IPL 2022: ಕಮಾಲ್​ ಮಾಡೋಕೆ ರೆಡಿಯಾದ ಓಪನರ್ಸ್​.. ಇವ್ರೇ ನೋಡಿ ಟಾಪ್ 5 ಆರಂಭಿಕ ಜೋಡಿ!

ಈ ಬಾರಿ ಯಾವೆಲ್ಲಾ ತಂಡಗಳು ಅತ್ಯುತ್ತಮ ಆಟಗಾರರನ್ನು ಹೊಂದಿದೆ. ಟೂರ್ನಿಯ ಟಾಪ್ 5 ಆರಂಭಿಕ ಜೋಡಿ ಯಾವುದು? ಮುಂದೆ ನೀವೇ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಮಾರ್ಚ್ 26ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್(Play Off) ಪಂದ್ಯಗಳನ್ನು ನಡೆಯಲಿದೆ. ಈ ಬಾರಿ ಹತ್ತು ತಂಡಗಳ ಟೂರ್ನಿಯಾಗಿರುವ ಕಾರಣ ಪಂದ್ಯಾವಳಿಯ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಇದ್ದ ತಂಡಗಳ ಜೊತೆಗೆ ಹೊಸದಾಗಿ ಸೇರ್ಪಡೆಯಾಗಿರುವ ತಂಡಗಳ ಪ್ರದರ್ಶನ ಹೇಗಿರಲಿದೆ ಎಂಬುದು ಅಭಿಮಾನಿ(Fan)ಗಳ ಕಾತುರತೆಯನ್ನು ಹೆಚ್ಚಿಸಿದೆ.ಯಾವುದೇ ತಂಡ ಕೂಡ ಯಶಸ್ಸು ಸಾಧಿಸಬೇಕಾದರೆ ಆರಂಭಿಕ ಆಟಗಾರರ ಪ್ರದರ್ಶನ ಅತ್ಯಂತ ಪ್ರಮುಖವಾಗಿರುತ್ತದೆ.

ಈ ಬಾರಿ ಯಾವೆಲ್ಲಾ ತಂಡಗಳು ಅತ್ಯುತ್ತಮ ಆಟಗಾರರನ್ನು ಹೊಂದಿದೆ. ಟೂರ್ನಿಯ ಟಾಪ್ 5 ಆರಂಭಿಕ ಜೋಡಿ ಯಾವುದು? ಮುಂದೆ ನೀವೇ ನೋಡಿ..

ಆರ್​ಸಿಬಿ ಪರ ಓಪೆನಿಂಗ್​ ಮಾಡ್ತಾರೆ ಡು ಪ್ಲೆಸಿಸ್​-ಕೊಹ್ಲಿ!

ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕನಾಗಿ ಅದ್ಭುತ ಯಶಸ್ಸು ಸಾಧಿಸಿದ್ದರೆ ಈ ಬಾರಿಯ ಆರ್‌ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿ ನಾಯಕನಾಗಿ ಆಯ್ಕೆಯಾಗಿರುವ ಫಾಫ್ ಡು ಪ್ಲೆಸಿಸ್ ಅದ್ಭುತ ಆರಂಭಿಕ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಈ ಜೋಡಿ ಈ ಬಾರಿ ಆರ್‌ಸಿಬಿ ಪರವಾಗಿ ಯಾವ ರೀತಿ ಮ್ಯಾಜಿಕ್ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್, ಡೇವಿಡ್ ವಾರ್ನರ್ ಮತ್ತು ಫೃಥ್ವಿ ಶಾ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆರಂಭಿಕನಾಗಿ ಮಿಂಚಿರುವ ಪೃಥ್ವಿ ಶಾ ಅವರನ್ನು ಈ ಬಾರಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಉಳಿಸಿಕೊಂಡಿತ್ತು. ನಂತರ ನಡೆದ ಹರಾಜಿನಲ್ಲಿ ಶಿಖರ್​ ಧವನ್ ಅವರನ್ನು ಸೇರ್ಪಡೆಗೊಳಿಸಲು ವಿಫಲವಾದರು ಕೂಡ ಮತ್ತೋರ್ವ ಐಪಿಎಲ್ ಕಂಡ ಅದ್ಭುತ ಆರಂಭಿಕರಲ್ಲೊ ಒಬ್ಬರಾಗಿರುವ ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪೋಟಕ ಆರಂಭಿಕ ಆಟಗಾರರನ್ನು ಹೊಂದಿದಂತಾಗಿದೆ.

ಇದನ್ನೂ ಓದಿ: IPL ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರು ಬ್ಯಾನ್ ಆಗಿರುವುದೇಕೆ?

ಪಂಜಾಬ್ ಕಿಂಗ್ಸ್- ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್

ಭಾರತೀಯ ತಂಡದ ಆಟಗಾರರಾದ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಈ ಬಾರಿಯ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಜೊತೆಯಾಗಿ ಆಡಲಿದ್ದಾರೆ. ಮಯಾಂಕ್​ ಅಗವಾರ್ಲ್ ನಾಯಕನಾಗಿ ಆಯ್ಕೆಯಾಗಿದ್ದರೆ ಸ್ಪೋಟಕ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಹರಾಜಿನ ಮೂಲಕ ತೆಕ್ಕೆಗೆ ಹಾಕಿಕೊಳ್ಳಲು ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ. ಈ ಇಬ್ಬರು ಆಟಗಾರರು ಈ ಬಾರಿ ಪಂಜಾಬ್ ಕಿಂಗ್ಸ್ ಪರವಾಗಿ ಆರಂಭಿಕರಾಗಿ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ,

ಲಕ್ನೋ ಸೂಪರ್​ ಜೈಂಟ್ಸ್​​- ಕೆ.ಎಲ್​.ರಾಹುಲ್​, ಕ್ವಿಂಟನ್​ ಡಿ ಕಾಕ್​!

ಈ ಬಾರಿಯ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ತಂಡಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ಒಂದು. ಹರಾಜಿಗೂ ಮುನ್ನ ಲಕ್ನೋ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ನಂತರ ಹರಾಜಿನಲ್ಲಿ ದಕ್ಷಿಣ ಆಫ್ರಿಖಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಅವರನ್ನು ಕೂಡ ತಂಡ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಈ ಇಬ್ಬರು ಆಟಗಾರರು ಕೂಡ ತಮ್ಮ ತಮ್ಮ ತಂಡಗಳ ಪರವಾಗಿ ಆರಂಭಿಕರಾಗಿ ಅತ್ಯುತ್ತಮ ಯಶಸ್ಸು ಸಾಧಿಸಿದ್ದು ಈ ಬಾರಿ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ.


ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ-ಇಶಾನ್ ಕಿಶನ್


ಮುಂಬೈ ಇಂಡಿಯನ್ಸ್ ರಂಡದ ಆರಂಭಿಕ ಜೋಡಿ ಈಗಲೂ ಟಾಪ್ 5ರಲ್ಲಿ ಕಾಣಿಸಿಕೊಳ್ಳುವುದಲ್ಲಿ ಅನುಮಾನವಿಲ್ಲ. ನಾಯಕ ರೋಹಿತ್ ಶರ್ಮಾಗೆ ಯುವ ಆಟಗಾರ ಇಶಾನ್ ಕಿಶನ್ ಆರಂಭಿಕನಾಗಿ ಈ ಬಾರಿಯ ಟೂರ್ನಿಯಲ್ಲಿ ಸಾಥ್ ನೀಡಲಿದ್ದಾರೆ. ಇಶಾನ್ ಕಿಶನ್ ಐಪಿಎಲ್‌ನಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ತಂಡದ ಪರವಾಗಿಯೂ ಆರಂಭಿಕನಾಗಿ ಸಮರ್ಥ ಎಂದು ಸಿಕ್ಕ ಅವಕಾಶದಲ್ಲಿ ಸಾಬೀತುಪಡಿಸಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಆರಂಭಿಕನಾಗಿ ನಾಯಕ ರೋಹಿತ್ ಶರ್ಮಾಗೆ ಸಾಥ್ ನೀಡಲು ಸಜ್ಜಾಗಿದ್ದಾರೆ.
Published by:Vasudeva M
First published: