ಕ್ರಿಕೆಟ್ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾದ ಅಫ್ಘನ್ ಸ್ಪಿನ್ನರ್ ರಶೀದ್ ಖಾನ್

news18
Updated:May 26, 2018, 5:45 PM IST
ಕ್ರಿಕೆಟ್ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾದ ಅಫ್ಘನ್ ಸ್ಪಿನ್ನರ್ ರಶೀದ್ ಖಾನ್
news18
Updated: May 26, 2018, 5:45 PM IST
ನ್ಯೂಸ್ 18 ಕನ್ನಡ

ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಬೌಲಿಂಗ್ ಪಡೆಯಿಂದಲೇ ಎದುರಾಳಿಗರಿಗೆ ನಡುಕ ಹುಟ್ಟಿಸಿರುವ ತಂಡ ಎಂದರೆ ಅದು ಸನ್​ರೈಸರ್ಸ್​ ಹೈದರಬಾದ್. ಅದರ ಫಲವಾಗಿಯೆ ನಿನ್ನೆ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಮಣಿಸಿ ವಿಲಿಯಮ್ಸನ್ ಪಡೆ ಫೈನಲ್​​ಗೆ ಲಗ್ಗೆ ಇಟ್ಟಿದೆ. ಪ್ರತಿ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದು ಕೊಡುವ ಬೌಲರ್​ಗಳು ನಿನ್ನೆಯು ಕೈ ಹಿಡಿದರು. ಅದರಲ್ಲು ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರು ಹೈದರಾಬಾದ್ ತಂಡದಲ್ಲಿ ಮಿಂಚಿತ್ತಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ರಶೀದ್ ಖಾನ್ ಅವರು ನಿನ್ನೆಯ ಪಂದ್ಯದಲ್ಲಿ ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಹಾಗೂ ಆಂಡ್ರೋ ರಸೆಲ್ ಅವರ ಪ್ರಮುಖ 3 ವಿಕೆಟ್ ಕಿತ್ತು ಹೈದರಾಬಾದ್ ಗೆಲುವಿಗೆ ಕಾರಣರಾಗಿದ್ದರು. ಕೇವಲ ಬೌಲಿಂಗ್​ನಲ್ಲಿ ಮಾತ್ರವಲ್ಲದೆ ನಿನ್ನೆ ಬ್ಯಾಟಿಂಗ್​ನಲ್ಲು ಮಿಂಚಿದ ರಶೀದ್, ಕೇವಲ 10 ಎಸೆತಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ ಅಜೇಯ 34 ರನ್ ಸಿಡಿಸಿ ತಂಡದ ರನ್ ಗತಿಯನ್ನು ಏರಿಸಿದರು.

ಸದ್ಯ ರಶೀದ್ ಖಾನ್ ಅವರ ಈ ಆಲ್ರೌಂಡರ್ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರಿಂದ ಪ್ರಶಂಸೆಯ ಮಹಾಪುರ ಹರಿದುಬರುತ್ತಿದೆ. ಅದರಲ್ಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ರಶೀದ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ಟಿ-20 ಮಾದರಿಯ ಕ್ರಿಕೆಟ್​ನಲ್ಲಿ ರಶೀದ್ ಅವರು ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್ ಎಂದು ಹೇಳಿದ್ದಾರೆ. ಅಲ್ಲದೆ ರಶೀದ್ ಅವರ ಬ್ಯಾಟಿಂಗ್​ ಕೌಶಲ್ಯಕ್ಕೂ ಸಚಿನ್ ಫಿದಾ ಆಗಿದ್ದಾರೆ. ಇವರ ಜೊತೆಗೆ ಅನಿಲ್ ಕುಂಬ್ಳೆ, ವಿ.ವಿ. ಎಸ್ ಲಕ್ಷಣ್, ಇರ್ಫಾನ್ ಪಠಾಣ್, ಆರ್​​. ಪಿ ಸಿಂಗ್, ಯಜುವೇಂದ್ರ ಚಾಹಲ್ ಅವರು ಟ್ವೀಟ್ ಮಾಡುವ ಮೂಲಕ ಶುಭಾಷಯ ತಿಳಿಸಿದ್ದಾರೆ.

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಶೀದ್ ಒಟ್ಟು 16 ಪಂದ್ಯವಾಡಿದ್ದು 21 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಪಡೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...