HOME » NEWS » Sports » IPL 2019 KL RAHUL HITS 19 BALL FIFTY THIRD FASTEST OF THE SEASON AFTER HARDIK AND PANT

VIDEO: ಭರ್ಜರಿ ದಾಖಲೆಯೊಂದಿಗೆ ಐಪಿಎಲ್​ಗೆ ವಿದಾಯ ಹೇಳಿದ ಕನ್ನಡಿಗ ರಾಹುಲ್

171 ರನ್​ಗಳ ಗುರಿ ಪಡೆದ ಕಿಂಗ್ಸ್​ ಇಲೆವೆನ್​ ಭರ್ಜರಿ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದರು. ದೀಪಕ್ ಚಹಾರ್​ ಅವರ ಮೊದಲ ಓವರ್​ನಲ್ಲೇ ಸಿಕ್ಸರ್ ಸಿಡಿಸಿ ಇನಿಂಗ್ಸ್​ ಆರಂಭಿಸಿದ ರಾಹುಲ್ ಏಕಾಏಕಿ ಗುಡುಗಿದ್ದರು.

zahir | news18
Updated:May 5, 2019, 9:46 PM IST
VIDEO: ಭರ್ಜರಿ ದಾಖಲೆಯೊಂದಿಗೆ ಐಪಿಎಲ್​ಗೆ ವಿದಾಯ ಹೇಳಿದ ಕನ್ನಡಿಗ ರಾಹುಲ್
@HT
  • News18
  • Last Updated: May 5, 2019, 9:46 PM IST
  • Share this:
ಐಪಿಎಲ್​ ಅಂಗಳದ ಬಲಿಷ್ಠ ಪಡೆ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಕನ್ನಡಿಗ ಕೆಎಲ್ ರಾಹುಲ್ ಎಂಬುದು ವಿಶೇಷ.

171 ರನ್​ಗಳ ಗುರಿ ಪಡೆದ ಕಿಂಗ್ಸ್​ ಇಲೆವೆನ್​ಗೆ​ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದರು. ದೀಪಕ್ ಚಹಾರ್​ ಅವರ ಮೊದಲ ಓವರ್​ನಲ್ಲೇ ಸಿಕ್ಸರ್ ಸಿಡಿಸಿ ಇನಿಂಗ್ಸ್​ ಆರಂಭಿಸಿದ ರಾಹುಲ್ ಏಕಾಏಕಿ ಗುಡುಗಿದ್ದರು. ಅನುಭವಿ ಬೌಲರ್ ಹರ್ಭಜನ್​ ಸಿಂಗ್​ ಎಸೆತಗಳಲ್ಲಿ ಸಿಕ್ಸ್ - ಫೋರ್​ಗಳ ಸುರಿಮಳೆಗೈದು ಕ್ರಿಕೆಟ್​ ಪ್ರೇಮಿಗಳಿಗೆ ಟಿ20 ಕ್ರಿಕೆಟ್​ನ ಅಸಲಿ ಮನರಂಜನೆ ಒದಗಿಸಿದ್ದರು.

ಐಪಿಎಲ್​ 12ನೇ ಆವೃತ್ತಿಯ ಕೊನೆಯ ಪಂದ್ಯವಾಡಿದ ರಾಹುಲ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಈ ಮೂಲಕ 2019ರ ವೇಗದ ಫಿಫ್ಟಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ಈ ಬಾರಿಯ ಐಪಿಎಲ್​ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಈ ಹಿಂದೆ ಶತಕ ಸಿಡಿಸಿ ಮಿಂಚಿದ್ದ ರಾಹುಲ್, ಮೊಹಾಲಿಯಲ್ಲಿ ಚೆನ್ನೈ ವಿರುದ್ದ ಕೇವಲ 35 ಎಸೆತಗಳಲ್ಲಿ 71 ರನ್ ಬಾರಿಸಿದ್ದರು. ಇದರಲ್ಲಿ ಏಳು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳು ಒಳಗೊಂಡಿದ್ದವು. ರಾಹುಲ್​ರ ಈ ಅಮೋಘ ಬ್ಯಾಟಿಂಗ್ ಪರಿಣಾಮ ಬಲಿಷ್ಠ ಚೆನ್ನೈಯನ್ನು ಮಣಿಸಿ ಪಂಜಾಬ್ ಗೆಲುವಿನ ವಿದಾಯ ಹೇಳಿದೆ. ಉತ್ತಮ ಫಾರ್ಮ್​​ನಲ್ಲಿರುವ ಕನ್ನಡಿಗ ವಿಶ್ವ ಕಪ್ ತಂಡಕ್ಕೂ ಆಯ್ಕೆಯಾಗಿದ್ದು, ಅಲ್ಲೂ ಕೂಡ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.



ಐಪಿಎಲ್- 2019 ಅತಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು
ಹಾರ್ದಿಕ್ ಪಾಂಡ್ಯ: 17 ಎಸೆತ vs ಕೊಲ್ಕತ್ತಾ ನೈಟ್ ರೈಡರ್ಸ್​ರಿಷಬ್ ಪಂತ್: 18 ಎಸೆತ  vs ಮುಂಬೈ ಇಂಡಿಯನ್ಸ್
ಕೆಎಲ್ ರಾಹುಲ್: 19 ಎಸೆತ  vs ಚೆನ್ನೈ ಸೂಪರ್ ಕಿಂಗ್ಸ್
ಆಂಡ್ರೆ ರಸೆಲ್: 21 ಎಸೆತ  vs ರಾಯಲ್ ಚಾಲೆಂಜರ್ಸ್​ ಬೆಂಗಳೂರು
ಕೀರನ್ ಪೊಲಾರ್ಡ್: 22 ಎಸೆತ vs ಕಿಂಗ್ಸ್​ ಇಲೆವೆನ್ ಪಂಜಾಬ್
First published: May 5, 2019, 9:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories