕ್ನೋ (LSG) ತಂಡಗಳನ್ನು ಹೊರತುಪಡಿಸಿ ಉಳಿದ ಯಾವ ತಂಡಗಳೂ ಸಹ ಪ್ಲೇ ಆಫ್ ಸನಿಹದ ಸಹ ಬಂದಿಲ್ಲ ಎಂದರೂ ತಪ್ಪಾಗಲಾರದು. ಕೊನೆಯ 2 ಸ್ಥಾನಗಳಿಗಾಗಿ ಈವರೆಗೂ 4ರಿಂದ 5 ತಂಡಗಳು ಸೆಣಸಾಡುತ್ತಿವೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ (MS Dhoni) ಮರು ನಾಯಕತ್ವ ವಹಿಸಿದ ನಂತರ ಸಿಎಸ್‌ಕೆ ಎರಡನೇ ಬಾರಿಗೆ ಗೆದ್ದಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ 91 ರನ್‌ಗಳಿಂದ ದೆಹಲಿ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಧೋನಿ ಕೇವಲ 8 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರು. ಧೋನಿ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಬರುವ ಮೊದಲು ಬ್ಯಾಟ್ ಅನ್ನು ಬಾಯಿಯಿಂದ ಕಚ್ಚುವುದನ್ನು ಕಾಣಬಹುದು. ಧೋನಿಯ ಈ ಅಭ್ಯಾಸಕ್ಕೆ ಕಾರಣವನ್ನು ಅವರ ಹಳೆಯ ಸಹೋದ್ಯೋಗಿ ಅಮಿತ್ ಮಿಶ್ರಾ ಬಹಿರಂಗ ಪಡಿಸಿದ್ದಾರೆ.

ಧೋನಿ ಬ್ಯಾಟ್ ಕಚ್ಚುವುದರ ಹಿಂದಿನ ರಹಸ್ಯ ಬಿಚ್ಚಿಟ್ಟ ಮಿಶ್ರಾ:

ಎರಡು ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾಗೆ ನೆರವಾಗಿರುವ ಧೋನಿ ಬ್ಯಾಟ್ ಕ್ಲೀನ್ ಮಾಡಲು ಹೀಗೆ ಮಾಡುತ್ತಾರೆ ಎಂದು ಮಿಶ್ರಾ ಹೇಳಿದ್ದಾರೆ. ಬ್ಯಾಟಿಂಗ್ ವೇಳೆ ಧೋನಿ ಬ್ಯಾಟ್ ಮೇಲೆ ಯಾವುದೇ ಟೇಪ್ ಅಥವಾ ನೂಲೂ ಸಹ ಇರುವುದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. ವಿಶೇಷ ಟ್ವೀಟ್‌ನಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Dinesh Karthik: ಐಪಿಎಲ್​ನಲ್ಲಿ ಧೂಳೆಬ್ಬಿಸುತ್ತಿರುವ RCB ಪ್ಲೇಯರ್​, ಟೀಂ ಇಂಡಿಯಾಗೆ ಕಮ್​ಬ್ಯಾಕ್​ ಮಾಡ್ತಾರಾ ಕಾರ್ತಿಕ್?

ಧೋನಿ ಅವರ ಬ್ಯಾಟ್ ಅನ್ನು ಏಕೆ ತಿನ್ನುತ್ತಾರೆ ಎಂದು ನೀವು ಆಗಾಗ್ಗೆ ಆಶ್ಚರ್ಯಪಟ್ಟರೆ, ಅವರು ಬ್ಯಾಟ್‌ನಲ್ಲಿರುವ ಟೇಪ್ ಅನ್ನು ತೆಗೆದುಹಾಕಲು ಅದನ್ನು ಮಾಡುತ್ತಾರೆ. ಅವರು ಕ್ಲೀನ್ ಬ್ಯಾಟ್ ಅನ್ನು ಇಷ್ಟಪಡುತ್ತಾರೆ. ಅವರು ಆಡುವಾಗ ಅವರ ಬ್ಯಾಟ್‌ನಲ್ಲಿ ಯಾವುದೇ ಟೇಪ್ ಸಹ ಕಾಣಿಸುವುದಿಲ್ಲ, 'ಎಂದು ಮಿಶ್ರಾ ಹೇಳಿದ್ದಾರೆ.





ಪ್ಲೇ ಆಫ್ ಕುರಿತು ಮಾತನಾಡಿದ ಧೋನಿ:

ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ಧೋನಿ, ‘ನಾನು ಗಣಿತದಲ್ಲಿ ಪರಿಣಿತನಲ್ಲ. ಶಾಲೆಯಲ್ಲೂ ನನಗೆ ಗಣಿತ ಒಳ್ಳೆಯ ವಿಷಯವಾಗಿರಲಿಲ್ಲ. ನಿವ್ವಳ ರನ್ ರೇಟ್ ಅನ್ನು ಪರಿಗಣಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಇತರ ಎರಡು ತಂಡಗಳನ್ನು ಆಡುವಾಗ ನೀವು ಒತ್ತಡದಲ್ಲಿ ಅಥವಾ ಹೆಚ್ಚು ಯೋಚಿಸಬೇಕಾಗಿಲ್ಲ. ಮುಂದಿನ ಪಂದ್ಯದಲ್ಲಿ ಏನು ಮಾಡಬಹುದೆಂದು ಯೋಚಿಸಬೇಕು. ನಾವು ಪ್ಲೇ ಆಫ್‌ಗೆ ಪ್ರವೇಶಿಸಿದರೆ ಒಳ್ಳೆಯದು. ಅದು ಆಗದಿದ್ದಲ್ಲಿ ಜಗತ್ತು ಕೊನೆಗೊಳ್ಳುವುದಿಲ್ಲ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2022: RCB ತಂಡಕ್ಕೆ ಫೈನಲ್ ಟಿಕೆಟ್ ಕನ್ಫರ್ಮ್, 6 ವರ್ಷಗಳ ನಂತರ ವಿಶೇಷ ಯೋಗ!

ಐಪಿಎಲ್ ವಿಷಯಗಳ ಕುರಿತು ಪ್ರತಿಕ್ರಿಯಿಸುತ್ತಿರುವ ಮಿಶ್ರ:

ಅಮಿತ್ ಮಿಶ್ರಾ ಐಪಿಎಲ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದರು. ಈ ವರ್ಷ ಅವರನ್ನು ಯಾವುದೇ ಐಪಿಎಲ್ ತಂಡ ಖರೀದಿಸಿಲ್ಲ. ಸದ್ಯ ಐಪಿಎಲ್ ಪಂದ್ಯಗಳ ವಿವಿಧ ವಿಷಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಮಹೇಂದ್ರ ಸಿಂಗ್ ಧೋನಿ ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಋತುವಿನ ಆರಂಭದಲ್ಲಿ ಅವರು ಸಿಎಸ್‌ಕೆ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದರು. ಆದರೆ, ತಂಡದ ಕಳಪೆ ಪ್ರದರ್ಶನದಿಂದಾಗಿ ಮತ್ತೆ ನಾಯಕನ ಪಟ್ಟ ಅಲಂಕರಿಸಿದ್ದಾರೆ. ಧೋನಿ ನಾಯಕರಾದ ನಂತರ ಸಿಎಸ್‌ಕೆ 3 ಪಂದ್ಯಗಳಲ್ಲಿ 2 ಗೆದ್ದು ಒಂದರಲ್ಲಿ ಸೋತಿದೆ.
Published by:shrikrishna bhat
First published: