ಭಾರತದಲ್ಲೇ ನಡೆಯಲಿದೆ ಐಪಿಎಲ್​ ಕದನ: ಮಾರ್ಚ್​ 23 ರಿಂದ ಕ್ರಿಕೆಟ್​ ಹಬ್ಬ ಆರಂಭ

ಈ ಹಿಂದೆ ಬಿಸಿಸಿಐ ದುಬೈನಲ್ಲಿ ಟೂರ್ನಿ ಆಯೋಜಿಸಲಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಮ್ಯಾಚುಗಳ ವೇಳಾಪಟ್ಟಿಯೊಂದು ಲೀಕ್ ಆಗಿತ್ತು.

zahir | news18
Updated:January 8, 2019, 9:21 PM IST
ಭಾರತದಲ್ಲೇ ನಡೆಯಲಿದೆ ಐಪಿಎಲ್​ ಕದನ: ಮಾರ್ಚ್​ 23 ರಿಂದ ಕ್ರಿಕೆಟ್​ ಹಬ್ಬ ಆರಂಭ
Pic: Twitter
zahir | news18
Updated: January 8, 2019, 9:21 PM IST
ವಿಶ್ವದ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನ 12 ನೇ ಆವೃತ್ತಿ ಭಾರತದಲ್ಲೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಈ ಹೊಡಿ ಬಡಿಯ ಚುಟುಕು ಪಂದ್ಯಾಟಗಳು ಮಾರ್ಚ್​ 23 ರಿಂದ ಆರಂಭವಾಗಲಿದ್ದು, ಫೈನಲ್ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಈ ಹಿಂದೆ ದೇಶದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್​ ಅನ್ನು ದುಬೈ ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿತ್ತು. ಈ ಸುದ್ದಿಗಳಿಗೆ ತೆರೆ ಎಳೆಯುವಂತೆ ಉದ್ಘಾಟನಾ ದಿನಾಂಕವನ್ನು ಪ್ರಕಟಿಸಿರುವ ಬಿಸಿಸಿಐ ದೇಶದಲ್ಲೇ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಿದೆ.

2009 ರಲ್ಲಿ ದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಐಪಿಎಲ್​ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಅದೇ ರೀತಿ 2014ರ ಚುನಾವಣೆ ವೇಳೆ ದುಬೈನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿಯೇ ಈ ಬಾರಿ ಕೂಡ ಐಪಿಎಲ್​ ವಿದೇಶದಲ್ಲಿ ನಡೆಯಲಿದೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿತು.

ಇದನ್ನೂ ಓದಿ: ಮನೆ ಖರೀದಿಸುವವರಿಗೆ ಶುಭ ಸುದ್ದಿ: ಮುಂದಿನ ತಿಂಗಳು ಮೋದಿ ಸರ್ಕಾರ ನೀಡಲಿದೆ ಸಿಹಿ ಸುದ್ದಿ

ಮಂಗಳವಾರ ನವದೆಹಲಿಯಲ್ಲಿ ನಡೆದ ಬಿಸಿಸಿಐ ಆಡಳಿತ ಸಮಿತಿಯ ಸಭೆಯಲ್ಲಿ 12ನೇ ಆವೃತ್ತಿಯ ಟೂರ್ನಿ ಆಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನೇಮಿತ ಆಡಳಿತ ಸಮಿತಿಯ ಸಲಹೆಗಳನ್ನು ಕೂಡ ಪಡೆಯಲಾಗಿದೆ.​

ಇದನ್ನೂ ಓದಿ: IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!

ಮೇ. 30 ರಿಂದ ವಿಶ್ವಕಪ್ ಕ್ರಿಕೆಟ್​ ಕೂಡ ಆರಂಭವಾಗಲಿದೆ. ಹೀಗಾಗಿ ಮೇ 15ರೊಳಗೆ ಐಪಿಎಲ್​ಗೆ ತೆರೆ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮುಂದಿನ ಮಾರ್ಚ್​ನಿಂದ ಕ್ರಿಕೆಟ್​ ಪ್ರೇಮಿಗಳಿಗೆ ಬ್ಯಾಕ್​ ಟು ಬ್ಯಾಕ್​ ಐಪಿಎಲ್, ವರ್ಲ್ಡ್​ಕಪ್​ ಪಂದ್ಯಗಳ ರಸದೌತಣ ಸಿಗಲಿದೆ.
Loading...

ಇದನ್ನೂ ಓದಿ: ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!

ವೇಳಾಪಟ್ಟಿ ಸೋರಿಕೆ:
ಈ ಹಿಂದೆ ಬಿಸಿಸಿಐ ದುಬೈನಲ್ಲಿ ಟೂರ್ನಿ ಆಯೋಜಿಸಲಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಮ್ಯಾಚುಗಳ ವೇಳಾಪಟ್ಟಿಯೊಂದು ಲೀಕ್ ಆಗಿತ್ತು. ಆದರೆ ಈ ವೇಳಾಪಟ್ಟಿಯಲ್ಲಿ ಪಂದ್ಯಗಳು ಮಾರ್ಚ್​ 29 ರಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು.

ಆದರೆ ಈ ಹಿಂದೆ ಸೋರಿಕೆಯಾಗಿದ್ದ ವೇಳಾಪಟ್ಟಿಗಿಂತ 6 ದಿನ ಮುಂಚಿತವಾಗಿ ಇದೀಗ ಐಪಿಎಲ್ ಕಾದಾಟ ಆರಂಭವಾಗಲಿದೆ. ಇದೀಗ ಮತ್ತೊಮ್ಮೆ ಈ ವೇಳಾಪಟ್ಟಿ ವೈರಲ್​ ಆಗಿದ್ದು, ಪಂದ್ಯದ ದಿನಾಂಕ ಮತ್ತು ಸ್ಥಳ ಮಾತ್ರ ಬದಲಾಗಲಿದೆ. ಮಾರ್ಚ್​ 29 ರಂದು ನಡೆಯಲಿದೆ ಎನ್ನಲಾಗಿದ್ದ ಮೊದಲ ಪಂದ್ಯ ಮಾರ್ಚ್​ 23 ರಂದು ಸನ್​ರೈಸರ್ಸ್​ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಜರುಗಲಿದೆ ಎಂದು ಹೇಳಲಾಗುತ್ತಿದೆ.



ಇದೇ ವೇಳಾಪಟ್ಟಿಯನ್ನು ಆರು ದಿನಗಳ ಮುಂಚಿತವಾಗಿ ತೆಗೆದುಕೊಂಡು ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಆದರೆ ಈ ವೈರಲ್​ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಬಿಸಿಸಿಐ ಪ್ರಕಟಿಸಲಿರುವ ಹೊಸ ವೇಳಾಪಟ್ಟಿಯಿಂದ ಮಾತ್ರ ತಿಳಿದು ಬರಲಿದೆ.

ಇದನ್ನೂ ಓದಿ: ರೈಲ್ವೆ ನೇಮಕಾತಿ: ವಿವಿಧ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

 

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ