• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Team India: ರೋಹಿತ್ ಶರ್ಮಾಗೆ ಹೆಚ್ಚಿದ ತಲೆನೋವು, ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ

Team India: ರೋಹಿತ್ ಶರ್ಮಾಗೆ ಹೆಚ್ಚಿದ ತಲೆನೋವು, ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೀಂ ಇಂಡಿಯಾದಲ್ಲಿ ಗಾಯಗೊಂಡಿರುವ ಆಟಗಾರರ ಸಂಖ್ಯೆಯೂ ಹೆಚ್ಚಿದ್ದು, ನಾಯಕ ರೋಹಿತ್ ಶರ್ಮಾಗೆ (Rohit Sharma) ತಲೆನೋವಾಗಿದೆ. ಸದ್ಯ ಟೀಂ ಇಂಡಿಯಾದ ಐವರು ಆಟಗಾರರು ಗಾಯಗೊಂಡಿದ್ದಾರೆ.

  • Share this:

ಐಪಿಎಲ್ 2022 (IPL 2022) ಟೂರ್ನಿ ಇದೀಗ ಅಂತಿಮ ಹಂತದಲ್ಲಿದೆ. ಇನ್ನೇನು ಕೆಲ ಪಂದ್ಯಗಳು ಮುಗಿದಲ್ಲಿ ಲೀಗ್ ಹಂತದ ಎಲ್ಲಾ ಪಂದ್ಯಗಳೂ ಅಂತ್ಯವಾಗುತ್ತದೆ. ನಂತರ ಪ್ಲೇ ಆಪ್ (Play Off) ಮತ್ತು ಫೈನಲ್ ಪಂದ್ಯಗಳು ಮಾತ್ರ ನಡಯುವ ಮೂಲಕ ಮೇ 29ರಂದು ಐಪಿಎಲ್ 2022ರ 15ನೇ ಆವೃತ್ತಿಗೆ ಅಧಿಕೃತವಾಗಿ ತೆರೆಬೀಳಿದೆ. ಇದಾದ ನಂತರ ಟೀಂ ಇಂಡಿಯಾಗೆ (Team India) ಸಾಲು ಸಾಲು ಸರಣಿಗಳು ಆರಂಭವಾಗಲಿದೆ. ಅದರಲ್ಲಿಯೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತೆ ದೊಡ್ಡ ತಂಡಗಳ ನಡುವೆ ಸರಣಿಗಳನ್ನುಆ ಯೋಜಿಸಲಾಗಿದೆ. ಇದೇ ವೇಳೆ ಟೀಂ ಇಂಡಿಯಾದಲ್ಲಿ ಗಾಯಗೊಂಡಿರುವ ಆಟಗಾರರ ಸಂಖ್ಯೆಯೂ ಹೆಚ್ಚಿದ್ದು, ನಾಯಕ ರೋಹಿತ್ ಶರ್ಮಾಗೆ (Rohit Sharma) ತಲೆನೋವಾಗಿದೆ. ಸದ್ಯ ಟೀಂ ಇಂಡಿಯಾದ ಐವರು ಆಟಗಾರರು ಗಾಯಗೊಂಡಿದ್ದಾರೆ. ಮುಂಬರುವ ಅಂತರಾಷ್ಟ್ರೀಯ ಸರಣಿ ಹಾಗೂ ಟಿ20 ವಿಶ್ವಕಪ್‌ಗೆ ಸಿದ್ಧತೆಗಳ ಮೇಲೆ ಹೊಡೆತ ಬೀಳಲಿದೆ. ಸದ್ಯ ಟೀಂ ಇಂಡಿಯಾದ ಯಾವ ಆಟಗಾರರು ಗಾಯಗೊಂಡಿದ್ದಾರೆ ಎಂಬುದನ್ನು ತಿಳಿಯೋಣ.


ತಂಡದಲ್ಲಿ ಹೆಚ್ಚಿದ ಗಾಯಾಳುಗಳ ಸಮಸ್ಯೆ:


ಇನ್ನು, ಐಪಿಎಲ್ ನಂತರ ಟೀಂ ಇಂಡಿಯಾ ಕೆಲ ಸರಣಿಗಳನ್ನು ಆಡಲಿದೆ. ಇದರ ನಡುವೆ ಭಾರತ ತಂಡದಲ್ಲಿ ಗಾಯಾಳುಗಳ ಸಮಸ್ಯೆ ತೆದೂರಿದೆ. ಹೌದು, ರವೀಂದ್ರ ಜಡೇಜಾ, ದೀಪಕ್ ಚಹಾರ್, ಸೂರ್ಯ ಕುಮಾರ್ ಯಾದವ್, ಟಿ. ನಟರಾಜನ್, ವಾಷಿಂಗ್ಟನ್ ಸೇರಿ ಒಟ್ಟು 5 ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.


ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಟಗಾರರು:


ದೀಪಕ್ ಚಹಾರ್: ಚೆನ್ನೈ ಸೂಪರ್ ಕಿಂಗ್ಸ್ (CSK) ದೀಪಕ್ ಚಹಾರ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿತ್ತು. ಅವರು ಐಪಿಎಲ್ ಹರಾಜಿನಲ್ಲಿ ಎರಡನೇ ಪ್ರಮುಖ ಆಟಗಾರರಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ದೀಪಕ್‌ಗೆ ಐಪಿಎಲ್‌ನ ಯಾವ ಪಂದ್ಯವನ್ನು ಆಡಲಾಗಲಿಲ್ಲ. ಅವರ ಅನುಪಸ್ಥಿತಿಯ ದೊಡ್ಡ ಹೊಡೆತ ಸಿಎಸ್‌ಕೆ ಮೇಲೆ ಬಿದ್ದಿತು. ಅದೇ ಸಮಯದಲ್ಲಿ, ಇವರ ಅನುಪಸ್ಥಿತಿ ಇದೀಗ ಟೀಮ್ ಇಂಡಿಯಾದ ಮೇಲೂ ಬೀಳುವ ಸಾಧ್ಯತೆ ಇದೆ.


ಇದನ್ನೂ ಓದಿ: IPL 2022 RCB vs PBKS: ಬೆಂಗಳೂರು ತಂಡಕ್ಕೆ ಪಂಜಾಬ್ ಸವಾಲ್, ಹೇಗಿದೆ ಉಭಯ ತಂಡಗಳ ಬಲಾಬಲ


ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಅಂದಿನಿಂದ ಅವರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ವರ್ಷ ಉತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ 3 ವಾರಗಳ ಕಾಲ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು.


ರವೀಂದ್ರ ಜಡೇಜಾ: ಟೀಂ ಇಂಡಿಯಾದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಐಪಿಎಲ್ ಸೀಸನ್ ಕೆಟ್ಟದಾಗಿದೆ. 8 ಪಂದ್ಯಗಳ ನಂತರ ಅವರು ಸಿಎಸ್‌ಕೆ ನಾಯಕತ್ವವನ್ನು ತ್ಯಜಿಸಬೇಕಾಯಿತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಜಡೇಜಾ ಗಾಯಗೊಂಡಿದ್ದರು. ಹಾಗಾಗಿ ಅವರನ್ನೂ ಐಪಿಎಲ್‌ನಿಂದ ಕೈಬಿಡಲಾಗಿದೆ. ಜಡೇಜಾ ಗಾಯಗೊಂಡಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿದೆ.


ವಾಷಿಂಗ್ಟನ್ ಸುಂದರ್: ಟೀಂ ಇಂಡಿಯಾದ ಕಿರಿಯ ಆಟಗಾರ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಸುಂದರ್ ಈ ಬಾರಿಯ ಐಪಿಎಲ್ ಋತುವಿನಲ್ಲಿ ಎರಡು ಬಾರಿ ಗಾಯಗೊಂಡಿದ್ದಾರೆ. ಇವರ ಮೇಲೂ ಟೀಂ ಇಂಡಿಯಾ ಭರವಸೆಯನ್ನು ಇಟ್ಟುಕೊಂಡಿತ್ತು. ಆದರೆ ಇದೀಗ ಗಾಯದ ಸಮಸ್ಯೆ ತಲೆದುರಿದೆ.


ಇದನ್ನೂ ಓದಿ: Team India: ವಿಶ್ವಕಪ್​ಗೂ ಮುನ್ನ ಟಿ20 ಸರಣಿ ಆಡಲಿದೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಸರಣಿಯ ವೇಳಾಪಟ್ಟಿ ಬಿಡುಗಡೆ


ಟಿ. ನಟರಾಜನ್: IPL 2022 ರಲ್ಲಿ ನಟರಾಜನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಇಲ್ಲಿಯವರೆಗೆ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ಈ ಪ್ರದರ್ಶನದಿಂದಾಗಿ ಅವರ ತಂಡ ಭಾರತಕ್ಕೆ ಮರಳುವ ಸಾಧ್ಯತೆ ಹೆಚ್ಚಿತ್ತು. ಆದರೆ, ನಟರಾಜನ್ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಕೊನೆಯ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

Published by:shrikrishna bhat
First published: