14 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡ ಆರ್​ಸಿಬಿ: ಒಬ್ಬೊಬ್ಬರ ಸಂಭಾವನೆ ಎಷ್ಟು ಗೊತ್ತಾ..?

ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೆಲ ಆಟಗಾರರನ್ನು ತಂಡ ಕೈ ಬಿಟ್ಟಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರು ಮಾಡುತ್ತಿದೆ

Vinay Bhat | news18
Updated:November 29, 2018, 3:04 PM IST
14 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡ ಆರ್​ಸಿಬಿ: ಒಬ್ಬೊಬ್ಬರ ಸಂಭಾವನೆ ಎಷ್ಟು ಗೊತ್ತಾ..?
ಆರ್​ಸಿಬಿ ತಂಡದ ಪ್ರಮುಖ ಆಟಗಾರರು
  • Advertorial
  • Last Updated: November 29, 2018, 3:04 PM IST
  • Share this:
ಬೆಂಗಳೂರು: 2019ರ ಐಪಿಎಲ್ ಟೂರ್ನಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಈಗಾಗಲೇ ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದು, ಡಿ. 18 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿಯುವಿ, ಗಂಭೀರ್ ಸೇರಿದಂತೆ ಸ್ಟಾರ್ ಆಟಗಾರರು ಅನ್​ಸೋಲ್ಡ್​​?

ಜೊತೆಗೆ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೆಲ ಆಟಗಾರರನ್ನು ತಂಡ ಕೈ ಬಿಟ್ಟಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ತಯಾರು ಮಾಡುತ್ತಿದೆ. ಸದ್ಯ ಆರ್​​ಸಿಬಿ ಒಟ್ಟು 14 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಅವರು ಯಾರು ಹಾಗೂ ಅವರ ಸಂಭಾವನೆ ಎಷ್ಟು ಎಂಬ ಮಾಹಿತಿ ಇಲ್ಲಿವೆ ನೋಡಿ..

ಆರ್​​ಸಿಬಿ ತಂಡ ತನ್ನಲ್ಲೆ ಉಳಿಸಿಕೊಂಡ ಆಟಗಾರರು ಹಾಗೂ ಸಂಭಾವನೆ:

ವಿರಾಟ್ ಕೊಹ್ಲಿ- 17 ಕೋಟಿ

ಎಬಿ ಡಿವಿಲಿಯರ್ಸ್​​​- 11 ಕೋಟಿ

ಯಜುವೇಂದ್ರ ಚಹಾಲ್- 6 ಕೋಟಿಉಮೇಶ್ ಯಾದವ್- 4.2 ಕೋಟಿ

ವಾಷಿಂಗ್ಟನ್ ಸುಂದರ್- 3.2 ಕೋಟಿ

ನವ್​ದೀಪ್ ಸೈನಿ- 3 ಕೋಟಿ

ಮೊಹಮ್ಮದ್ ಸಿರಾಜ್- 2.6 ಕೋಟಿ

ಕಾಲಿನ್ ಡಿ ಗ್ರಾಂಡ್ಹೋಮ್- 2.2 ಕೋಟಿ

ನಥನ್ ಕೌಲ್ಟರ್-ನೈಲ್- 2.2 ಕೋಟಿ

ಮೊಯೀನ್ ಅಲಿ-1.7 ಕೋಟಿ

ಪಾರ್ಥಿವ್ ಪಟೇಲ್-1.7 ಕೋಟಿ

ಪವನ್ ನೇಗಿ- 1 ಕೋಟಿ

ಟಿಮ್ ಸೌಥಿ- 1 ಕೋಟಿ

ಕುಲ್ವಂತ್ ಖೇಜ್ರೊಲಿಯಾ- 85 ಲಕ್ಷ

ಕಳೆದ ಆವೃತ್ತಿಯಲ್ಲಿ ಅವಕಾಶ ನೀಡಿದರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಮನ್​​ದೀಪ್ ಸಿಂಗ್ ಹಾಗೂ ಕ್ವಿಂಟನ್ ಡಿಕಾಕ್​ರನ್ನು ರಾಯಾಲ್ ಚಾಲೆಂಜರ್ಸ್​​ ಬೆಂಗಳೂರು ಈಗಾಗಲೇ ಬೇರೆ ತಂಡಕ್ಕೆ ಮಾರಾಟ ಮಾಡಿದೆ. ಉಳಿದಂತೆ ಬ್ರೆಂಡನ್ ಮೆಕಲಮ್, ಕೋರೆ ಆಂಡರ್ಸನ್, ಕ್ರಿಸ್ ವೋಕ್ಸ್​, ಸರ್ಫರಾಜ್ ಖಾನ್, ಅನಿರುದ್ಧ್ ಜೋಶಿ, ಪವನ್ ದೇಶಪಾಂಡೆ ಅವರನ್ನು ತಂಡದಿಂದ ಕೈ ಬಿಟ್ಟಿದೆ.

First published:November 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ