(VIDEO): IPL 2018ರಲ್ಲಿ ಪ್ರೇಕ್ಷಕರನ್ನು ಮೂಕವಿಸ್ಮಿತವಾಗಿಸಿದ 5 ಅದ್ಭುತ ಹೊಡೆತಗಳು!

ಸನ್​ರೈಸರ್ಸ್​ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಪಂತ್ ಕೇವಲ 63 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸ್​ನೊಂದಿಗೆ ಅಜೇಯ 128 ರನ್ ಸಿಡಿಸಿ ಮಿಂಚಿದರು.

Vinay Bhat | news18
Updated:January 29, 2019, 3:51 PM IST
(VIDEO): IPL 2018ರಲ್ಲಿ ಪ್ರೇಕ್ಷಕರನ್ನು ಮೂಕವಿಸ್ಮಿತವಾಗಿಸಿದ 5 ಅದ್ಭುತ ಹೊಡೆತಗಳು!
IPL
  • News18
  • Last Updated: January 29, 2019, 3:51 PM IST
  • Share this:
ಬೆಂಗಳೂರು (. 29): 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಇನ್ನು ಕೇವಲ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಬಿಸಿಸಿಐ ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯಲಿದೆ ಎಂದು ತಿಳಿಸಿದ್ದು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಚುಟುಕು ಕದನ ಎಂದಮೇಲೆ ಅಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರ, ಹೊಡಿಬಡಿ ಆಟದ ರಂಗು ಇದ್ದೇ ಇರುತ್ತದೆ. ಅಂತೆಯೆ ಕಳೆದ ಸೀಸನ್​​ನಲ್ಲಿ ಕೆಲ ಬ್ಯಾಟ್ಸ್​ಮನ್​​ಗಳ ಹೊಡೆದ ಕೆಲವು ಹೊಡೆತಗಳು ವಾವ್ ಎಂಬಂತ್ತಿತ್ತು. ಅವುಗಳಲ್ಲಿ ಬೆಸ್ಟ್​ 5 ಶಾಟ್​​ಗಳನ್ನು ನೋಡುವುದಾದರೆ...

ಇಶಾನ್ ಕಿಶನ್​ರ ಹೆಲಿಕಾಫ್ಟರ್ ಶಾಟ್:

ಮುಂಬೈ ಇಂಡಿಯನ್ಸ್​ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​​ ಇಶಾನ್ ಕಿಶನ್​​ ಕಳೆದ ಸೀಸನ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧ ಕೇವಲ 21 ಎಸೆತಗಳಲ್ಲಿ 62 ರನ್ ಚಚ್ಚಿದ್ದರು. ಈ ಸಂದರ್ಭ ಅವರು ಬಾರಿಸಿದ ಹೆಲಿಕಾಫ್ಟರ್ ಶಾಟ್ ಅದ್ಭುವಾಗಿತ್ತು.

 



ರಿಷಭ್ ಪಂತ್ ಸ್ಕೂಪ್ ಶಾಟ್:

ಕಳೆದ ಸೀಸನ್​ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್​​ ತಂಡದಲ್ಲಿ ಮಿಂಚಿದ ಈ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ಎಲ್ಲರನ್ನು ದಂಗಾಗುವಂತೆ ಮಾಡಿದ್ದರು. ತಮ್ಮ ಅದ್ಭುತ ಹೊಡೆತಗಳಿಂದಲೇ ಗಮನ ಸೆಳೆದ ಪಂತ್, ಅದರಲ್ಲು ಬ್ಯಾಕ್ ಸೈಡ್​ನಲ್ಲಿ ಥರ್ಡ್​​ ಮ್ಯಾನ್​​ ಕಡೆ ಬಾರಿಸಿದ ಸ್ಕೂಪ್ ಶಾಟ್ ಫೇಮಸ್ ಆಯಿತು.

 



ವೈಡ್ ಬಾಲ್​​​ಗೆ ಎಬಿ ಡಿವಿಲಿಯರ್ಸ್​ ಸಿಕ್ಸ್​​:

ಇದನ್ನೂ ಒದಿ: ಶುಭ್ಮನ್ ಗಿಲ್ ಮುಂದೆ ನಾನೇನು ಅಲ್ಲ: ನ್ಯೂಜಿಲೆಂಡ್ ಸರಣಿಗೆ ಗುಡ್​ ಬೈ ಹೇಳಿದ ಕೊಹ್ಲಿ

ಆರ್​ಸಿಬಿ ತಂಡದ ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್​​ಗೆ ಯಾವರೀತಿ ಬೌಲಿಂಗ್ ಮಾಡಬೇಕು ಎಂದು ಬೌಲರ್​ಗಳು ಹೆದರುತ್ತಾರೆ. ಎಂತಹದೆ ಬಾಲ್ ಎಸೆಯಲಿ ಅದನ್ನು ಸಿಕ್ಸ್​ ಸಿಡಿಸುವ ಚಾತುರ್ಯ ಎಬಿಡಿ ಹೊಂದಿದ್ದಾರೆ. ಅಂತೆಯೆ ಕಳೆದ ಸೀಸನ್​ನಲ್ಲಿ ಎಬಿಡಿ ವೈಡ್​​ ಬಾಲ್​​​​​​ನ್ನು ಸಿಕ್ಸ್​ ಅಟ್ಟಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

 



ರಿಷಭ್ ಪಂತ್​ರಿಂದ ಒಂದೇ ಕೈನಲ್ಲಿ ಸಿಕ್ಸ್​:

ಸನ್​ರೈಸರ್ಸ್​ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಪಂತ್ ಕೇವಲ 63 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸ್​ನೊಂದಿಗೆ ಅಜೇಯ 128 ರನ್ ಸಿಡಿಸಿ ಮಿಂಚಿದರು. ಅದರಲ್ಲು ಈ ಪಂದ್ಯದ ಮಧ್ಯೆ ಭುವನೇಶ್ವರ್ ಕುಮಾರ್ ಬೌಲಿಂಗ್​​ನಲ್ಲಿ ಪಂತ್ ಒಂದೇ ಕೈನಲ್ಲಿ ಸಿಕ್ಸ್​ ಸಿಡಿಸಿದ್ದು ಎಲ್ಲರನ್ನು ಒಮ್ಮೆ ದಂಗಾಗಿಸಿತು.

 



ಬ್ರೆಂಡನ್​ ಮೆಕಲಮ್​​ರ ಹೆಡ್ ಶಾಟ್:

ಕಳೆದ ಸೀಸನ್​​ನಲ್ಲಿ ಆರ್​ಸಿಬಿ ತಂಡದ ಪರವಾಗಿ ಆಡಿದ ಮೆಕಲಮ್​ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿಯಲಿಲ್ಲ. ಆದರೆ, ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಮೆಕಲಮ್ ಹೊಡೆದ ಹೊಡೆತ ಭಾರೀ ಸದ್ದು ಮಾಡಿತ್ತು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಹಿಂದೆಯಿಂದ ತಲೆಮೇಲೆ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಪರಿ ಅದ್ಭುತವಾಗಿತ್ತು.



First published: January 29, 2019, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading