IPL 2022: ಇವ್ರ್​​ ಆಡದೇ ಇರೋ ಟೀಮ್​ ಇಲ್ಲ.. 9ನೇ ತಂಡದ ಪರ ಬ್ಯಾಟ್ ಬೀಸಲು ರೆಡಿಯಾದ ಪ್ಲೇಯರ್​ ಯಾರ್​ ಗೊತ್ತಾ?

ಮೊದಲು ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಈ ಆಟಗಾರನನ್ನು ತಂಡವೊಂದು ರಿಪ್ಲೆಸ್​ಮೆಂಟ್​ಗಾಗಿ ಖರೀದಿ ಮಾಡಿತ್ತು. ಇದೀಗ ಅವರ ಆ ತಂಡದ ಪರ ಆಡೋಕೆ ಸಜ್ಜಾಗಿದ್ದಾರೆ. ಈ ತಂಡವೂ ಸೇರಿದರೆ ಒಟ್ಟು 9ನೇ ತಂಡದೊಂದಿಗೆ ಈ ಆಟಗಾರ ಬ್ಯಾಟ್​ ಬೀಸುತ್ತಿದ್ದಾರೆ. ಯಾರಪ್ಪ ಅದು ಅಂತೀರಾ? ಮುಂದೆ ನೀವೇ ನೋಡಿ.

ಆರೋನ್​ ಫಿಂಚ್​

ಆರೋನ್​ ಫಿಂಚ್​

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳು ಕಣಕ್ಕಿಳಿದಿದ್ದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ. ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು(Fans) ಕೂಡ ಸಜ್ಜಾಗುತ್ತಿದ್ದಾರೆ. ಆದರೆ, ಇಲ್ಲೊಬ್ಬ ವಿದೇಶಿ ಆಟಗಾರನೊಬ್ಬ ಸಖತ್ ಸೌಂಡ್​ ಮಾಡುತ್ತಿದ್ದಾರೆ. ಮೊದಲು ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಈ ಆಟಗಾರನನ್ನು ತಂಡವೊಂದು ರಿಪ್ಲೆಸ್​ಮೆಂಟ್​ಗಾಗಿ ಖರೀದಿ ಮಾಡಿತ್ತು. ಇದೀಗ ಅವರ ಆ ತಂಡದ ಪರ ಆಡೋಕೆ ಸಜ್ಜಾಗಿದ್ದಾರೆ. ಈ ತಂಡವೂ ಸೇರಿದರೆ ಒಟ್ಟು 9ನೇ ತಂಡದೊಂದಿಗೆ ಈ ಆಟಗಾರ ಬ್ಯಾಟ್​ ಬೀಸುತ್ತಿದ್ದಾರೆ. ಯಾರಪ್ಪ ಅದು ಅಂತೀರಾ? ಮುಂದೆ ನೀವೇ ನೋಡಿ.

9ನೇ ತಂಡದ ಪರವಾಗಿ ಆಡಲು ಸಜ್ಜಾದ ಆರೋನ್​ ಫಿಂಚ್​!

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗದೆ ಉಳಿದುಕೊಂಡಿದ್ದರೂ ಬದಲಿ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಳ್ಳುವ ಮೂಲಕ ಫಿಂಚ್ ಐಪಿಎಲ್‌ನಲ್ಲಿ 9ನೇ ತಂಡದ ಪರವಾಗಿ ಆಡಲು ಸಜ್ಜಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ತಂಡಗಳನ್ನು ಪ್ರತಿನಿಧಿಸುತ್ತಿರುವ ವಿಶೇಷ ದಾಖಲೆಗೂ ಫಿಂಚ್ ಪಾತ್ರರಾಗಿದ್ದಾರೆ. ಈ ದಾಖಲೆಯನ್ನು ನೋಡಿದ ಕ್ರಿಕೆಟ್​ ಅಭಿಮಾನಿಗಳು ಆರೋನ್​ ಫಿಂಚ್​ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: KKR ತಂಡಕ್ಕೆ ಯಂಗ್​ & ಎನರ್ಜಿಟಿಕ್​​ ಕ್ಯಾಪ್ಟನ್​! ಈ ಸಲ ಕಪ್​ ಗೆಲ್ಲೋದು ನಾವೇ ಎಂದ ಶ್ರೇಯಸ್​ ಅಯ್ಯರ್​

ಕಳೆದ ಆವೃತ್ತಿಯಲ್ಲಿ ಆರ್​​ಸಿಬಿ ಪರ ಆಡಿದ್ದ ಫಿಂಚ್​!

2020ರ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಆರೋನ್​ ಫಿಂಚ್​ ಆಡಿದ್ದರು. ಇದೀಗ ಕೆಕೆಆರ್ ತಂಡದ ಪರವಾಗಿ ಆಡುವ ಮೂಲಕ 9ನೇ ತಂಡದೊಂದಿಗೆ ಕಣಕ್ಕಿಳಿಯಲು ಫಿಂಚ್​ ಸಜ್ಜಾಗಿದ್ದಾರೆ. 2010ರಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದ ಫಿಂಚ್ ನಂತರ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್, ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಹಾಗೂ ಪಂಜಾಬ್ ಕಿಂಗ್ಸ ತಂಡದಲ್ಲಿ ಬ್ಯಾಟ್​ ಬೀಸಿದ್ದರು.

ಇದನ್ನೂ ಓದಿ: 1.70 ಕೋಟಿ ಹಣವನ್ನು ಹೇಗೆ ಖರ್ಚು ಮಾಡುವಿರಿ? ಅಪ್ಪನಿಗೆ ಮನೆ ಕೊಡಿಸುವೆ ಎಂದು ಭಾವುಕನಾದ ಕ್ರಿಕೆಟಿಗ!

ಒಂದು ತಂಡದ ಜೆರ್ಸಿ ಮಿಸ್ಸಾಗಿದೆ ಎಂದ ಆರೋನ್​ ಫಿಂಚ್​​

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋನ್​ ಫಿಂಚ್​​ ‘ಐಪಿಎಲ್‌ನಲ್ಲಿ ಒಂದು ತಂಡದ ಜರ್ಸಿ ಮಿಸ್ಸಾಗಿದೆ. ಅದು ಯಾವುದು ಎಂಬುದು ನೆನಪಾಗ್ತಿಲ್ಲ’ ಎಂದು ತಮಾಷೆ ಮಾಡಿದ್ದಾರೆ.ಆಸ್ಟ್ರೇಲಿಯಾ ತಂಡದ ಸೀಮಿತ ಓವರ್‌ಗಳ ನಾಯಕನಾಗಿರುವ ಆರೋನ್ ಫಿಂಚ್ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿರುವ ಕಾರಣ ಆರಂಭಿಕ ಕೆಲ ಪಂದ್ಯಗಳಲ್ಲಿ ಭಾಗಿಯಾಗುವುದು ಅನುಮಾನವಾಗಿದೆ. ಕೆಕೆಆರ್ ತಂಡವನ್ನು ಕೂಡಿಕೊಂಡ ಬಳಿಕವೂ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳಲು ಫಿಂಚ್ ಸಾಕಷ್ಟು ಸ್ಪರ್ಧೆಯನ್ನು ತಂಡದ ಒಳಗೆ ಎದುರಿಸಬೇಕಿದೆ.

ಅಭ್ಯಾಸ ಆರಂಭಿಸಿದ ಆರ್​ಸಿಬಿ ಬಾಯ್ಸ್​!

ಮಾರ್ಚ್ 27 ರಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಶುರು ಮಾಡಲಿದೆ. ಈಗಾಗಲೇ ಎಲ್ಲ ತಂಡಯಗಳು ಅಭ್ಯಾಸವನ್ನು ಶುರು ಮಾಡಿದೆ.ಇತ್ತ ಆರ್​ಸಿಬಿ ವಿಚಾರಕ್ಕೆ ಬಂದರೆ,  ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಾಯಕರುಗಳ ರೇಸ್​ನಲ್ಲಿ ಫಾಫ್ ಡು ಪ್ಲೆಸಿಸ್​ ಜೊತೆಗೆ ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಹೆಸರುಗಳಿತ್ತು. ಅಂತಿಮವಾಗಿ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್​ಗೆ ಮಣೆಹಾಕಿದೆ. ಇದೀಗ ಆಟಗಾರರು ಗ್ರೌಂಡ್​ಗೆ ಇಳಿದು ಅಭ್ಯಾಸ ನಡೆಸುತ್ತಿದ್ದಾರೆ
Published by:Vasudeva M
First published: