IPL 2019 Schedule: ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ-ಚೆನ್ನೈ ಸೆಣೆಸಾಟ: 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಮಾರ್ಚ್​​ 23 ರಂದು ಐಪಿಎಲ್​​ಗೆ ಭರ್ಜರಿ ಚಾಲನೆ ದೊರಕಲಿದ್ದು, ಎಪ್ರಿಲ್ 5ರ ವರೆಗಿನ 17 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ.

Vinay Bhat | news18
Updated:February 19, 2019, 3:54 PM IST
IPL 2019 Schedule: ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ-ಚೆನ್ನೈ ಸೆಣೆಸಾಟ: 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ
ದಕ್ಷಿಣ-ಪಶ್ಚಿಮ ತಂಡದ ನಾಯಕ ಎಂಎಸ್ ಧೋನಿ ಎಂದು ಹೇಳಲಾಗುತ್ತಿದ್ದು, ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಬಿ ಡಿವಿಲಿಯರ್ಸ್, ಶೇನ್ ವಾಟ್ಸನ್, ಜಸ್ಪ್ರೀತ್ ಬುಮ್ರಾ ಹಾಗೂ ಲಸಿತ್ ಮಲಿಂಗಾ ಇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ.
  • News18
  • Last Updated: February 19, 2019, 3:54 PM IST
  • Share this:
ಹೊಸದಿಲ್ಲಿ (ಫೆ. 19): 2019ರ ಇಂಡಿಯನ್ ಪ್ರೀಮಿಯರ್ ಲೀಗ್​​​ ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ.

ಈ ಹಿಂದೆ ಹೇಳಿದಂತೆ ಮಾರ್ಚ್​​ 23 ರಂದು ಐಪಿಎಲ್​​ಗೆ ಭರ್ಜರಿ ಚಾಲನೆ ದೊರಕಲಿದ್ದು, ಎಪ್ರಿಲ್ 5ರ ವರೆಗಿನ 17 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ.

ಈ ಬಾರಿ ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ ಹಂತದ ವೇಳಾಪಟ್ಟಿಯನ್ನಷ್ಟೆ ಬಿಡಿಗಡೆ ಮಾಡಿದೆ. ಇದರ ಜೊತೆಗೆ ಸಂಪೂರ್ಣ ಟೂರ್ನಿ ಭಾರತದಲ್ಲೇ ನಡೆಯಲಿರುವುದರಿಂದ ಉಳಿದಿರುವ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣ ದಿನಾಂಕ ಘೋಷಣೆಯಾದ ಬಳಿಕವಷ್ಟೆ ಪ್ರಕಟಿಸಲಿದೆ.

ಇದನ್ನೂ ಓದಿ: ಯುವರಾಜ್​​ ಬ್ಯಾಟ್​ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್​​​ಗೂ ಮುನ್ನ ಅಬ್ಬರಿಸಿದ ಯುವಿ

ಮೊದಲ ಎರಡು ವಾರಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿದೆ. ಎಲ್ಲಾ 8 ತಂಡಗಳ ತವರಿನಲ್ಲಿ ಹಾಗೂ ಹೊರಗಡೆ ಪಂದ್ಯವನ್ನು ಆಯೋಜಿಸಲಾಗಿದೆ. ಬಿಡುಗಡೆಗೊಂಡಿರುವ ವೇಳಾಪಟ್ಟಿಯ ಪ್ರಕಾರ 8 ತಂಡಗಳು ಕನಿಷ್ಠ 4 ಪಂದ್ಯಗಳನ್ನು ಆಡಲಿದೆ. ಉದ್ಘಾಟನಾ ಪಂದ್ಯ ಮಾರ್ಚ್​​ 23 ಶನಿವಾರದಂದು ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​​ ತಂಡಗಳ ನಡುವೆ ಚೆನ್ನೈನಲ್ಲಿ ನಡೆಯಲಿದೆ.


 
First published: February 19, 2019, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading