ಐಪಿಎಲ್​ 2019​: ಯಾವ ತಂಡದಲ್ಲಿದ್ದಾರೆ ಬೆಸ್ಟ್ ಮ್ಯಾಚ್​ ಫಿನಿಶಿಂಗ್ ಆಟಗಾರರು?

ಆಸ್ಟ್ರೇಲಿಯಾ ತಂಡದಲ್ಲಿ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಬೆಸ್ಟ್​ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಮಾರ್ಕಸ್ ಸ್ಟಾಯ್ನಿಸ್ ಅವರು ಆರ್​ಸಿಬಿ ಸೇರಿಕೊಂಡಿದ್ದು ಬಲ ಬಂದಂತಾಗಿದೆ.

Vinay Bhat | news18
Updated:December 29, 2018, 3:13 PM IST
ಐಪಿಎಲ್​ 2019​: ಯಾವ ತಂಡದಲ್ಲಿದ್ದಾರೆ ಬೆಸ್ಟ್ ಮ್ಯಾಚ್​ ಫಿನಿಶಿಂಗ್ ಆಟಗಾರರು?
Pic: Twitter
  • News18
  • Last Updated: December 29, 2018, 3:13 PM IST
  • Share this:
2019 ಐಪಿಎಲ್ ಟೂರ್ನಿ ಯಾವ ದೇಶದಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನು ಗೊಂದಲವಿದ್ದು, ಲೋಕಸಭಾ ಚುನಾವಣೆ ದಿನಾಂಕ ಘೋಷಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಬಿಸಿಸಿಐ ಹೇಳಿದೆ. ಈ ಮಧ್ಯೆ ಐಪಿಎಲ್​ ಹರಾಜು ಪ್ರಕ್ರಿಯೆ ಈಗಾಗಲೆ ಮುಕ್ತಾಯಗೊಂಡಿದ್ದು, ಜಯದೇವ್ ಉನಾದ್ಕಟ್ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಹಾಗೂ ವರುಣ್ ಚಕ್ರವರ್ತಿ ಕಿಂಗ್ಸ್​ ಇಲೆವೆನ್ ಪಂಜಾಬ್​​ಗೆ 8.4 ಕೋಟಿ ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಅಂತೆಯೆ ಪ್ರತಿ ತಂಡದಲ್ಲು ಒಬ್ಬ ಬೆಸ್ಟ್ ಮ್ಯಾಚ್​ ಫಿನಿಶರ್ ಆಟಗಾರನಿದ್ದಾನೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ ನೋಡಿ...

ಕ್ರಿಸ್ ಮೊರೀಸ್ (ಡೆಲ್ಲಿ ಕ್ಯಾಪಿಟಲ್ಸ್​)ಡೆಲ್ಲಿ ಕ್ಯಾಪಿಟಲ್ಸ್​ ತಂಡ ಈ ಬಾರಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಪೃಥ್ವಿ ಶಾ, ಕೋಲಿನ್ ಮುನ್ರೋ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೋಲಿನ್ ಇನ್​ಗ್ರಾಮ್, ಕ್ರಿಸ್ ಮೊರೀಸ್, ಕಗಿಸೊ ರಬಾಡ ರಂತಹ ಘಟಾನುಘಟಿ ಆಟಗಾರರು ಡೆಲ್ಲಿ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: (VIDEO): ಸೇಡು ತೀರಿಸಿಕೊಂಡ ಪಂತ್: ಆಸೀಸ್ ನಾಯಕನಿಗೆ ಮೈದಾನದಲ್ಲೇ ಚಳಿ ಬಿಡಿಸಿದ ರಿಷಭ್

ಅದರಲ್ಲು ದಕ್ಷಣ ಆಫ್ರಿಕಾದ ಪ್ರಮುಖ ಆಲ್ರೌಂಡರ್ ಆಟಗಾರ ಕ್ರಿಸ್ ಮೊರೀಸ್ ಡೆಲ್ಲಿ ತಂಡದ ಬೆಸ್ಟ್​ ಫಿನಿಶರ್ ಎನ್ನಬಹುದು. ಈ ಹಿಂದೆ ಐಪಿಎಲ್​​ನಲ್ಲಿ ಮೊರೀಸ್ ಅವರು ಏಕಾಂಗಿಯಾಗಿ ನಿಂತು ಅನೇಕ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಒಟ್ಟು 56 ಪಂದ್ಯಗಳನ್ನು ಆಡಿರುವ ಮೊರೀಸ್ 485 ರನ್ ಕಲೆಹಾಕಿದ್ದಾರೆ. ಸ್ಟ್ರೈಕ್​ರೇಟ್ 166.66 ಇದ್ದು 82 ಗರಿಷ್ಠ ಸ್ಕೋರ್ ಆಗಿದೆ.

ಸರ್ಫರಾಜ್ ಖಾನ್ (ಕಿಂಗ್ಸ್​ ಇಲೆವೆನ್ ಪಂಜಾಬ್)

ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡ ಉಳಿದ ಎಲ್ಲ ತಂಡಕ್ಕಿಂತ ಈ ಬಾರಿ ಬಲಿಷ್ಠವಾಗಿದೆ. ಕ್ರಿಸ್ ಗೇಲ್, ಆ್ಯಂಡ್ರೊ ಟೈ, ಮುಜೀದ್ ಉರ್ ರೆಹಮಾನ್, ಡೇವಿಡ್ ಮಿಲ್ಲರ್, ನಿಕೋಲಸ್ ಪೂನ್, ಸ್ಯಾಮ್ ಕುರ್ರನ್​​​ನಂತಹ ಅನುಭವಿ ಆಟಗಾರರ ದಂಡೆ ತಂಡದಲ್ಲಿದೆ.

ಮ್ಯಾಚ್ ಫಿನಿಶಿಂಗ್ ಆಟಗಾರರ ಪೈಕಿ ಡೇವಿಡ್ ಮಿಲ್ಲರ್ ಕೂಡ ಪ್ರಮುಖರು. ಅಂತೆಯೆ ಸ್ಯಾಮ್ ಕುರ್ರನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಆದರೆ, ಯುವ ಆಟಗಾರ ಸರ್ಫರಾಜ್ ಖಾನ್ ಕಿಂಗ್ಸ್​ ಇಲೆವೆನ್ ತಂಡದ ಬೆಸ್ಟ್​ ಫಿನಿಶರ್ ಆಗಿದ್ದಾರೆ. ಇವರ ಸ್ಟ್ರೈಕ್ ರೇಟ್ 159.44 ಇದ್ದು, ಕೊನೆ ಕ್ಷಣದಲ್ಲಿ ಬ್ಯಾಟ್ ಬೀಸುವ ಶಕ್ತಿ ಸರ್ಫರಾಜ್​ರಲ್ಲಿದೆ.

ಮಾರ್ಕಸ್ ಸ್ಟಾಯ್ನಿಸ್ (ರಾಯಲ್ ಚಾಲೆಂಜರ್ಸ್​ ಬೆಂಗಳೂರು)ಆರ್​ಸಿಬಿ ತಂಡ ಈ ಹಿಂದೆ ಅನೇಕ ಪಂದ್ಯಗಳಲ್ಲಿ ಸೋಲು ಕಂಡಿದ್ದಕ್ಕೆ ಪ್ರಮುಖ ಕಾರಣವೆ ತಂಡದಲ್ಲಿ ಮ್ಯಾಚ್ ಫಿನಿಶ್ ಮಾಡುವ ಆಟಗಾರ ಇಲ್ಲದಿರುವುದು. ಇದಕ್ಕಾಗೆ ಹಿಂದಿನ ತಪ್ಪನ್ನು ತಿದ್ದಿ ಆರ್​ಸಿಬಿ ಆಸ್ಟ್ರೇಲಿಯಾ ಆಲ್ರೌಂಡರ್ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಆಸ್ಟ್ರೇಲಿಯಾ ತಂಡದಲ್ಲಿ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಬೆಸ್ಟ್​ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಮಾರ್ಕಸ್ ಸ್ಟಾಯ್ನಿಸ್ ಅವರು ಆರ್​ಸಿಬಿ ಸೇರಿಕೊಂಡಿದ್ದು ಬಲ ಬಂದಂತಾಗಿದೆ. ಐಪಿಎಲ್​​ನಲ್ಲಿ ಆಡಿದ್ದು 19 ಪಂದ್ಯವಾದರು ಮಾರ್ಕಸ್ ಸ್ಟ್ರೈಕ್​ರೇಟ್ 125.96 ಇದೆ.

ಇದನ್ನೂ ಓದಿ: ಐತಿಹಾಸಿಕ ಗೆಲುವಿನತ್ತ ಟೀಂ ಇಂಡಿಯಾ: 4ನೇ ದಿನದಾಟಕ್ಕೆ ಆಸ್ಟ್ರೇಲಿಯಾ 258/8

ಕ್ರುನಾಲ್ ಪಾಂಡ್ಯ (ಮುಂಬೈ ಇಂಡಿಯನ್ಸ್​)ಮುಂಬೈ ಇಂಡಿಯನ್ಸ್​ ತಂಡದಲ್ಲಿ ಕಿರೋನ್ ಪೊಲ್ಲಾರ್ಡ್​, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ ಪ್ರಮುಖ ಫಿನಿಶರ್​ಗಳಿದ್ದಾರೆ. ಆದರೆ ಪೊಲ್ಲಾರ್ಡ್​ ಹಾಗೂ ಯುವರಾಜ್ ಫಾರ್ಮ್​ನಲ್ಲಿಲ್ಲ, ಇತ್ತ ಹಾರ್ದಿಕ್ ಪಾಂಡ್ಯ ಬೌಲಿಂಗ್​ನತ್ತ ಹೆಚ್ಚು ಗಮನ ಹರಿಸುತ್ತಿರುವುದರಿಂದ ಮುಂಬೈ ತಂಡದ ಬೆಸ್ಟ್​ ಫಿನಿಶರ್ ಕ್ರುನಾಲ್ ಪಂಡ್ಯ ಎನ್ನಬಹುದು.

ಪಾಂಡ್ಯ ಈ ಹಿಂದೆ ಅನೇಕ ಪಂದ್ಯಗಳನ್ನು ಗೆಲ್ಲಿಸಿ ನಾನೊಬ್ಬ ಬೆಸ್ಟ್​ ಫಿನಿಶರ್ ಎಂಬುದನ್ನು ಕ್ರುನಾಲ್ ಸಾಭೀತು ಪಡಿಸಿದ್ದಾರೆ. 2017ರ ಐಪಿಎಲ್​​ ಫೈನಲ್​ನಲ್ಲಿ ಕ್ರುನಾಲ್ 47 ರನ್ ಬಾರಿಸಿ ಮುಂಬೈ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದರು.

ಕೃಷ್ಣಪ್ಪ ಗೌತಮ್ (ರಾಜಸ್ಥಾನ್ ರಾಯಲ್ಸ್​)2018ರ ಐಪಿಎಲ್​​ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತಾದರು, ಇಲ್ಲಿಯ ವರೆಗೆ ಬರಲು ಪ್ರಮುಖ ಕಾರಣ ಕರ್ನಾಟಕದ ಕೃಷ್ಣಪ್ಪ ಗೌತಮ್. ಬೆನ್ ಸ್ಟೋಕ್ಸ್​ ಕಳಪೆ ಪ್ರದರ್ಶನದ ನಡುವೆಯು ಕೊನೆ ಹಂತದಲ್ಲಿ ಗೌತಮ್ ಅವರು ಬ್ಯಾಟ್ ಬೀಸಿ ಹೆಚ್ಚಿನ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಈ ಬಾರಿ ಕೂಡ ಗೌತಮ್ ಮೇಲೆ ಹೆಚ್ಚಿನ ನಿರೀಕ್ಷಿಯಿದೆ. ಗೌತಮ್ ಅವರು ಸ್ಟ್ರೈಕ್​​ರೇಟ್ 196.87 ಇದೆ.

ಆ್ಯಂಡ್ರೋ ರಸೆಲ್ (ಕೋಲ್ಕತ್ತಾ ನೈಟ್ ರೈಡರ್ಸ್​)ಕೋಲ್ಕತ್ತಾ ತಂಡದಲ್ಲಿ ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ಆ್ಯಂಡ್ರೋ ರಸೆಲ್, ದಿನೇಶ್ ಕಾರ್ತಿಕ್ ಹೀಗೆ ಟಿ-20 ಪಂದ್ಯಕ್ಕೆ ಹೇಳಿ ಮಾಡಿಸಿದ ಆಟಗಾರರಿದ್ದಾರೆ. ಆದರೆ ಈ ವರೆಗು ಕೋಲ್ಕತ್ತಾದ ಬೆಸ್ಟ್​ ಫಿನಿಶರ್ ಎಂದರೆ ಆ್ಯಂಡ್ರೋ ರಸೆಲ್.

ವೆಸ್ಟ್​ ಇಂಡೀಸ್​ನ ಈ ದೈತ್ಯ ಆಟಗಾರ 2014ರಿಂದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಪರವಾಗಿ ಆಡುತ್ತಿದ್ದಾರೆ. 50 ಪಂದ್ಯಗಳಲ್ಲಿ 890 ರನ್ ಸಿಡಿಸಿರುವ ರಸೆಲ್ ಅವರ ಸ್ಟ್ರೈಕ್​​ರೇಟ್ 177.29 ಆಗಿದೆ.

ಯೂಸುಫ್ ಪಠಾಣ್ (ಸನ್​ರೈಸರ್ಸ್​ ಹೈದರಾಬಾದ್)2018ರ ಐಪಿಎಲ್​​ನ ಫೈನಲ್​ನಲ್ಲಿ ಎಡವಿದ ಹೈದರಾಬಾದ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಟೂರ್ನಿಯುದ್ದಕ್ಕು ಅದ್ಭುತ ಪ್ರದರ್ಶನ ತೋರಿದ ಸನ್​ರೈಸರ್ಸ್, ತನ್ನ​​ ಆಡುವ 11ರ ಬಳಗವನ್ನು ಅದ್ಭುತವಾಗಿ ಕಟ್ಟಿಕೊಂಡಿತ್ತು.

ಅದರಲ್ಲು ಸ್ಪೋಟಕ ಬ್ಯಾಟ್ಸ್​ಮನ್​ ಯೂಸುಫ್ ಪಠಾಣ್ ಮ್ಯಾಚ್ ಫಿನಿಶರ್ ಆಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಈ ಬಾರಿ ಕೂಡ ಪಠಾಣ್​​​ ಹೈದರಾಬಾದ್ ತಂಡದಲ್ಲೇ ಇದ್ದು, ಹೆಚ್ಚಿ ನಿರೀಕ್ಷೆ ಇಡಲಾಗಿದೆ. 164 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಪಠಾಣ್ 3164 ರನ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಎಂ ಎಸ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್​)ಐಪಿಎಲ್ ಇತಿಹಾಸದಲ್ಲೆ ಈವರೆಗೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಈ ಬಾರಿ ಬಹುತೇಕ ಕಳೆದ ವಿನ್ನಿಂಗ್ ಟೀಂ ಅನ್ನೆ ತನ್ನಲ್ಲಿ ಉಳಿಸಿಕೊಂಡಿದೆ. ಚೆನ್ನೈ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣ ಎಂದರೆ ತಂಡದ ನಾಯಕ ಎಂ ಎಸ್ ಧೋನಿ ಎನ್ನಬಹುದು.

ವಿಶ್ವದ ಶ್ರೇಷ್ಠ ಫಿನಿಶರ್ ಎಂದೆ ಹೇಳಲಾಗುವ ಧೋನಿ ಐಪಿಎಲ್​​ನ ನಂಬರ್ 1 ಬೆಸ್ಟ್​ ಪಿನಿಶಿಂಗ್ ಆಟಗಾರ. ಕಳೆದ ಐಪಿಎಲ್​​ನಲ್ಲಿ ಧೋನಿ ಫಾರ್ಮ್​​ನಲ್ಲಿ ಇದ್ದಿಲ್ಲವಾದರು  ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಿ ಅನೇಕ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ.

First published:December 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading