IPL 2022: ಐಪಿಎಲ್​ ಲೈವ್​ ಮ್ಯಾಚ್​ ನೋಡ್ಬೇಕು ಅಂತ ಆಸೆನಾ? ಟಿಕೆಟ್​ ಬುಕ್​ ಮಾಡೋಕೆ ಜಸ್ಟ್​ ಹೀಗ್​ ಮಾಡಿ..

ಆನ್‌ಲೈನ್‌ ವೆಬ್‌ಸೈಟ್ ಮೂಲಕ ಐಪಿಎಲ್‌ 2022ರ ಟಿಕೆಟ್‌ಗಳನ್ನು ಪಡೆಯಲು ಹಲವು ಹಂತಗಳ ಪ್ರಕ್ರಿಯೆಗಳಿವೆ. 2022ರ ಐಪಿಎಲ್‌ ಪಂದ್ಯಾವಳಿಯ ಟಿಕೆಟ್‌ಗಳನ್ನು ಪೇಟಿಎಂ (Paytm), ಬುಕ್‌ ಮೈ ಶೋ (Bookmyshow) ಮೂಲಕ ಹಾಗೂ ಇನ್ನಿತರ ಆನ್‌ಲೈನ್‌ ವೆಬ್‌ಗಳ ಮೂಲಕವೂ ಪಡೆಯಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವ ಕ್ರಿಕೆಟ್‌(Cricket)ನ ಪ್ರತಿಷ್ಠಿತ ಹಾಗೂ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನಿಸಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್(Indian Premier League)-2022 ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳು(Cricket Lovers) ಚುಟುಕು ಕ್ರಿಕೆಟ್‌ನ ಮಹಾಸಮರವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಐಪಿಎಲ್‌-2022ರ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಕೋವಿಡ್‌-19 ಆತಂಕ ಕಡಿಮೆಯಾದ ಹಿನ್ನೆಲೆಯಲ್ಲಿ ಐಪಿಎಲ್‌ ವೀಕ್ಷಣೆಗೆ ಪ್ರೇಕ್ಷಕರಿಗೆ ಈ ಬಾರಿ ಅವಕಾಶ ನೀಡಿದ್ದು, ಮೈದಾನದಲ್ಲಿ ಐಪಿಎಲ್‌ ಪಂದ್ಯ ವೀಕ್ಷಿಸಲು ಬಯಸುವ ಕ್ರಿಕೆಟ್‌ ಪ್ರೇಮಿಗಳು IPL Ticket Booking ಮೂಲಕ ಟಿಕೆಟ್‌ ಪಡೆಯಲು ಅವಕಾಶವಿದೆ.

ಮಾರ್ಚ್ 26ರಿಂದ ಚುಟುಕು ಸಮರ ಶುರು!

ಬಿಸಿಸಿಐ ಈಗಾಗಲೇ 15ನೇ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಂದ್ಯ ಮಾರ್ಚ್‌ 26ರಂದು ನಡೆಯಲಿದ್ದು, 2ನೇ ಪಂದ್ಯ ಮಾರ್ಚ್‌ 27ರಂದು ನಡೆಯಲಿದೆ. 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿ ಆಗಲಿವೆ.

ಪೇಟಿಎಂ, ಬುಕ್​ ಮೈ ಶೋನಲ್ಲಿ ಸಿಗುತ್ತೆ ಟಿಕೆಟ್​!

ಆನ್‌ಲೈನ್‌ ವೆಬ್‌ಸೈಟ್ ಮೂಲಕ ಐಪಿಎಲ್‌ 2022ರ ಟಿಕೆಟ್‌ಗಳನ್ನು ಪಡೆಯಲು ಹಲವು ಹಂತಗಳ ಪ್ರಕ್ರಿಯೆಗಳಿವೆ. 2022ರ ಐಪಿಎಲ್‌ ಪಂದ್ಯಾವಳಿಯ ಟಿಕೆಟ್‌ಗಳನ್ನು ಪೇಟಿಎಂ (Paytm), ಬುಕ್‌ ಮೈ ಶೋ (Bookmyshow) ಮೂಲಕ ಹಾಗೂ ಇನ್ನಿತರ ಆನ್‌ಲೈನ್‌ ವೆಬ್‌ಗಳ ಮೂಲಕವೂ ಪಡೆಯಬಹುದಾಗಿದೆ. ಆನ್‌ಲೈನ್‌ ಮೂಲಕ ಐಪಿಎಲ್‌ ಟಿಕೆಟ್‌ ಖರೀದಿಸುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ.

ಇದನ್ನೂ ಓದಿ: ವ್ಹಾವ್​.. ಇವ್ರೆ ನೋಡಿ ಈ ಬಾರಿ ಐಪಿಎಲ್​ ನಡೆಸಿಕೊಡೋ ಸುಂದರ ನಿರೂಪಕಿಯರು!

2022ರ ಐಪಿಎಲ್‌ ಪಂದ್ಯಾವಳಿಯ ಮೆಗಾ ಹರಾಜು ಪ್ರಕ್ರಿಯೆ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದು, ಎಲ್ಲಾ ಫ್ರಾಂಚೈಸಿಗಳು ಆಟಗಾರರನ್ನ ತಮ್ಮ ಫ್ರಾಂಚೈಸಿಗಳಿಗೆ ಖರೀದಿ ಮಾಡಿದ್ದಾರೆ. ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ಹೊಸದಾಗಿ ಸೇರ್ಪಡೆಗೊಂಡಿವೆ. ಐಪಿಎಲ್‌ ಆರಂಭಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು, ವಿವಿಧ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸುವ ಮೂಲಕ ಮೈದಾನದಲ್ಲಿ ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಲು ಎದುರು ನೋಡುತ್ತಿದ್ದಾರೆ.

IPL ಟಿಕೆಟ್‌ ಬುಕ್ಕಿಂಗ್‌ ಆರಂಭದ ದಿನ

ಹಲವು ಕಡೆಗಳಲ್ಲಿ ಐಪಿಎಲ್‌-2022 ಪಂದ್ಯಾವಳಿಯ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ. ಟಾಟಾ ಐಪಿಎಲ್‌ 2022ರ ಟಿಕೆಟ್‌ಗಳು ಅಧಿಕೃತ ಪಾರ್ಟ್ನರ್‌ಗಳಾದ BookMyShow, Insider.in, Ticket Genie, Events Now ಹಾಗೂ Paytm ಮೂಲಕ ಪಡೆಯಬಹುದಾಗಿದೆ. ಇದರ ಜೊತೆಗೆ ಈ ಬಾರಿ ಹೆಚ್ಚುವರಿಯಾಗಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ತಂಡಗಳೊಂದಿಗೆ ಸಂಯೋಜನೆಗೊಂಡಿರುವ ವಿವಿಧ ವೆಬ್‌ಸೈಟ್‌ ಮೂಲಕವೂ ಖರೀದಿಸಬಹುದು. ಜೊತೆಗೆ ಪ್ರತಿ ಫ್ರಾಂಚೈಸಿಗಳು ತನ್ನ ಸೇವೆಗಳನ್ನು BookMyShow ಹಾಗೂ Paytm ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಪಡೆದಿವೆ.

400 ರೂಪಾಯಿಯಿಂದ ಬೆಲೆ ಆರಂಭ!

ಐಪಿಎಲ್‌ನ ಸಾಮಾನ್ಯ ಟಿಕೆಟ್‌ ದರ 400 ರೂ. ಗಳಿಂದ ಆರಂಭವಾಗಲಿದ್ದು, ವಿವಿಧ ಸ್ಟ್ಯಾಂಡ್‌ಗಳು ಹಾಗೂ ಸೌಲಭ್ಯಗಳಿಗೆ ಅನುಗುಣವಾಗಿ ದರ ನಿಗದಿಯಾಗಿದೆ. ಆದರೆ ಕಡಿಮೆ ಮೊತ್ತದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಖರೀದಿಸಲು ಅವಕಾಶ ಇಲ್ಲದಿರುವುದರಿಂದ ನೇರವಾಗಿ ಸ್ಟೇಡಿಯಂಗಳಿಗೆ ತೆರಳಿ ಖರೀದಿಸಬೇಕಿದೆ.

ಇದನ್ನೂ ಓದಿ: ಅಂದು ಮಿಸ್ಟರ್​ ಐಪಿಎಲ್​.. ಇಂದು ಅದೇ ಟೂರ್ನಿಗೆ ಆ್ಯಂಕರ್​, ಖುಷಿಯಿಂದಲೇ ಬರ್ತೀನಿ ಎಂದ ರೈನಾ!

ಆನ್‌ಲೈನ್‌ನಲ್ಲಿ IPL ಟಿಕೆಟ್‌ ಖರೀದಿಸುವುದು ಹೇಗೆ..?

  • ಮೊದಲಿಗೆ ಐಪಿಎಲ್‌ ಟಿಕೆಟ್‌ ಬುಕ್ಕಿಂಗ್‌ ಅಧಿಕೃತ ವೆಬ್‌ಸೈಟ್‌ ಅಥವಾ ಐಪಿಎಲ್‌ ಟಿಕೆಟ್‌ ದೊರೆಯುವ BookMyShow ಹಾಗೂ Paytm ಆ್ಯಪ್‌ಗಳನ್ನ ಗಮನಿಸಬೇಕು

  • ವೆಬ್‌ಸೈಟ್‌ನಲ್ಲಿ ಲಾಗಿನ್‌ ಆದ ನಂತರದಲ್ಲಿ ನಿಮ್ಮ ಅಕೌಂಟ್‌ನ ಡ್ಯಾಶ್‌ ಬೋರ್ಡ್‌ ಬರಲಿದೆ

  • ಸ್ಪೋರ್ಟ್ಸ್‌ ಸೆಕ್ಷನ್‌ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಐಪಿಎಲ್‌ 2022 ಕ್ಲಿಕ್‌ ಮಾಡಬೇಕು

  • ಡ್ರಾಪ್‌ ಡೌನ್‌ ಮೆನು ಕ್ಲಿಕ್‌ ಮಾಡಿ, ತಮಗೆ ಅಗತ್ಯವಿರುವ ಪಂದ್ಯದ ಮಾಹಿತಿ ಪಡೆಯಬಹುದು

  • ಸೀಟಿಂಗ್‌ ಏರಿಯಾ ಮತ್ತು ಅಗತ್ಯವಿರುವ ಒಟ್ಟು ಟಿಕೆಟ್‌ಗಳನ್ನ ನಮೂದಿಸಬೇಕು

  • ಆನ್‌ಲೈನ್‌ ಪೇಮೆಂಟ್‌ ಮಾಡಿದ ಬಳಿಕ ಪೇಮೆಂಟ್‌ ಯಶಸ್ವಿಯಾದರೆ ಇ-ಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕ ಟಿಕೆಟ್‌ ಖರೀದಿಸಿದ ಬಗ್ಗೆ ಮಾಹಿತಿ ಲಭಿಸಲಿದೆ

  • ಒಂದೊಮ್ಮೆ ಟಿಕೆಟ್‌ಗಳನ್ನ ಹೋಮ್‌ ಡೆಲಿವರಿ ಆಯ್ಕೆ ಮಾಡಿದರೆ, ಪಂದ್ಯ ನಡೆಯುವ 3-4 ದಿನಗಳ ಮೊದಲು ಟಿಕೆಟ್‌ ನಿಮ್ಮ ಮನೆಗೆ ತಲುಪಲಿದೆ ಅಥವಾ ಟಿಕೆಟ್‌ ಖರೀದಿಸಿದ ಮಾಹಿತಿ ನೀಡಿದ ಪ್ರತಿಯನ್ನು ಪ್ರಿಂಟ್‌ ಔಟ್‌ ಪಡೆದು ಸಹ ಟಿಕೆಟ್‌ ಪಡೆಯಬಹುದು

Published by:Vasudeva M
First published: