ಕ್ರೀಡೆ

  • associate partner
HOME » NEWS » Sports » IPL 2020 POINTS TABLE MI JUMP TO TOP SPOT WITH 49 RUN WIN OVER KKR RMD

IPL 2020 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದ ಮುಂಬೈ; ಕೋಲ್ಕತ್ತಾಗೆ ಕೊನೆಯ ಸ್ಥಾನ

ಮುಂಬೈ ಇಂಡಿಯನ್ಸ್​, ರಾಜಸ್ಥಾನ್​ ರಾಯಲ್ಸ್​​, ಆರ್​ಸಿಬಿ, ಡೆಲ್ಲಿ, ಸಿಎಸ್​ಕೆ ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ.

news18-kannada
Updated:September 24, 2020, 8:31 AM IST
IPL 2020 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದ ಮುಂಬೈ; ಕೋಲ್ಕತ್ತಾಗೆ ಕೊನೆಯ ಸ್ಥಾನ
ರೋಹಿತ್ ಶರ್ಮಾ - ಕ್ವಿಂಟನ್ ಡಿಕಾಕ್.
  • Share this:
ಐಪಿಎಲ್​ನ 5ನೇ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 49 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್  ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಇಳಿದ ಮುಂಬೈ ಇಂಡಿಯನ್ಸ್​ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದಲ್ಲದೆ, ನಾಯಕ ರೋಹಿತ್​ ಶರ್ಮಾ ಅವರ ಅರ್ಧ ಶತಕದಿಂದ 20 ಓವರ್​ನಲ್ಲಿ  195 ರನ್​ ಗಳಿಸಿತು. ಇದನ್ನು ಬೆನ್ನು ಹತ್ತಿದ ಕೋಲ್ಕತ್ತಾ 20 ಓವರ್​ಗಳಲ್ಲಿ 146 ರನ್​ ಕಲೆ ಹಾಕಲಷ್ಟೇ ಶಕ್ಯವಾಯಿತು. ಈ ಪಂದ್ಯ ಗೆಲ್ಲುವ ಮೂಲಕ ಕೊನೆಯ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್​ ಮೊದಲ ಸ್ಥಾನಕ್ಕೇರಿದೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ ಐದು ಪಂದ್ಯ ಮುಗಿದಿದ್ದು, ಮುಂಬೈ ಮೊದಲ ಸ್ಥಾನಕ್ಕೇರಿದೆ.

ಮುಂಬೈ ಇಂಡಿಯನ್ಸ್​, ರಾಜಸ್ಥಾನ್​ ರಾಯಲ್ಸ್​​, ಆರ್​ಸಿಬಿ, ಡೆಲ್ಲಿ, ಸಿಎಸ್​ಕೆ ತಲಾ ಒಂದು ಮ್ಯಾಚ್​ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್​ ಎರಡೇ ಬಂದರೂ ರನ್​ ರೇಟ್​ ಆಧಾರದ ಮೇಲೆ ಬೇರೆ ಬೇರೆ ರ್ಯಾಂಕ್​ ದೊರೆತಿದೆ. ಮುಂಬೈ ಇಂಡಿಯನ್ಸ್ +0.993, ಆರ್​ಆರ್​ ರನ್​ ರೇಟ್​ +0.008, ಆರ್​ಸಿಬಿಯ ರನ್​ ರೇಟ್​ +0.500 ಇದ್ದರೆ, ಡೆಲ್ಲಿಯದ್ದು +0.000, ಸಿಎಸ್​ಕೆಯದ್ದು, -0145 ಇದೆ.

ಪಾಯಿಂಟ್​ ಟೇಬಲ್






ಅತಿ ಹೆಚ್ಚು ರನ್​ ಹೊಡೆದವರಿಗೆ ನೀಡುವ ಆರೆಂಜ್​ ಕ್ಯಾಪ್​ ಪಾಫ್​ ಡು ಪ್ಲೆಸಿಸ್​ ​(ಸಿಎಸ್​ಕೆ) ​130 ರನ್​ ಹಾಗೂ ಅತಿ ಹೆಚ್ಚು ವಿಕೆಟ್​ ಪಡೆದವರಿಗೆ ನೀಡುವ ಪರ್ಪಲ್​ ಕ್ಯಾಪ್​ ಸ್ಯಾಮ್​ ಕುರ್ರನ್​ (ಸಿಎಸ್​ಕೆ) ಬಳಿ ಇದೆ.
Published by: Rajesh Duggumane
First published: September 24, 2020, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories