ಐಪಿಎಲ್ 2019: ಕಳಪೆ ಫಾರ್ಮ್​​ನಲ್ಲಿದ್ದರು ಕಳೆದುಕೊಳ್ಳದ ಗತ್ತು: ಯುವಿ ಮೂಲ ಬೆಲೆ 1 ಕೋಟಿ ನಿಗದಿ

ಈಗಾಗಲೇ ತಂಡದಲ್ಲಿರುವ 232 ಆಟಗಾರರ ಸಹಿತ ಒಟ್ಟು 1003 ಆಟಗಾರರು ಈ ಬಾರಿಯ ಐಪಿಎಲ್​​​​ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 145.25 ಕೋಟಿ ರೂ. ಹರಾಜು ಪ್ರಕ್ರಿಯೆ ನಡೆಯಲಿದೆ.

Vinay Bhat | news18
Updated:December 6, 2018, 11:33 AM IST
ಐಪಿಎಲ್ 2019: ಕಳಪೆ ಫಾರ್ಮ್​​ನಲ್ಲಿದ್ದರು ಕಳೆದುಕೊಳ್ಳದ ಗತ್ತು: ಯುವಿ ಮೂಲ ಬೆಲೆ 1 ಕೋಟಿ ನಿಗದಿ
ಯುವರಾಜ್ ಸಿಂಗ್ (ಐಪಿಎಲ್)
  • Advertorial
  • Last Updated: December 6, 2018, 11:33 AM IST
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಉಳಿದಿದ್ದು, ಇದೇ ತಿಂಗಳ 18 ರಂದು ಹರಾದು ಪ್ರಕ್ರಿಯೆ ನಡೆಯಲಿದೆ. ಈ ಮಧ್ಯೆ ಆಟಗಾರರ ಮೂಲ ಬೆಲೆಯ ಪಟ್ಟಿ ಬಿಡುಗಡೆಯಾಗಿದೆ.

ವಿಶೇಷ ಎಂದರೆ ಈಗಾಗಲೇ ತಂಡದಲ್ಲಿರುವ 232 ಆಟಗಾರರ ಸಹಿತ ಒಟ್ಟು 1003 ಆಟಗಾರರು ಈ ಬಾರಿಯ ಐಪಿಎಲ್​​​​ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 145.25 ಕೋಟಿ ರೂ. ಹರಾಜು ಪ್ರಕ್ರಿಯೆ ನಡೆಯಲಿದ್ದು, 232 ವಿದೇಶಿ ಆಟಗಾರರು ಸೇರಿದ್ದಾರೆ. ಇನ್ನು ಆಟಗಾರರ ಮೂಲ ಬೆಲೆಯ ಪೈಕಿ ಭಾರತದ 5 ಆಟಗಾರರ ಬೆಲೆ 1 ಕೋಟಿ ಹಾಗೂ ಒಬ್ಬ ಆಟಗಾರನ ಬೆಲೆ 1.5 ಕೋಟಿ ನಿಗದಿಪಡಿಸಲಾಗಿದೆ.

ಅದರಲ್ಲೂ ಅನೇಕ ವರ್ಷಗಳಿಂದ ಕಳಪೆ ಫಾರ್ಮ್​​ನಲ್ಲಿರುವ, ರಾಷ್ಟ್ರೀಯ ತಂಡಕ್ಕೆ ಸ್ಥಾನ ಪಡೆಯಲು ಪರದಾಡುತ್ತಿರುವ ಯುವರಾಜ್ ಸಿಂಗ್ ಅವರ ಬೇಡಿಕೆ ಮಾತ್ರ ಇನ್ನು ಕಡಿಮೆಯಾಗಿಲ್ಲ. ಯುರಾಜ್ ಅವರ ಮೂಲ ಬೆಲೆ 1 ಕೋಟಿ ನಿಗದಿ ಪಡಿಸಲಾಗಿದೆ. ಜೊತೆಗೆ 1.5 ಕೋಟಿಗಿಂತ ಅಧಿಕ ಮೂಲ ಬೆಲೆ ಭಾರತದ ಯಾವೊಬ್ಬ ಆಟಗಾರ ಹೊಂದಿಲ್ಲ. ಹಿಂದಿನ ಆವೃತ್ತಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಜೈದೇವ್ ಉನಾದ್ಕಟ್ ಅವರ ಈ ಬಾರಿಯ ಬೆಲೆಯು 1.5 ಕೋಟಿ ಒದೆ. ಇನ್ನು ಇವರ ಜೊತೆಯಲ್ಲಿ ಅಕ್ಷರ್ ಪಟೇಲ್, ವೃದ್ದಿಮಾನ್ ಸಾಹ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವರ ಮೂಲ ಬೆಲೆ ಒಂದು ಕೋಟಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾದಿಂದ ಕಳಪೆ ಆರಂಭ, 6 ವಿಕೆಟ್ ಪತನ

ಇನ್ನು ವಿದೇಶಿ ಆಟಗಾರರಿಗೆ ಹೆಚ್ಚಿನ ಬೇಡಿಕೆಯಿದ್ದು, ಸ್ಯಾಮ್ ಕುರ್ರನ್, ಆ್ಯಂಜೊಲೋ ಮ್ಯಾಥ್ಯೂಸ್, ಬ್ರೆಂಡನ್ ಮೆಕಲಮ್, ಕೋರೆ ಆ್ಯಂಡರ್ಸನ್, ಕ್ರಿಸ್ ವೋಕ್ಸ್​, ಶಾನ್ ಮಾರ್ಶ್​​ ಮೂಲ ಬೆಲೆ ಎರಡು ಕೋಟಿ ನಿಗದಿಪಡಿಸಲಾಗಿದೆ.
First published:December 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ