IPL 2019: ಕೊಹ್ಲಿ vs ಧೋನಿ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿಗೆ ಕಠಿಣ ಸವಾಲು

ಧೋನಿ ಹಾಗೂ ವಿರಾಟ್ ನಡುವಣ ಮೊದಲ ಪಂದ್ಯಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್​​ 23 ಶನಿವಾರದಂದು ಚೆನ್ನೈ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

Vinay Bhat | news18
Updated:March 4, 2019, 11:45 AM IST
IPL 2019: ಕೊಹ್ಲಿ vs ಧೋನಿ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿಗೆ ಕಠಿಣ ಸವಾಲು
ವಿರಾಟ್ ಕೊಹ್ಲಿ
  • News18
  • Last Updated: March 4, 2019, 11:45 AM IST
  • Share this:
ಬೆಂಗಳೂರು: 

12ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನೇನು ಬೆರಳಣಿಕೆಯ ದಿನಗಳಷ್ಟೆ ಬಾಕಿ ಉಳಿದಿವೆ. ಮಾರ್ಚ್​ 23 ರಂದು ಐಪಿಎಲ್​​​ಗೆ ಚಾಲನೆ ಸಿಗಲಿದ್ದು, ಎಪ್ರಿಲ್ 5ರ ವರಗಿನ 17 ಪಂದ್ಯಗಳ ವೇಳಾಪಟ್ಟಿ ಬಿಸಿಸಿಐ ಪ್ರಕಟವಾಗಿದೆ.

ವಿಶೇಷ ಎಂದರೆ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ ತನ್ನ ಮೊದಲ ಸವಾಲು ಸ್ವೀಕರಿಸುತ್ತಿದೆ. ಅದುಕೂಡ ಬಲಿಷ್ಠ ಹಾಲಿ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ.

 ಇದನ್ನೂ ಓದಿ: IPL 2019 Schedule: ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ-ಚೆನ್ನೈ ಸೆಣೆಸಾಟ: 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಈ ಮೂಲಕ ಧೋನಿ ಹಾಗೂ ವಿರಾಟ್ ನಡುವಣ ಮೊದಲ ಪಂದ್ಯಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್​​ 23 ಶನಿವಾರದಂದು ಚೆನ್ನೈ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

 ಸದ್ಯ ಎಪ್ರಿಲ್ 5ರ ವರೆಗೆ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಆರ್​ಸಿಬಿ ತನ್ನ 2ನೇ ಪಂದ್ಯವನ್ನು ಮಾರ್ಚ್​ 28 ರಂದು ಮುಂಬೈ ಇಂಡಿಯನ್ಸ್​ ವಿರುದ್ಧ ಬೆಂಗಳೂರಿನಲ್ಲೇ ಆಡಲಿದೆ. ಬಳಿಕ ಮಾರ್ಚ್​ 31 ರಂದು ಹೈದರಾಬಾದ್​ನಲ್ಲಿ ಸನ್​​ರೈಸರ್ಸ್​​ ಹೈದರಾಬಾದ್ ವಿರುದ್ಧ, ಎಪ್ರಿಲ್ 2 ರಂದು ಜೈಪುರದಲ್ಲಿ ರಾಜಸ್ತಾನ್ ರಾಯಲ್ಸ್​ ವಿರುದ್ಧ ಹಾಗೂ ಎಪ್ರಿಲ್ 5 ರಂದು ಬೆಂಗಳೂರಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧ ಆಡಲಿದೆ.

ಇದನ್ನೂ ಓದಿ: ಯುವರಾಜ್​​ ಬ್ಯಾಟ್​ನಿಂದ ಹಿಂದೆಂದು ನೋಡದ ಶಾಟ್; ಐಪಿಎಲ್​​​ಗೂ ಮುನ್ನ ಅಬ್ಬರಿಸಿದ ಯುವಿ

 ಈ ಬಾರಿ ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ ಹಂತದ ವೇಳಾಪಟ್ಟಿಯನ್ನಷ್ಟೆ ಬಿಡಿಗಡೆ ಮಾಡಿದೆ. ಇದರ ಜೊತೆಗೆ ಸಂಪೂರ್ಣ ಟೂರ್ನಿ ಭಾರತದಲ್ಲೇ ನಡೆಯಲಿರುವುದರಿಂದ ಉಳಿದಿರುವ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣ ದಿನಾಂಕ ಘೋಷಣೆಯಾದ ಬಳಿಕವಷ್ಟೆ ಪ್ರಕಟಿಸಲಿದೆ.

ಮಾರ್ಚ್​​ 23 ರಿಂದ ಎಪ್ರಿಲ್ 5 ವರಗಿನ ವೇಳಾಪಟ್ಟಿ:ದಿನಾಂಕ ಸಮಯ ತಂಡ ಸ್ಥಳ
ಮಾರ್ಚ್​​ 23, ಶನಿವಾರ 8PM ಚೆನ್ನೈ ಸೂಪರ್ ಕಿಂಗ್ಸ್​ vs ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಚೆನ್ನೈ
ಮಾರ್ಚ್​ 24, ಆದಿತ್ಯವಾರ 4PM ಕೋಲ್ಕತ್ತಾ ನೈಟ್ ರೈಡರ್ಸ್​​ vs ಸನ್​ರೈಸರ್ಸ್​​ ಹೈದರಾವಾದ್ ಕೋಲ್ಕತ್ತಾ
ಮಾರ್ಚ್​ 24, ಆದಿತ್ಯವಾರ 8PM ಮುಂಬೈ ಇಂಡಿಯನ್ಸ್​ vs ಡೆಲ್ಲಿ ಕ್ಯಾಪಿಟಲ್ಸ್​​ ಮುಂಬೈ
ಮಾರ್ಚ್​ 25, ಸೋಮವಾರ 8PM ರಾಜಸ್ತಾನ್ ರಾಯಲ್ಸ್​​ vs ಕಿಂಗ್ಸ್​ ಇಲೆವೆನ್ ಪಂಜಾಬ್ ಜೈಪುರ
ಮಾರ್ಚ್​ 26, ಮಂಗಳವಾರ 8PM ಡೆಲ್ಲಿ ಕ್ಯಾಪಿಟಲ್ಸ್​​ vs ಚೆನ್ನೈ ಸೂಪರ್ ಕಿಂಗ್ಸ್​ ಡೆಲ್ಲಿ
ಮಾರ್ಚ್​ 27, ಬುದವಾರ 8PM ಕೋಲ್ಕತ್ತಾ ನೈಟ್ ರೈಡರ್ಸ್​ vs ಕಿಂಗ್ಸ್​ ಇಲೆವೆನ್ ಪಂಜಾವ್ ಕೋಲ್ಕತ್ತಾ
ಮಾರ್ಚ್​ 28, ಗುರುವಾರ 8PM ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಮುಂಬೈ ಇಂಡಿಯನ್ಸ್​ ಬೆಂಗಳೂರು
ಮಾರ್ಚ್​​ 29, ಶುಕ್ರವಾರ 8PM ಸನ್​ರೈಸರ್ಸ್​ ಹೈದರಾಬಾದ್ vs ರಾಜಸ್ತಾನ ರಾಯಲ್ಸ್​​ ಹೈದರಾಬಾದ್
ಮಾರ್ಚ್​ 30, ಶನಿವಾರ 4PM ಕಿಂಗ್ಸ್​ ಇಲೆವೆನ್ ಪಂಜಾಬ್ vs ಮುಂಬೈ ಇಂಡಿಯನ್ಸ್​ ಮೊಹಾಲಿ
ಮಾರ್ಚ್​ 30, ಶನಿವಾರ 8PM ಡೆಲ್ಲಿ ಕ್ಯಾಪಿಟಲ್ಸ್​ vs ಕೋಲ್ಕತ್ತಾ ನೈಟ್ ರೈಡರ್ಸ್​​​ ಡೆಲ್ಲಿ
ಮಾರ್ಚ್​ 31, ಆದಿತ್ಯವಾರ, 4PM ಸನ್​ರೈಸರ್ಸ್​​ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹೈದರಾಬಾದ್
ಮಾರ್ಚ್​ 31, ಆದಿತ್ಯವಾರ 8PM ಚೆನ್ನೈ ಸೂಪರ್ ಕಿಂಗ್ಸ್​ vs ರಾಜಸ್ತಾನ್ ರಾಯಲ್ಸ್ ಚೆನ್ನೈ
ಎಪ್ರಿಲ್ 01, ಸೋಮವಾರ 8PM ಕಿಂಗ್ಸ್​ ಇಲೆವೆನ್ ಪಂಜಾಬ್ vs ಡೆಲ್ಲಿ ಕ್ಯಾಪಿಟಲ್ಸ್​ ಮೊಹಾಲಿ
ಎಪ್ರಿಲ್ 02, ಮಂಗಳವಾರ 8PM ರಾಜಸ್ತಾನ್ ರಾಯಲ್ಸ್​ vs ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಜೈಪುರ
ಎಪ್ರಿಲ್ 03, ಬುದವಾರ 8PM ಮುಂಬೈ ಇಂಡಿಯನ್ಸ್​ vs ಚೆನ್ನೈ ಸೂಪರ್ ಕಿಂಗ್ಸ್​ ಮುಂಬೈ
ಎಪ್ರಿಲ್ 04, ಗುರುವಾರ 8PM ಡೆಲ್ಲಿ ಕ್ಯಾಪಿಟಲ್ಸ್​ vs ಸನ್​ರೈಸರ್ಸ್​ ಹೈದರಾಬಾದ್ ಡೆಲ್ಲಿ
ಎಪ್ರಿಲ್ 05, ಶುಕ್ರವಾರ 8PM ರಾಯಲ್ ಚಾಲೆಂಜರ್ಸ್​​ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್​​​​ ಬೆಂಗಳೂರು

First published: February 19, 2019, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading