ಐಪಿಎಲ್​​ನಲ್ಲಿ ಈವರೆಗೆ ದಾಖಲಾದ ದಾಖಲೆಗಳು ಏನೆಲ್ಲಾ ಗೊತ್ತಾ..?

ಐಪಿಎಲ್​​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿದ್ದ ವೇಳೆ ಯುವರಾಜ್ ಆರ್​ಸಿಬಿ ವಿರುದ್ಧ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸ್​ ಜೊತೆ 50 ರನ್ ಬಾರಿಸಿದ್ದರು. ಜೊತೆಗೆ 4 ಓವರ್​​ನಲ್ಲಿ ಕೇವಲ 22 ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದರು

Vinay Bhat | news18
Updated:December 7, 2018, 4:05 PM IST
ಐಪಿಎಲ್​​ನಲ್ಲಿ ಈವರೆಗೆ ದಾಖಲಾದ ದಾಖಲೆಗಳು ಏನೆಲ್ಲಾ ಗೊತ್ತಾ..?
ಸಾಂದರ್ಭಿಕ ಚಿತ್ರ
  • News18
  • Last Updated: December 7, 2018, 4:05 PM IST
  • Share this:
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ವಿಶ್ವದ ಅತ್ಯಂತ ದೊಡ್ಡ ಟಿ-20 ಲೀಗ್. ಸಾವಿರಕ್ಕೂ ಅಧಿಕ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಅನೇಕ ಯುವ ಆಟಗಾರರಿಗೆ ಇದೊಂದು ವೇದಿಕೆ ಕೂಡ ಹೌದು. ಪ್ರತಿಭೆಯಿದ್ದರು ಅವಕಾಶ ಸಿಗದೆ ವಂಚಿತರಾಗಿದ್ದ ಅದೆಷ್ಟೊ ಕ್ರಿಕೆಟಿಗರಿಗೆ ಐಪಿಎಲ್​​ನಿಂದ ಜೀವನವೆ ಬದಲಾಗಿದೆ. ಹಾಗಾದರೆ ಈವರೆಗೆ ನಡೆದ ಐಪಿಎಲ್​​ನಲ್ಲಿ ದಾಖಲಾದ ಅದ್ಭುತ ರೆಕಾರ್ಡ್​​ಗಳನ್ನು ನೋಡುವುದಾದರೆ...

ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ರೋಹಿತ್ ಶರ್ಮಾ-ಹರ್ಭಜನ್ ಸಿಂಗ್:

ರೋಹಿತ್ ಶರ್ಮಾ-ಹರ್ಭಜನ್ ಸಿಂಗ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಆಟಗಾರರು. 2017ರ ವರೆಗೆ ಮುಂಬೈ ತಂಡದಲ್ಲಿದ್ದ ಹರ್ಭಜನ್-ರೋಹಿತ್ ಜೊತೆಗೂಡಿ 2013, 2015 ಹಾಗೂ 2017ರಲ್ಲಿ ಪ್ರಶಸ್ತಿ ಬಾಜಿಕೊಂಡಿದ್ದಾರೆ. ಅಂತೆಯೆ 2009ರಲ್ಲಿ ರೋಹಿತ್ ಡೆಕ್ಕನ್ ಚಾರ್ಜಸ್​​ ತಂಡದಲ್ಲಿದ್ದು ಆಗ ಡೆಕ್ಕನ್ ತಂಡ ಚಾಂಪಿಯನ್ ಆಗಿತ್ತು. ಇತ್ತ ಹರ್ಭಜನ್ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪರ ಆಡಿದ್ದು, ಆಗ ಸಿಎಸ್​ಕೆ ತಂಡ ಐಪಿಎಲ್​ಗೆ ಮುತ್ತಿಕ್ಕಿತ್ತು.

ಎಂ. ಎಸ್. ಧೋನಿ- ಅತಿ ಹೆಚ್ಚು ಬಾರಿ ಫೈನಲ್​​ನಲ್ಲಿ ಆಡಿದ ಆಟಗಾರ

ಧೋನಿ ಅವರು ಐಪಿಎಲ್​ನಲ್ಲಿ ಒಟ್ಟು 7 ಬಾರಿ ಫೈನಲ್ ಆಡಿದ್ದಾರೆ. ಜೊತೆಗೆ ಸುರೇಶ್ ರೈನಾ 6 ಫೈನಲ್​​​ ಪಂದ್ಯ ಆಡಿದ್ದಾರೆ. ಒಟ್ಟಾರೆಯಾಗಿ ಧೋನಿ ನೇತೃತ್ವದ ತಂಡ 3 ಬಾರಿ ಐಪಿಎಲ್​​ ಪ್ರಶಸ್ತಿ ತನ್ನದಾಗಿಸಿದರೆ, ಎರಡು ಬಾರಿ ಚಾಂಪಿಯನ್ಸ್​ ಟ್ರೋಫಿ ಗೆದ್ದು ಬೀಗಿದೆ.

ವಿರಾಟ್ ಕೊಹ್ಲಿ: 5 ಐಪಿಎಲ್​​ ಸೀಸನ್​ನಲ್ಲಿ 500 ರನ್: 2008ರಿಂದ ಒಂದೆ ತಂಡದಲ್ಲಿರುವ ಆಟಗಾರ

ವಿರಾಟ್ ಕೊಹ್ಲಿ ಐಪಿಎಲ್​​​​​ ಆರಂಭದಿಂದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು​​ ತಂಡದಲ್ಲೆ ಇದ್ದಾರೆ. 2008 ರಿಂದ ಈ ವರೆಗೆ ಒಂದೆ ತಂಡದಲ್ಲಿ ಆಡಿದ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಮಾಡಿದ್ದಾರೆ. ಜೊತೆಗೆ 2011, 2013, 2015, 2016 ಮತ್ತು 2018ರ ಪ್ರತಿ ಸೀಸನ್​ನಲ್ಲಿ ಕೊಹ್ಲಿ 500ಕ್ಕಿಂತ ಅಧಿಕ ರನ್ ಬಾರಿಸಿದ್ದಾರೆ. ಇಷ್ಟೆ ಅಲ್ಲದೆ ಐಪಿಎಲ್​​ನಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.ಇದನ್ನೂ ಓದಿ: (VIDEO): ಕ್ರಿಕೆಟ್ ಇತಿಹಾಸದಲ್ಲಿ ಇದೇ ‘ದಿ ಬೆಸ್ಟ್​​ ರನೌಟ್’

ಯುವರಾಜ್ ಸಿಂಗ್: ಒಂದೇ ಪಂದ್ಯದಲ್ಲಿ ಅರ್ಧಶತಕ ಜೊತೆ ಹ್ಯಾಟ್ರಿಕ್ ವಿಕೆಟ್

ಸದ್ಯ ಯುವರಾಜ್ ಸಿಂಗ್ ಕಳಪೆ ಫಾರ್ಮ್​ನಲ್ಲಿದ್ದರು ಒಂದು ಕಾಲದಲ್ಲಿ ಅದ್ಭುತ ಆಲ್ರೌಂಡರ್ ಎಂಬುದು ಮರೆಯುವಂತಿಲ್ಲ. ಐಪಿಎಲ್​​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿದ್ದ ವೇಳೆ ಯುವರಾಜ್ ಆರ್​ಸಿಬಿ ವಿರುದ್ಧ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸ್​ ಜೊತೆ 50 ರನ್ ಬಾರಿಸಿದ್ದರು. ಜೊತೆಗೆ 4 ಓವರ್​​ನಲ್ಲಿ ಕೇವಲ 22 ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.

ಪಾರ್ಥಿವ್ ಪಟೇಲ್: 11 ಸೀಸನ್​ನಲ್ಲಿ 6 ತಂಡ ಬದಲಾವಣೆ

ಪಾರ್ಥಿವ್ ಪಟೇಲ್ ಟೀಂ ಇಂಡಿಯಾದ ಅನಭವಿ ವಿಕೆಟ್ ಕೀಪರ್​ ಹಾಗೂ ಬ್ಯಾಟ್ಸ್​ಮನ್​​. ಐಪಿಎಲ್​​ನಲ್ಲಿ ಆಡಿದ ಒಟ್ಟು 11 ಸೀಸನ್​ನಲ್ಲಿ ಪಾರ್ಥಿವ್ ಒಟ್ಟು 6 ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್​, ಸನ್​ರೈಸರ್ಸ್​ ಹೈದರಾಬಾದ್, ಕೊಚ್ಚಿ ಟಕ್ಕರ್ಸ್​​ ಮತ್ತು ಡೆಕ್ಕನ್ ಚಾರ್ಜಸ್ ತಂಡದ ಪರವಾಗಿ ಪಟೇಲ್ ಈ ವರೆಗೆ ಆಡಿದ್ದಾರೆ.

ಮನೀಶ್ ಪಾಂಡೆ: ಐಪಿಎಲ್​ನಲ್ಲಿ ಶತಕ ಬಾರಿಸಿದ ಮೊದಲ ಯುವ ಆಟಗಾರ

2008ರಲ್ಲಿ ಮುಂಬೈ ಇಂಡಿಯನ್ಸ್​​ ತಂಡದ ಪರವಿದ್ದ ಮನೀಶ್ ಪಾಂಡೆ, 2009ರಲ್ಲಿ ಆರ್​ಸಿಬಿ ತಂಡ ಸೇರಿಕೊಂಡರು. ಇಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧದ ಪಂದ್ಯದಲ್ಲಿ ಪಾಂಡೆ 73 ಎಸೆತಗಳಲ್ಲಿ 114 ರನ್ ಸಿಡಿಸಿ ಐಪಿಎಲ್​ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಅಲ್ಲದೆ ಅತಿ ಕಡಿಮೆ ವಯಸ್ಸಿನಲ್ಲಿ(20 ವರ್ಷ) ಶತಕ ಗಳಿಸಿದ ಪ್ರಥಮ ಆಟಗಾರ ಆಗಿದ್ದಾರೆ. ಈ ಸಾಧನೆಯನ್ನು ಇಂದಿನ ವರೆಗೆ ಐಪಿಎಲ್​ನಲ್ಲಿ ಯಾರು ಮುರಿದಲ್ಲ ಎಂಬುದು ಮತ್ತೊಂದು ಅಚ್ಚರಿಯ ವಿಚಾರ.

First published:December 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ