IPL 2022: ಈ ಬಾರಿಯೂ ಚಾಂಪಿಯನ್ ಆಗ್ತಾರಾ CSK? 5ನೇ IPL ಪ್ರಶಸ್ತಿಗೆ ಮುತ್ತಿಕ್ಕಲು ಧೋನಿ ಮುಂದಿರುವ ಸವಾಲುಗಳಿವು

4 ಬಾರಿ ಚಾಂಪಿಯನ್ ಆಗಿರುವ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಆಗಿ ಧೋನಿ ಅವರಿಗೆ ಗೆಲುವಿನ ವಿಧಾಯ ಹೇಳಲು ಸಿದ್ಧತೆ ನಡೆಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಗೆ ದಿನಗಣನೆ ಅಷ್ಟೇ ಬಾಕಿ ಉಳಿದಿದೆ. ಈ ಬಾರಿ ಬರೊಬ್ಬರಿ 10 ತಂಡಗಳು ಐಪಿಎಲ್ ಕಿರೀಟ್ ಧರಿಸಲು ಸೆಣಸಾಡಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಸೆಣಸಾಡಲಿದೆ. ಈಗಾಗಲೇ ಎಲ್ಲಾ ತಂಡಗಳು ಐಪಿಎಲ್​ಗಾಗಿ ಬರದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಕೆಲ ತಂಡಗಳ ನಾಯಕರಿಗೆ ತಂಡದ ಪ್ರಮುಖ ಆಟಗಾರರ ಇಂಜೂರಿ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ನಡುವೆ 4 ಬಾರಿ ಚಾಂಪಿಯನ್ ಆಗಿರುವ ಎಂ.ಎಸ್ ಧೋನಿ (MS Dhone) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಆಗಿ ಧೋನಿ ಅವರಿಗೆ ಗೆಲುವಿನ ವಿಧಾಯ ಹೇಳಲು ಸಿದ್ಧತೆ ನಡೆಸುತ್ತಿದೆ.

ಐಪಿಎಲ್​ ನಲ್ಲಿ ಸಿಎಸ್​ಕೆ ಸಾಧನೆ:

ಐಪಿಎಲ್​ನಲ್ಲಿ ಸಿಎಸ್​ಕೆ ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ತಂಡವಾಗಿದ್ದು, 12 ಸೀಸನ್​ ಗಳಲ್ಲಿ 4 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, 5 ಬಾರಿ ರನ್ನರ್​ ಆಫ್ ಆಗಿದೆ. ಒಮ್ಮೆ ಸೇಮಿಸ್ ಮತ್ತು ಪ್ಲೇ ಆಫ್ಸ್ ಹಂತಕ್ಕೆ ತಲುಪಿತ್ತು. ಇನ್ನೊಮ್ಮೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಒಟ್ಟುಇನಲ್ಲಿ ಬರೋಬ್ಬರಿ 9 ಬಾರಿ ಫೈನಲ್ ತಲುಪಿದ ಏಕಮಾತ್ರ ತಂಡವಾಗಿ ಚೆನ್ನೈ ಗುರುತಿಸಿಕೊಂಡಿದೆ.

ಡ್ಯಾಡಿಸ್​ ಆರ್ಮಿ ಎಂದೇ ಖ್ಯಾತವಾಗಿದ್ದ ಸಿಎಸ್​ಕೆ ತಂಡದಲ್ಲಿ ಯುವ ಆಟಗಾರರಿಗಿಂತ ಅನುಭವಿ ಆಟಗಾರರೇ ಹೆಚ್ಚಾಗಿದ್ದರೂ, ಪ್ರಶಸ್ತಿ ಗೆಲ್ಲುವಲ್ಲಿ ಸಿಎಸ್​ಕೆ ಹಿಂದೇಟು ಹಾಕಲಿಲ್ಲ. ಅದರಲ್ಲಿಯೂ ಎಲ್ಲಕ್ಕಿಂತ ಮುಖ್ಯವಾಗಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮ್ಯಾಜಿಕ್ ಚೆನ್ನೈ ತಂಡದ ಮಹಾ ಶಕ್ತಿ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ: IPL 2022: ಐಪಿಎಲ್​ ಇತಿಹಾಸದಲ್ಲೇ ಹೆಚ್ಚಿನ ಗೆಲುವು ದಾಖಲಿಸಿದ ಟಾಪ್​ 4 ತಂಡಗಳು ಇವು.. ಆರ್​​ಸಿಬಿನೂ ಇದೇ ರೀ!

ಈ ಬಾರಿ ಪ್ರಶಸ್ತಿ ಗೆಲ್ಲಲು ಮಾಹಿ ಮುಂದಿರುವ ಸವಾಲುಗಳು:

ಪ್ರಮುಖ ಆಟಗಾರರ ಅಲಭ್ಯತೆ:

ಚೆನ್ನೈ ತಂಡದ ಪ್ರಮುಖ ಪ್ಲೇಯರ್​ ಆಗಿದ್ದ ಚಿನ್ನ ತಾಲಾ ಸುರೇಶ್ ರೈನಾ ಅವರನ್ನು ಈ ಬಾರಿ ಸಿಎಸ್​ಕೆ ಕೈಬಿಟ್ಟಿದೆ. ಇದು ಚೆನ್ನೈ ತಂಡಕ್ಕೆ ಪ್ರಶಸ್ತಿ ಗೆಲ್ಲುವಲ್ಲಿ ದೊಡ್ಡ ಹೊಡೆತವಾಗಲಿದೆ ಎಂದು ಕ್ರಿಕೆಟ್​ ಪಂಡಿತರು ಹೇಳುತ್ತಿದ್ದಾರೆ. ಅಲ್ಲದೇ ಕಳೆದ ಸೀಸನ್​ನಲ್ಲಿ ಚಾಂಪಿಯನ್ ಆದ ಸಿಎಸ್​ಕೆ ತಂಡದಲ್ಲಿನ ಪ್ರಮುಖ ಆಟಗಾರರನ್ನೂ ತಂಡ ಕೈಬಿಟ್ಟುದ್ದು, ಫಾಫ್ ಡುಪ್ಲೆಸಿಸ್, ಶಾರ್ದೂಲ್ ಠಾಕೂರ್, ಜೋಶ್ ಹೇಜಲ್‌ವುಡ್ ಅವರನ್ನು ಚೆನ್ನೈ ಈ ಬಾರಿ ಖರೀದಿಸಲಿಲ್ಲ. ಅದರಲ್ಲಿಯೂ ಫಾಫ್ ಡುಪ್ಲೆಸಿಸ್ ಫೈನಲ್​ ಪಂದ್ಯದಲ್ಲಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರನ್ನು ಹೊರಗಿಟ್ಟಿರುವುದು ತಂಡಕ್ಕೆ ನಷ್ಟವಾದಂತಾಗಿದೆ.

ಗಾಯಾಳುಗಳ ಸಮಸ್ಯೆ:

ಐದನೇ ಬಾರಿಗೆ ಐಪಿಎಲ್ ಗೆಲ್ಲುವ ತವಕದಲ್ಲಿರುವ ಚೆನ್ನೈ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಮ್ಮರವಾಗಿ ಬೆಳೆದು ನಿಂತಿದೆ. ಹೌದು, ಹರಾಜಿನಲ್ಲಿ ದಾಖಲೆ ಬೆಲೆಗೆ ಖರೀದಿಸಿರುವ ದೀಪಕ್ ಚಹಾರ್ ಗಾಯಗೊಂಡಿರುವ ಹಿನ್ನಲೆ, ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಈವರೆಗೂ ಖಚಿತಗೊಂಡಿಲ್ಲ. ಜೊತೆಗೆ ತಂಡದ ಸ್ಟಾರ್ ಓಪನರ್ ರುತುರಾಜ್ ಗಾಯಕ್ವಾಡ್ ಕೂಡ ಗಾಯಗೊಂಡಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ ರುತುರಾಜ್ ಆರೆಂಜ್ ಕ್ಯಾಪ್ ಗೆದ್ದಿದ್ದರು. 2021ರ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ರುತುರಾಜ್ ಮತ್ತು ದೀಪಕ್ ಚಹಾರ್ ಪ್ರಮುಖ ಕಾರಣ ಎಂದರೂ ತಪ್ಪಾಗಲಾರದು. ಈ ನಡುವೆ ಇಂಗ್ಲೆಂಡ್ ಆಲ್ ರೌಂಡರ್ ಮೊಯಿನ್ ಅಲಿ ಇನ್ನೂ ವೀಸಾ ಪಡೆದಿಲ್ಲ. ಅದರೊಂದಿಗೆ ಅವರು ಕೋಲ್ಕತ್ತಾ ವಿರುದ್ಧದ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2022: ಐಪಿಎಲ್​ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದ ದಾಂಡಿಗರು..!

ಆರಂಭಿಕರ ಸಮಸ್ಯೆ:

ರುತುರಾಜ್ ಗಾಯಗೊಂಡಿರುವ ಕಾರಣ ತಂಡಕ್ಕೆ ಆರಂಭಿಕ ಸಮಸ್ಯೆ ಎದುರಾಗಿದೆ. ಆರಂಭಿಕರಾಗಿ ಅಂತಿಮ ತಂಡದಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಪಡೆಯಲಿದ್ದಾರೆ. ಅವರಿಗೆ ಓಪನರ್ ಆಗಿ ಯಾರನ್ನು ಕಳುಹಿಸುತ್ತಾರೆ ಎಂಬುದು ಈಗ ಸಮಸ್ಯೆಯಾಗಿದೆ. ರುತುರಾಜ್ ಚೇತರಿಸಿಕೊಂಡರೆ ಉತ್ತಪ್ಪ ರುತುರಾಜ್ ಓಪನರ್ ಆಗಿ ಬರಲಿದ್ದಾರೆ. ಇಲ್ಲವಾದರೆ ಯಾರು ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಮೂಡುವಂತಾಗಿದೆ.
Published by:shrikrishna bhat
First published: