ನೇರ ಪ್ರಸಾರ

(LIVE): ಐಪಿಎಲ್ 2018: ಮುಂಬೈ vs ಪಂಜಾಬ್: ರಾಹುಲ್ ಹೋರಾಟ ವ್ಯರ್ಥ: ಮುಂಬೈ​ಗೆ 3 ರನ್​ಗಳ ರೋಚಕ ಜಯ

kannada.news18.com | May 17, 2018, 12:07 AM IST
facebook Twitter google Linkedin
Last Updated May 17, 2018
auto-refresh

ಮುಖ್ಯಾಂಶ

12:22 am (IST)

12:22 am (IST)

12:07 am (IST)

20ನೇ ಓವರ್​ನ ಮೆಕ್ಲೆನಘನ್ ಅವರ 4ನೇ ಎಸೆತದಲ್ಲಿ ಅಕ್ಷರ್ ಪಟೇಲ್ ಅವರಿಂದ ಡೀಪ್ ಮಿಡ್ ವಿಕೆಟ್​ನಲ್ಲಿ ಭರ್ಜರಿ ಸಿಕ್ಸ್

5ನೇ ಎಸೆತದಲ್ಲಿಮನೋಜ್ ತಿವಾರಿ ಅವರಿಂದ ಬೌಂಡರಿ

20 ಓವರ್​ನಲ್ಲಿ 183 ರನ್ ಗಳಿಸಲಷ್ಟೇ ಶಕ್ತವಾದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ

ಮುಂಬೈ ಇಂಡಿಯನ್ಸ್​ಗೆ 3 ರನ್​ಗಳ ರೋಚಕ ಗೆಲುವು


12:04 am (IST)

20ನೇ ಓವರ್​: ಮೆಕ್ಲೆನಘನ್ ಅವರ 3 ಎಸೆತದಲ್ಲಿ ಯುವರಾಜ್ ಸಿಂಗ್ ಔಟ್

1 ರನ್ ಗಳಿಸಿ ಲೆವಿಸ್​ಗೆ ಕ್ಯಾಚಿತ್ತು ನಿರ್ಗಮಿಸಿದ ಯುವರಾಜ್

ಪಂಜಾಬ್: 173/5(19.3 ಓವರ್​)

ಸೋಲಿನ ಸುಳಿಯಲ್ಲಿ ಅಶ್ವಿನ್ ಪಡೆ

ಇನ್ನು 3 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 15 ರನ್ ಬೇಕಾಗಿದೆ


11:59 pm (IST)

ರಾಹುಲ್ ನಿರ್ಗಮನದ ಬಳಿಕ ಕ್ರಿಸ್​ಗೆ ಬಂದ ಯುವರಾಜ್ ಸಿಂಗ್

19ನೇ ಓವರ್​ನ ಬುಮ್ರಾ ಅವರ 6 ಎಸೆತದಲ್ಲಿ 1 ಪ್ರಮುಖ ವಿಕೆಟ್ ಕಳೆದುಕೊಂಡು 6 ರನ್​ ಗಳಿಸಿದ ಪಂಜಾಬ್

ಪಂಜಾಬ್: 170/4(19 ಓವರ್​)

ಇನ್ನು 6 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 17 ರನ್ ಬೇಕಾಗಿದೆ


11:56 pm (IST)

19ನೇ ಓವರ್​: ಜಸ್​ಪ್ರೀತ್ ಬುಮ್ರಾ ಅವರ 3ನೇ ಎಸೆತದಲ್ಲಿ ಪಂಜಾಬ್​ನ ದೊಡ್ಡ ವಿಕೆಟ್ ಪತನ

94 ರನ್​ ಗಳಿಸಿ ಕಟ್ಟಿಂಗ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದ ರಾಹುಲ್

ಸಂಕಷ್ಟದಲ್ಲಿ ಪಂಜಾಬ್ ತಂಡ

ಇನ್ನು 9 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 20 ರನ್ ಬೇಕಾಗಿದೆ


11:52 pm (IST)

17ನೇ ಓವರ್​: ಬೆನ್ ಕಟ್ಟಿಂಗ್ ಅವರ 3ನೇ ಎಸೆತದಲ್ಲಿ ರಾಹುಲ್ ಅವರಿಂದ ಬೌಂಡರಿ 

4ನೇೆ ಹಾಗೂ 5ನೇ ಎಸೆತದಲ್ಲಿ ಮತ್ತೆರಡರು ಬೌಂಡರಿ ಸಿಡಿಸಿದ ರಾಹುಲ್

ಈ ಓವರ್​ನಲ್ಲಿ 15 ರನ್​ ಕಲೆಹಾಕಿದ ಪಂಜಾಬ್

18 ಓವರ್​ಗೆ ಪಂಜಾಬ್ 3 ವಿಕೆಟ್ ನಷ್ಟಕ್ಕೆ 164 ರನ್

ಇನ್ನು 12 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 23 ರನ್ ಬೇಕಾಗಿದೆ


11:44 pm (IST)

ಆರೋನ್ ಫಿಂಚ್ ನಿರ್ಗಮನದ ಬಳಿಕ ಕ್ರಿಸ್​ಗೆ ಬಂದ ಮರ್ಕಸ್ ಸ್ಟಾಯಿನ್ಸ್

17ನೇ ಓವರ್​​ ಜಸ್​​ಪ್ರೀತ್ ಬುಮ್ರಾ ಅವರ 5ನೇ ಎಸೆತದಲ್ಲಿ ಸ್ಟಾಯಿನ್ಸ್​ ಔಟ್​

ಬಂದ ಬೆನ್ನಲ್ಲೆ 1 ರನ್​ ಗಳಿಸಿ ಕೀಪರ್​ಗೆ ಕ್ಯಾಚಿತ್ತು ಔಟಾದ ಸ್ಟಾಯಿನ್ಸ್​

ಇನ್ನು 19 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 38 ರನ್ ಬೇಕಾಗಿದೆ


11:39 pm (IST)

ರಾಹುಲ್-ಫಿಂಚ್ ಜೊತೆಯಾಟ ಅಂತ್ಯ: ಫಿಂಚ್(46) ಔಟ್​

17ನೇ ಓವರ್​: ಜಸ್​​ಪ್ರೀತ್ ಬುಮ್ರಾ ಅವರ ಮೊದಲ ಎಸೆತದಲ್ಲಿ ಸಿಕ್ಸ್ ಬಾರಿಸಲೋಗಿ ಔಟಾದ ಫಿಂಚ್

46 ರನ್​ ಗಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ನಿರ್ಗಮಿಸಿದ ಫಿಂಚ್

ಪಂಜಾಬ್: 145/2(16.1 ಓವರ್​)

 


11:37 pm (IST)

16ನೇ ಓವರ್​: ಮಯಾಂಕ್ ಮಾರ್ಕಂಡೆ ಅವರ 5ನೇ ಎಸೆತದಲ್ಲಿ ನೇರವಾಗಿ ಚೆಂಡನ್ನು ಸಿಕ್ಸರ್​​ಗೆ ಅಟ್ಟಿದ ರಾಹುಲ್

ಕೊನೆಯ ಎಸೆತದಲ್ಲಿ ಲಾಂಗ್​ ಆನ್​ನಲ್ಲಿ ರಾಹುಲ್ ಅವರಿಂದ ಮತ್ತೊಂದು ಸಿಕ್ಸ್​

16 ಓವರ್​ ಅಂತ್ಯಕ್ಕೆ ಪಂಜಾಬ್ 1 ವಿಕೆಟ್ ನಷ್ಟಕ್ಕೆ 145 ರನ್

ರಾಹುಲ್-ಫಿಂಚ್ ಶತಕದ ಜೊತೆಯಾಟ

ಕೆ. ಎಲ್. ರಾಹುಲ್ 76, ಆರೋನ್ ಫಿಂಚ್ 46

ಇನ್ನು 24 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 42 ರನ್ ಬೇಕಾಗಿದೆ


11:31 pm (IST)

15ನೇ ಓವರ್​: ಹಾರ್ದಿಕ್ ಪಾಂಡ್ಯ ಅವರ 6 ಎಸೆತಗಳಲ್ಲಿ 6 ರನ್​​

15 ಓವರ್​ಗೆ ಪಂಜಾಬ್ 127/1

ಕೆ. ಎಲ್. ರಾಹುಲ್ 61, ಆರೋನ್ ಫಿಂಚ್ 43

ಇನ್ನು 30 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 60 ರನ್ ಬೇಕಾಗಿದೆ


11:24 pm (IST)

14ನೇ ಓವರ್​: ಕ್ರುನಾಲ್ ಪಾಂಡ್ಯ ಅವರ 3ನೇ ಎಸೆತದಲ್ಲಿ ನೇರಾವಗಿ ಚೆಂಡನ್ನು ಬೌಂಡರಿಗೆ ಅಟ್ಟಿದ ಫಿಂಚ್

ಈ ಓವರ್​ನಲ್ಲಿ 10 ರನ್ ಕಲೆಹಾಕಿದ ಪಂಜಾಬ್

14 ಓವರ್​ ಅಂತ್ಯಕ್ಕೆ ಪಂಜಾಬ್ 1 ವಿಕೆಟ್ ಕಳೆದುಕೊಂಡು 121 ರನ್​ ಗಳಿಸಿದೆ

ಕೆ. ಎಲ್. ರಾಹುಲ್ 59, ಆರೋನ್ ಫಿಂಚ್ 41

ಇನ್ನು 36 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 66 ರನ್ ಬೇಕಾಗಿದೆ


11:19 pm (IST)

13ನೇ ಓವರ್​: ಮಿಚೆಲ್ ಮೆಕ್ಲೆನಘನ್ ಅವರ 2ನೇ ಎಸೆತದಲ್ಲಿ ರಾಹುಲ್ ಅವರಿಂದ ಫೈನ್ ಲೆಗ್​ನಲ್ಲಿ ಬೌಂಡರಿ

4ನೇ ಎಸೆತದಲ್ಲಿ ಫಿಂಚ್ ಅವರಿಂದ ಲಾಂಗ್​ ಆಫ್ ಮೂಲಕ ಮತ್ತೊಂದು ಬೌಂಡರಿ

13 ಓವರ್​ಗೆ ಪಂಜಾಬ್ 111/1

ಕೆ. ಎಲ್. ರಾಹುಲ್ 58, ಆರೋನ್ ಫಿಂಚ್ 33

ಇನ್ನು 42 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 76 ರನ್ ಬೇಕಾಗಿದೆ


11:14 pm (IST)

11:14 pm (IST)

12ನೇ ಓವರ್​: ಜಸ್​ಪ್ರೀತ್​ ಬುಮ್ರಾ ಅವರ 6 ಎಸೆತದಲ್ಲಿ ಕೇವಲ 4 ರನ್​

12 ಓವರ್​ಗೆ ಪಂಜಾಬ್ 1 ವಿಕೆಟ್ ನಷ್ಟಕ್ಕೆ 99 ರನ್​

ಕೆ. ಎಲ್. ರಾಹುಲ್ 52, ಆರೋನ್ ಫಿಂಚ್ 27

ಇನ್ನು 48 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 88 ರನ್ ಬೇಕಾಗಿದೆ

 


11:09 pm (IST)

11ನೇ ಓವರ್​: ಕ್ರುನಾಲ್ ಪಾಂಡ್ಯ ಅವರ 4ನೇ ಎಸೆತದಲ್ಲಿ ಫಿಂಚ್ ಅವರಿಂದ ಬೌಂಡರಿ

ಈ ಓವರ್​ನಲ್ಲಿ 9 ರನ್​ ಕಲೆಹಾಕಿದ ಪಂಜಾಬ್

ಕೆ. ಎಲ್. ರಾಹುಲ್ ಭರ್ಜರಿ ಅರ್ಧಶತಕ

11 ಓವರ್​ಗೆ ಪಂಜಾಬ್ 95/1

ಕೆ. ಎಲ್. ರಾಹುಲ್ 50, ಆರೋನ್ ಫಿಂಚ್ 25


11:05 pm (IST)

10ನೇ ಓವರ್​​: ಹಾರ್ದಿಕ್ ಪಾಂಡ್ಯ ಅವರ 6 ಎಸೆತಗಳಲ್ಲಿ 6 ರನ್​​

ರಾಹುಲ್-ಫಿಂಚ್ ಅರ್ಧಶತಕದ ಜೊತೆಯಾಟ

​10 ಓವರ್​ಗೆ ಪಂಜಾಬ್ 1 ವಿಕೆಟ್ ನಷ್ಟಕ್ಕೆ 86 ರನ್

ಕೆ. ಎಲ್. ರಾಹುಲ್ 47, ಆರೋನ್ ಫಿಂಚ್ 19

ಇನ್ನು 60 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 101 ರನ್ ಬೇಕಾಗಿದೆ

 


11:00 pm (IST)

​9ನೇ ಓವರ್​: ಮಯಾಂಕ್ ಮಾರ್ಕಂಡೆ ಅವರ 6 ಎಸೆತಗಳಲ್ಲಿ 7 ರನ್​

ಪಂಜಾಬ್ 9 ಓವರ್​ಗೆ 1 ವಿಕೆಟ್ ನಷ್ಟಕ್ಕೆ 80 ರನ್

ಕೆ. ಎಲ್. ರಾಹುಲ್ 43, ಆರೋನ್ ಫಿಂಚ್ 17

ಇನ್ನು 66 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 107 ರನ್ ಬೇಕಾಗಿದೆ

 


10:53 pm (IST)

7ನೇ ಓವರ್​: ಮಯಾಂಕ್ ಮಾರ್ಕಂಡೆ ಅವರ ಮೊದಲ ಎಸೆತದಲ್ಲೇ ರಾಹುಲ್ ಅವರಿಂದ ಬೌಂಡರಿ

ಈ ಓವರ್​ನಲ್ಲಿ 9 ರನ್​ ಗಳಿಸಿದ ಪಂಜಾಬ್

7 ಓವರ್​ ಅಂತ್ಯಕ್ಕೆ ಪಂಜಾಬ್ 1 ವಿಕೆಟ್ ನಷ್ಟಕ್ಕೆ 66 ರನ್

ಕೆ. ಎಲ್. ರಾಹುಲ್ 34, ಆರೋನ್ ಫಿಂಚ್ 13

ಇನ್ನು 78 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 121 ರನ್ ಬೇಕಾಗಿದೆ

 


10:48 pm (IST)

6ನೇ ಓವರ್​: ಕ್ರುನಾಲ್ ಪಾಂಡ್ಯ ಅವರ ಮೊದಲ ಎಸೆತದಲ್ಲಿ ಲಾಂಗ್ ಆನ್​ನಲ್ಲಿ ರಾಹುಲ್ ಅವರಿಂದ ಬೌಂಡರಿ

5ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದ ರಾಹುಲ್

6 ಓವರ್​ಗೆ ಪಂಜಾಬ್ 1 ವಿಕೆಟ್ ನಷ್ಟಕ್ಕೆ 57 ರನ್​

ಕೆ. ಎಲ್. ರಾಹುಲ್ 27, ಆರೋನ್ ಫಿಂಚ್ 11

ಇನ್ನು 84 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 130 ರನ್ ಬೇಕಾಗಿದೆ


10:44 pm (IST)

ಗೇಲ್ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಆರೋನ್ ಫಿಂಚ್

5ನೇ ಓವರ್​: ಹಾರ್ದಿಕ್ ಪಾಂಡ್ಯ ಅವರ ಕೊನೆಯ ಎಸೆತದಲ್ಲಿ ಫಿಂಚ್ ಅವರಿಂದ ಲಾಂಗ್​ ಆನ್​ನಲ್ಲಿ ಸಿಕ್ಸ್

5 ಓವರ್​ ಅಂತ್ಯಕ್ಕೆ ಪಂಮಜಾಬ್ 1 ವಿಕೆಟ್ ನಷ್ಟಕ್ಕೆ 46

ಕೆ. ಎಲ್. ರಾಹುಲ್ 17, ಆರೋನ್ ಫಿಂಚ್ 10

ಇನ್ನು 90 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 141 ರನ್ ಬೇಕಾಗಿದೆ


10:44 pm (IST)

ಗೇಲ್ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಆರೋನ್ ಫಿಂಚ್

5ನೇ ಓವರ್​: ಹಾರ್ದಿಕ್ ಪಾಂಡ್ಯ ಅವರ ಕೊನೆಯ ಎಸೆತದಲ್ಲಿ ಫಿಂಚ್ ಅವರಿಂದ ಲಾಂಗ್​ ಆನ್​ನಲ್ಲಿ ಸಿಕ್ಸ್

5 ಓವರ್​ ಅಂತ್ಯಕ್ಕೆ ಪಂಮಜಾಬ್ 1 ವಿಕೆಟ್ ನಷ್ಟಕ್ಕೆ 46

ಕೆ. ಎಲ್. ರಾಹುಲ್ 17, ಆರೋನ್ ಫಿಂಚ್ 10

ಇನ್ನು 90 ಬೌಲ್​ ಬಾಕಿ ಇದ್ದು ಪಂಜಾಬ್ ಗೆಲ್ಲಲು 141 ರನ್ ಬೇಕಾಗಿದೆ


10:38 pm (IST)

4ನೇ ಓವರ್​: ಮಿಚೆಲ್ ಮೆಕ್ಲೆನಘನ್ ಅವರ ಮೊದಲ ಎಸೆತದಲ್ಲೇ ನೇರವಾಗಿ ಚೆಂಡನ್ನು ಬೌಂಡರಿಗೆ ಅಟ್ಟಿದ ಗೇಲ್

5ನೇ ಎಸೆತದಲ್ಲಿ ಸಿಕ್ಸ್ ಬಾರಿಸಲೋಗಿ ಔಟಾದ ಗೇಲ್

18 ರನ್ ಗಳಿಸಿ ಬೆನ್ ಕಟ್ಟಿಂಗ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದ ಗೇಲ್

ಪಂಜಾಬ್: 34/1(3.5 ಓವರ್​​)


10:33 pm (IST)

3ನೇ ಓವರ್​: ಹಾರ್ದಿಕ್ ಪಾಂಡ್ಯ ಅವರ ಮೊದಲ ಎಸೆತದಲ್ಲೇ ಗೇಲ್ ಅವರಿಂದ ಭರ್ಜರಿ ಸಿಕ್ಸ್

2ನೇ ಎಸೆತದಲ್ಲಿ ಥರ್ಡ್​​ಮ್ಯಾನ್​ನಲ್ಲಿ ಗೇಲ್ ಅವರಿಂದ ಬೌಂಡರಿ

​5ನೇ ಹಾಗೂ 6ನೇ ಎಸೆತದಲ್ಲಿ ರಾಹುಲ್ ಅವರಿಂದ ಮತ್ತೆರೆಡು ಬೌಂಡರಿ

​ಪಂಜಾಬ್ 3 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 28 ರನ್​

ಕ್ರಿಸ್ ಗೇಲ್ 13, ಕೆ. ಎಲ್. ರಾಹುಲ್ 15


10:28 pm (IST)

2ನೇ ಓವರ್​ನಲ್ಲಿ ಕೇವಲ 1 ರನ್ ಗಳಿಸಿದ ಪಂಜಾಬ್

​ಜಸ್​​ಪ್ರೀತ್ ಬುಮ್ರಾ ಅವರಿಂದ ಉತ್ತಮ ಆರಂಭ

2 ಓವರ್​ಗೆ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 9 ರನ್

ಕ್ರಿಸ್ ಗೇಲ್ 02, ಕೆ. ಎಲ್. ರಾಹುಲ್ 07

 


10:23 pm (IST)

1ನೇ ಓವರ್​: ಮೆಕ್ಲೆನಘನ್ ಅವರ 3ನೇ ಎಸೆತದಲ್ಲಿ ರಾಹುಲ್ ಅವರಿಂದ ಮೊದಲ ಸಿಕ್ಸ್

ಮೊದಲ ಓವರ್​ನಲ್ಲಿ 8 ರನ್​ ಕಲೆಹಾಕಿದ ಪಂಜಾಬ್

1 ಓವರ್​​ ಅಂತ್ಯಕ್ಕೆ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 8 ರನ್

ಕ್ರಿಸ್ ಗೇಲ್ 01, ಕೆ. ಎಲ್. ರಾಹುಲ್ 07


10:22 pm (IST)

ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಇನ್ನಿಂಗ್ಸ್​ ಆರಂಭಿಸಿದ ಕ್ರಿಸ್ ಗೇಲ್ ಹಾಗೂ ಕೆ. ಎಲ್. ರಾಹುಲ್

ಮುಂಬೈ ಪರ ಮೊದಲ ಓವರ್​​ ಬೌಲಿಂಗ್ ಮಾಡುತ್ತಿರುವ ಮಿಚೆಲ್ ಮೆಕ್ಲೆನಘನ್


10:04 pm (IST)

20ನೇ ಓವರ್​ನ ಮೋಹಿತ್ ಶರ್ಮಾ ಅವರ 6 ಎಸೆತಗಳಲ್ಲಿ 9 ರನ್​ ಗಳಿಸಿದ ಮುಂಬೈ

20 ಓವರ್​ ಅಂತ್ಯಕ್ಕೆ ಮುಂಬೈ 8 ವಿಕೆಟ್ ನಷ್ಟಕ್ಕೆ 186 ರನ್​​

ಪಂಜಾಬ್​ಗೆ ಗೆಲ್ಲಲು 187 ರನ್ ಗುರಿ ನೀಡಿದ ಮುಂಬೈ


10:02 pm (IST)

20ನೇ ಒವರ್​: ಮೋಹಿತ್ ಶರ್ಮಾ ಅವರ ಮೊದಲ ಎಸೆತದಲ್ಲಿ ಮಾರ್ಕಂಡೆ ಅವರಿಂದ ಬೌಂಡರಿ

​ಮೊದಲ 4 ಎಸೆತಗಳಲ್ಲಿ 8 ರನ್ ಕಲೆಹಾಕಿದ ಮುಂಬೈ

19.4 ಓವರ್​ಗೆ ಮುಂಬೈ 184/8


9:56 pm (IST)

ಬೆನ್ ಕಟ್ಟಿಂಗ್ ನಿರ್ಗಮನದ ಬಳಿಕ ಕ್ರಿಸ್​ಗೆ ಬಂದ ಮಿಚೆಲ್ ಮೆಕ್ಲೆನಘನ್

18ನೇ ಓವರ್​: ಆಂಡ್ರೋ ಟೈ ಅವರ 2ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್

9 ರನ್ ಗಳಿಸಿ ಅಶ್ವಿನ್​ಗೆ ಕ್ಯಾಚಿತ್ತು ನಿರ್ಗಮಿಸಿದ ಪಾಂಡ್ಯ

19 ಓವರ್​​ ಅಂತ್ಯಕ್ಕೆ ಮುಂಬೈ 175/8


9:50 pm (IST)

9:48 pm (IST)

18ನೇ ಓವರ್​: ಅಶ್ವಿನ್ ಅವರ 4ನೇ ಎಸೆತದಲ್ಲಿ ಬೆನ್ ಕಟ್ಟಿಂಗ್ ಔಟ್​

4 ರನ್​ ಗಳಿಸಿ ಅಕ್ಷರ್ ಪಟೇಲ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದ ಕಟ್ಟಿಂಗ್

17.4 ಓವರ್​ಗೆ ಮುಂಬೈ 160/7


9:46 pm (IST)

17ನೇ ಓವರ್​​ನಲ್ಲಿ ಕೇವಲ 3 ರನ್​

ಆಂಡ್ರೋ ಟೈ ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ

17 ಓವರ್​ಗೆ ಮುಂಬೈ 6 ವಿಕೆಟ್ ನಷ್ಟಕ್ಕೆ 157 ರನ್

ಹಾರ್ದಿಕ್ ಪಾಂಡ್ಯ 04, ಬೆನ್ ಕಟ್ಟಿಂಗ್ 03


9:42 pm (IST)

ಪೊಲ್ಲಾರ್ಡ್​ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಬೆನ್ ಕಟ್ಟಿಂಗ್

16ನೇ ಓವರ್​ನ ಅಶ್ವಿನ್ ಅವರ 6 ಎಸೆತಗಳಲ್ಲಿ 1 ವಿಕೆಟ್ ಕಳೆದುಕೊಂಡು ಕೇವಲ 3 ರನ್ ಗಳಿಸಿದ ಮುಂಬೈ

16 ಓವರ್​ಗೆ ಮುಂಬೈ 154/6

ಹಾರ್ದಿಕ್ ಪಾಂಡ್ಯ 03, ಬೆನ್ ಕಟ್ಟಿಂಗ್ 01


9:40 pm (IST)

16ನೇ ಓವರ್​: ಆರ್​. ಅಶ್ವಿನ್ ಅವರ 3ನೇ ಎಸೆತದಲ್ಲಿ ಪೊಲ್ಲಾರ್ಡ್​ ಔಟ್​

ಸಿಕ್ಸ್ ಬಾರಿಸಲೋಗಿ ಫಿಂಚ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದ ಪೊಲ್ಲಾರ್ಡ್​

15.3 ಓವರ್​ಗೆ ಮುಂಬೈ 6 ವಿಕೆಟ್ ಕಳೆದುಕೊಂಡು 152 ರನ್​ ಗಳಿಸಿದೆ


9:34 pm (IST)

​ಕ್ರುನಾಲ್ ಪಾಂಡ್ಯ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಹಾರ್ದಿಕ್ ಪಾಂಡ್ಯ

15ನೇ ಓವರ್​ನ ಸ್ಟಾಯಿನ್ಸ್ ಅವರ 4ನೇ ಹಾಗೂ 5ನೇ ಎಸೆತದಲ್ಲಿ ಪೊಲ್ಲಾರ್ಡ್ ಅವರಿಂದ ಬೌಂಡರಿ

​ಕೊನೆಯ ಎಸೆತದಲ್ಲಿ ನೇರವಾಗಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಪೊಲ್ಲಾರ್ಡ್​

ಪೊಲ್ಲಾರ್ಡ್​​ ಭರ್ಜರಿ ಅರ್ಧಶತಕ

15 ಓವರ್​ಗೆ ಮುಂಬೈ 5 ವಿಕೆಟ್ ನಷ್ಟಕ್ಕೆ 151 ರನ್​

ಕೀರೋನ್ ಪೊಲ್ಲಾರ್ಡ್​​ 50, ಹಾರ್ದಿಕ್ ಪಾಂಡ್ಯ 01


9:29 pm (IST)

15ನೇ ಓವರ್​: ಸ್ಟಾಯಿನ್ಸ್ ಅವರ 2ನೇ ಎಸೆತದಲ್ಲಿ ಕ್ರುನಾಲ್ ಪಾಂಡ್ಯ ಔಟ್​

ಕ್ರುನಾಲ್-ಪೊಲ್ಲಾರ್ಡ್​​ ಅರ್ಧಶತಕದ ಜೊತೆಯಾಟ ಅಂತ್ಯ

32 ರನ್​ ಗಳಿಸಿ ರಾಜಪೂತ್​ಗೆ ಕ್ಯಾಚಿತ್ತು ನಿರ್ಗಮಿಸಿದ ಕ್ರುನಾಲ್

ಮುಂಬೈ: 136/5(14.2 ಓವರ್​)


9:26 pm (IST)

14ನೇ ಓವರ್​: ಅಂಕಿತ್ ರಜಪೂತ್ ಅವರ 2ನೇ ಎಸೆತದಲ್ಲಿ ಪೊಲ್ಲಾರ್ಡ್​ ಅವರಿಂದ ಲಾಂಗ್ ಆನ್​ನಲ್ಲಿ ಸಿಕ್ಸ್

3ನೇ ಎಸೆತದಲ್ಲಿ ಲಾಂಗ್​ ಆಫ್​ನಲ್ಲಿ ಮತ್ತೊಂದು ಬೌಂಡರಿಸಿ ಬಾರಿಸಿದ ಪೊಲ್ಲಾರ್ಡ್​

ಈ ಓವರ್​ನಲ್ಲಿ 18 ರನ್​ ಕಲೆಹಾಕಿದ ಮುಂಬೈ

ಕ್ರುನಾಲ್-ಪೊಲ್ಲಾರ್ಡ್​​ ಅರ್ಧಶತಕದ ಜೊತೆಯಾಟ. 14 ಓವರ್​ಗೆ ಮುಂಬೈ: 134/4

ಕ್ರುನಾಲ್ ಪಾಂಡ್ಯ 30, ಕೀರೋನ್ ಪೊಲ್ಲಾರ್ಡ್​​ 36


9:20 pm (IST)

13ನೇ ಓವರ್​: ಅಕ್ಷರ್ ಪಟೇಲ್ ಅವರ ಕೊನೆಯ ಎಸೆತದಲ್ಲಿ ಪೊಲ್ಲಾರ್ಡ್​ ಅವರಿಂದ ಲಾಂಗ್ ಆನ್​ನಲ್ಲಿ ಸಿಕ್ಸ್

13 ಓವರ್​ಗೆ ಮುಂಬೈ 116/4

ಕ್ರುನಾಲ್ ಪಾಂಡ್ಯ 29, ಕೀರೋನ್ ಪೊಲ್ಲಾರ್ಡ್​​ 21


9:16 pm (IST)

12ನೇ ಓವರ್​: ಸ್ಟಾಯಿನ್ಸ್ ಅವರ 2ನೇ ಎಸೆತದಲ್ಲಿ ಕ್ರುನಾಲ್ ಪಾಂಡ್ಯ ಅವರಿಂದ ಸಿಕ್ಸ್

3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದಿ ಪಾಂಡ್ಯ

4ನೇ ಎಸೆತದಲ್ಲಿ ಪಾಂಡ್ಯ ಅವರಿಂದ ಬೌಂಡರಿ

ಈ ಓವರ್​ನಲ್ಲಿ 19 ರನ್​ ಕಲೆಹಾಕಿದ ಮುಂಬೈ

ಮುಂಬೈ: 104/4(12 ಓವರ್​)

ಕ್ರುನಾಲ್ ಪಾಂಡ್ಯ 25, ಕೀರೋನ್ ಪೊಲ್ಲಾರ್ಡ್​​ 13


9:11 pm (IST)

11ನೇ ಓವರ್​​ನಲ್ಲಿ 6 ರನ್​ ಕಲೆಹಾಕಿದ ಮುಂಬೈ

ಅಕ್ಷರ್ ಪಟೇಲ್ ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ

11 ಓವರ್​ಗೆ ಮುಂಬೈ 4 ವಿಕೆಟ್ ನಷ್ಟಕ್ಕೆ 85 ರನ್

ಕ್ರುನಾಲ್ ಪಾಂಡ್ಯ 08, ಕೀರೋನ್ ಪೊಲ್ಲಾರ್ಡ್​​ 11


8:57 pm (IST)

10ನೇ ಓವರ್​: ಮರ್ಕಸ್​ ಸ್ಟಾಯಿನ್ಸ್ ಅವರ 5ನೇ ಎಸೆತದಲ್ಲಿ ಪೊಲ್ಲಾರ್ಡ್​ ಅವರಿಂದ ಬೌಂಡರಿ

ಈ ಒವರ್​ನಲ್ಲಿ 7 ರನ್​ ಗಳಿಸಿದ ಮುಂಬೈ

10 ಓವರ್​ಗೆ ಮುಂಬೈ 4 ವಿಕೆಟ್ ನಷ್ಟಕ್ಕೆ 79 ರನ್

ಕ್ರುನಾಲ್ ಪಾಂಡ್ಯ 07, ಕೀರೋನ್ ಪೊಲ್ಲಾರ್ಡ್​​ 07


8:51 pm (IST)

​ರೋಹಿತ್ ಶರ್ಮಾ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಕೀರೋನ್ ಪೊಲ್ಲಾರ್ಡ್​​

9ನೇ ಓವರ್​​ನ ಅಂಕಿತ್​ ರಜಪೂತ್ ಅವರ 6 ಎಸೆತಗಳಲ್ಲಿ ಕೇವಲ 1 ರನ್​

ಮುಂಬೈ 9 ಓವರ್​ಗೆ 72/4

ಕ್ರುನಾಲ್ ಪಾಂಡ್ಯ 06, ಕೀರೋನ್ ಪೊಲ್ಲಾರ್ಡ್​​ 01


8:48 pm (IST)

ಮುಂಬೈ ತಂಡದ 4ನೇ ವಿಕೆಟ್ ಪತನ: ರೋಹಿತ್ ಶರ್ಮಾ(6) ಔಟ್​

9ನೇ ಓವರ್​: ಅಂಕಿತ್ ರಾಜಪೂತ್ ಅವರ 2ನೇ ಎಸೆತದಲ್ಲೇ ರೋಹಿತ್ ಶರ್ಮಾ ಔಟ್​

ಕೇವಲ 6 ರನ್​ ಗಳಿಸಿ ಔಟಾಗಿ ಈ ಬಾರಿಯು ನಿರಾಸೆ ಮೂಡಿಸಿದ ನಾಯಕ ರೋಹಿತ್ ಶರ್ಮಾ

8.2 ಓವರ್​ಗೆ ಮುಂಬೈ 4 ಪ್ರಮುಖ ವಿಕೆಟ್ ಕಳೆದುಕೊಂಡು 71 ರನ್​ ಗಳಿಸಿದೆ


8:44 pm (IST)

8ನೇ ಓವರ್​​: ಆರ್​. ಅಶ್ವಿನ್ ಅವರ 6 ಎಸೆತಗಳಲ್ಲಿ 4 ರನ್

ವಿಕೆಟ್ ಕಳೆದ ಬಳಿಕ ನಿಧಾನಗತಿಯಲ್ಲಿ ರನ್ ಕಲೆಹಾಕಿತ್ತಿರುವ ಮುಂಬೈ

8 ಓವರ್​ಗೆ ಮುಂಬೈ 3 ವಿಕೆಟ್ ನಷ್ಟಕ್ಕೆ 71 ರನ್

ರೋಹಿತ್ ಶರ್ಮಾ 06, ಕ್ರುನಾಲ್ ಪಾಂಡ್ಯ 06


8:40 pm (IST)

ಮುಂಬೈ ಪರ ಇನ್ನಿಂಗ್ಸ್​ ಕಟ್ಟಲು ಮುಂದಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ರುನಾಲ್ ಪಾಂಡ್ಯ

7ನೇ ಓವರ್​​: ಅಕ್ಷರ್ ಪಟೇಲ್ ಅವರ 6 ಎಸೆತದಲ್ಲಿ ಕೇವಲ 6 ರನ್​ ಗಳಿಸಿದ ಮುಂಬೈ

7 ಓವರ್​ಗೆ ಮುಂಬೈ 3 ವಿಕೆಟ್ ನಷ್ಟಕ್ಕೆ 66 ರನ್

ರೋಹಿತ್ ಶರ್ಮಾ 04, ಕ್ರುನಾಲ್ ಪಾಂಡ್ಯ 03


8:35 pm (IST)

ಆಂಡ್ರೋ ಟೈ ದಾಳಿಗೆ ಮುಂಬೈ ತತ್ತರ

6ನೇ ಒವರ್​: ಆಂಡ್ರೋ ಟೈ ಅವರ 3ನೇ ಎಸೆತದಲ್ಲಿ ಮುಂಬೈ ಮತ್ತೊಂದು ಪ್ರಮುಖ ವಿಕೆಟ್ ಪತನ

20 ರನ್​ ಗಳಿಸಿ ಸ್ಟಾಯಿನ್ಸ್​​ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದ ಇಶಾನ್ ಕಿಶನ್

4ನೇ ಎಸೆತದಲ್ಲಿ ಸೂರ್ಯಕುಮಾರ್ ವಿಕೆಟ್ ಕಿತ್ತ ಟೈ

ಕೀಪರ್​ಗೆ ಕ್ಯಾಚಿತ್ತು ಔಟಾದ ಸೂರ್ಯಕುಮಾರ್(27)

ಮುಂಬೈ: 59/3(5.3 ಓವರ್​​)

 


8:29 pm (IST)

5ನೇ ಒವರ್​: ಮೋಹಿತ್ ಶರ್ಮಾ ಅವರ 2ನೇ ಎಸೆತದಲ್ಲಿ ಕಿಶನ್ ಅವರಿಂದ ಬೌಂಡರಿ

4ನೇ ಹಾಗೂ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕಿಶನ್

ಈ ಓವರ್​ನಲ್ಲಿ 18 ರನ್​ ಕಲೆಹಾಕಿದ ಮುಂಬೈ

ಮುಂಬೈ: 57/1(5 ಓವರ್​​)

ಸೂರ್ಯಕುಮಾರ್ ಯಾದವ್ 26, ಇಶಾನ್ ಕಿಶನ್ 19


8:22 pm (IST)

ಎವಿನ್ ಲೆವಿಸ್ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಇಶಾನ್ ಕಿಶನ್

4ನೇ ಓವರ್​ ಆಂಡ್ರೋ ಟೈ ಅವರ 6 ಎಸೆತಗಳಲ್ಲಿ 2 ರನ್​ ಕಲೆಹಾಕಿ 1 ವಿಕೆಟ್ ಕಳೆದುಕೊಂಡ ಮುಂಬೈ

4 ಓವರ್​ಗೆ ಮುಂಬೈ 1 ವಿಕೆಟ್ ನಷ್ಟಕ್ಕೆ 39 ರನ್​

ಸೂರ್ಯಕುಮಾರ್ ಯಾದವ್ 26, ಇಶಾನ್ ಕಿಶನ್ 02


8:19 pm (IST)

4ನೇ ಓವರ್​: ಆಂಡ್ರೋ ಟೈ ಅವರ ಮೊದಲ ಎಸೆತದಲ್ಲೇ ಮುಂಬೈಯ ಮೊದಲ ವಿಕೆಟ್ ಪತನ

ಟೈ ಅವರ ಬೌಲ್​ನಲ್ಲಿ ಕ್ಲೀನ್​ ಬೌಲ್ಡ್​ ಆದ ಎವಿನ್ ಲೆವಿಸ್(9)

3.1 ಓವರ್​ಗೆ ಮುಂಬೈ 1 ವಿಕೆಟ್ ನಷ್ಟಕ್ಕೆ 37 ರನ್​


8:16 pm (IST)

3ನೇ ಒವರ್​: ಅಂಕಿತ್ ರಜಪೂತ್ ಅವರ 2ನೇ ಎಸೆತದಲ್ಲಿ ಸೂರ್ಯಕುಮಾರ್ ಅವರಿಂದ ಬೌಂಡರಿ

4ನೇ ಎಸೆತದಲ್ಲಿ ಫೈನ್​ಲೆಗ್​ನಲ್ಲಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್

5ನೇ ಎಸೆತದಲ್ಲಿ ಸೂರ್ಯಕುಮಾರ್ ಅವರಿಂದ ಮತ್ತೊಂದು ಸಿಕ್ಸ್

3 ಓವರ್​ ಅಂತ್ಯಕ್ಕೆ ಮುಂಬೈ ವಿಕೆಟ್ ನಷ್ಟವಿಲ್ಲದೆ 37 ರನ್

ಸೂರ್ಯಕುಮಾರ್ ಯಾದವ್ 26, ಎವಿನ್ ಲೆವಿಸ್ 09


8:11 pm (IST)

2ನೇ ಓವರ್​: ಮೋಹಿತ್ ಶರ್ಮಾ ಅವರ 5ನೇ ಎಸೆತದಲ್ಲಿ ಲೆವಿಸ್ ಅವರಿಂದ ಲಾಂಗ್ ಆಫ್​ನಲ್ಲಿ ಭರ್ಜರಿ ಸಿಕ್ಸ್

ಈ ಓವರ್​ನಲ್ಲಿ 8 ರನ್​ ಗಳಿಸಿದ ಮುಂಬೈ

2 ಓವರ್​ ಅಂತ್ಯಕ್ಕೆ ಮುಂಬೈ ವಿಕೆಟ್ ನಷ್ಟವಿಲ್ಲದೆ 16 ರನ್

ಸೂರ್ಯಕುಮಾರ್ ಯಾದವ್ 06, ಎವಿನ್ ಲೆವಿಸ್ 08


8:05 pm (IST)

1ನೇ ಓವರ್​: ಅಂಕಿತ್ ರಜಪೂತ್ ಅವರ 4ನೇ ಎಸೆತದಲ್ಲಿ ಸೂರ್ಯಕುಮಾರ್ ಅವರಿಂದ ಮೊದಲ ಬೌಂಡರಿ

ಮೊದಲ ಓವರ್​ನಲ್ಲಿ 7 ರನ್ ಕಲೆಹಾಕಿದ ಮುಂಬೈ

ಒಂದು ಓವರ್​ಗೆ ಮುಂಬೈ ವಿಕೆಟ್ ನಷ್ಟವಿಲ್ಲದೆ 7 ರನ್​

ಸೂರ್ಯಕುಮಾರ್ ಯಾದವ್ 05, ಎವಿನ್ ಲೆವಿಸ್ 01


8:00 pm (IST)

ಮುಂಬೈ ಇಂಡಿಯನ್ಸ್ ಪರ ಇನ್ನಿಂಗ್ಸ್​ ಆರಂಭಿಸಿದ ಸೂರ್ಯಕುಮಾರ್ ಯಾದವ್ ಹಾಗೂ ಎವಿನ್ ಲೆವಿಸ್

ಪಂಜಾಬ್ ಪರ ಮೊದಲ ಓವರ್​ ಬೌಲಿಂಗ್ ಮಾಡುತ್ತಿರುವ ಅಂಕಿತ್ ರಜಪೂತ್​


7:56 pm (IST)
7:47 pm (IST)

7:41 pm (IST)

7:37 pm (IST)

ಮುಂಬೈ ಇಂಡಿಯನ್ಸ್ ತಂಡ:

ರೋಹಿತ್ ಶರ್ಮಾ(c), ಸೂರ್ಯಕುಮಾರ್ ಯಾದವ್, ಎವಿನ್ ಲೆವಿಸ್, ಕೀರೋನ್ ಪೊಲ್ಲಾರ್ಡ್​​​, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಇಶಾನ್ ಕಿಶನ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ಲೆನಘನ್, ಮಾಯಂಕ್ ಮಾರ್ಕಂಡೆ, ಜಸ್​ಪ್ರೀತ್​​​​ ಬೂಮ್ರಾ.

 

ಕಿಂಗ್ಸ್ ಇಲೆವನ್ ಪಂಜಾಬ್ ತಂಡ:

ರವಿಚಂದ್ರನ್ ಅಶ್ವಿನ್(c), ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಆರೋನ್ ಫಿಂಚ್​​, ಯುವರಾಜ್ ಸಿಂಗ್, ಮನೋಜ್ ತಿವಾರಿ, ಮರ್ಕಸ್ ಸ್ಟಾಯಿನ್ಸ್, ಅಕ್ಷರ್ ಪಟೇಲ್, ಆಂಡ್ರೊ ಟೈ, ಮೋಹಿತ್ ಶರ್ಮಾ,​​​ ಅಂಕಿತ್ ರಜಪೂತ್​​.


7:31 pm (IST)

ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ


7:28 pm (IST)

7:22 pm (IST)

7:08 pm (IST)

ಪಂಜಾಬ್ ತಂಡ ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಗಳಿಸಿದೆ(ರನ್​ರೇಟ್​​: -0.518). ಮೊದಲ 6 ಪಂದ್ಯಗಳಲ್ಲಿ ಪಂಜಾಬ್ ತಂಡ 5ರಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯ ಸಾಧಿಸಿದೆ. ಹ್ಯಾಟ್ರಿಕ್ ಸೋಲು ಅನುಭವಿಸುರುವ ಅಶ್ವಿನ್ ಪಡೆಗೆ ಇನ್ನು 2 ಪಂದ್ಯಗಳಿದ್ದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳ ಎದುರು ಸೆಣೆಸಾಟ ನಡೆಸಲಿದೆ. ಎರಡೂ ಪಂದ್ಯದಲ್ಲಿ ಗೆದ್ದರೆ ಪಂಜಾಬ್ ಹಾದಿ ಸುಗಮವಾಗಿ ಪ್ಲೇ ಆಫ್ ಹಂತಕ್ಕೇರಲಿದೆ. ಎಲ್ಲಾದರು ಒಂದು ಪಂದ್ಯ ಗೆದ್ದರೆ 14 ಅಂಕ ಪಡೆಯಲಿದ್ದು ಬೇರೆ ತಂಡದೊಂದಿಗೆ ರನ್​ರೇಟ್ ಆಧಾರದ ಮೇಲೆ ಪಂಜಾಬ್ ಭವಿಷ್ಯ ನಿರ್ಧಾರವಾಗಲಿದೆ.


7:00 pm (IST)

ಮುಂಬೈ ತಂಡ ಆಡಿರುವ 12 ಪಂದ್ಯಗಳ ಪೈಕಿ 5ರಲ್ಲಿ ಜಯ ಸಾಧಿಸಿ 10 ಅಂಕ ಪಡೆದುಕೊಂಡಿದೆ(ರನ್​ರೇಟ್​​: +0.405). ಕಳೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಸೋತಿರುವ ಮುಂಬೈಗೆ ಪ್ಲೇ ಆಫ್ ಹಾದಿ ಇನ್ನಷ್ಟು ಕಠಿಣವಾಗಿದೆ. ಪಂಜಾಬ್ ಹಾಗೂ ಡೆಲ್ಲಿ ಎದುರು ನಡೆಯಲಿರುವ ಪಂದ್ಯದಲ್ಲಿ ದೊಡ್ಡ ಗತಿಯ ರನ್​​ರೇಟ್​ನಲ್ಲಿ ಗೆದ್ದರೆ ಮುಂಬೈ 14 ಅಂಕ ಹೊಂದುತ್ತದೆ. ಎಲ್ಲಾದರು ಇಂದು ನಡೆಯಲಿರುವ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋತರೆ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಎರಡನೇ ತಂಡ ಮುಂಬೈ ಆಗಲಿದೆ.


6:56 pm (IST)

ಪಂಜಾಬ್ ತಂಡದ ಸ್ಪಿನ್ ಮಾಂತ್ರಿಕ ಮುಜೀದ್ ಉರ್ ರೆಹಮಾನ್ ಗಾಯಗೊಂಡಿದ್ದು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ. ಹಾಗಾಗಿ ನಾಯಕ ಆರ್. ಅಶ್ವಿನ್, ಅಕ್ಷರ್ ಪಟೇಲ್, ಆಂಡ್ರೋ ಟೈ, ಮೋಹಿತ್ ಶರ್ಮಾ ಬೌಲಿಂಗ್​ನಲ್ಲಿ ತಮ್ಮ ನೈಜ ಪ್ರದರ್ಶನ ತೋರಬೇಕಾಗಿದೆ.


6:53 pm (IST)

6:51 pm (IST)

ಪಂಜಾಬ್ ತಂಡ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 88 ರನ್‍ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಈ ಆಘಾತದಿಂದ ಹೊರಬರ ಬೇಕಾದರೆ ಅಶ್ವಿನ್ ಪಡೆ ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ. ಆರಂಭದಲ್ಲಿ ಕೆ. ಎಲ್. ರಾಹುಲ್ ಹಾಗೂ ಕ್ರಿಸ್ ಗೇಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರು. ಆದರೆ ಗೇಲ್ ಈಗ ಮಂಕಾಗದ್ದು ತಂಡಕ್ಕೆ ಹಿನ್ನಡೆಯಾಗುತ್ತಿದೆ. 


6:45 pm (IST)

ಮುಖಾಮುಖಿ: 21

ಮುಂಬೈ ಇಂಡಿಯನ್ಸ್: ಗೆಲುವು-11

ಕಿಂಗ್ಸ್ ಇಲೆವೆನ್ ಪಂಜಾಬ್: ಗೆಲುವು-10


6:39 pm (IST)

6:32 pm (IST)

ಎರಡೂ ತಂಡಗಳು ಈ ವರೆಗೆ 12 ಪಂದ್ಯವಾಡಿದ್ದು ಪಂಜಾಬ್ 6ರಲ್ಲಿ ಜಯಗಳಿಸಿ 12 ಅಂಕ ಗಳಿಸಿದ್ದರೆ, ಮುಂಬೈ 5 ಜಯದೊಂದಿದೆ 10 ಅಂಕ ಹೊಂದಿದೆ. ಹಾಗಾಗಿ ಮುಂಬೈ ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದ್ದು, ಎಲ್ಲಾದರು ಸೋತರೆ ಕೂಟದಿಂದ ಹೊರ ಬಿದ್ದು ಪಂಜಾಬ್ ಹಾದಿ ಸುಗಮಗೊಳ್ಳಲಿದೆ.


6:22 pm (IST)

ಮುಂಬೈ ತಂಡಕ್ಕೆ ಉತ್ತಮ ಆರಂಭ ದೊರಕುತ್ತಿದ್ದರು ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿಲ್ಲ. ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ ಒಟ್ಟು 473 ರನ್​ ಗಳಿಸಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಕೆಲ ಪಂದ್ಯಗಳಲ್ಲಿ ಎವಿನ್ ಲೆವಿಸ್ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಇನ್ನೂ ಲಯಕಂಡುಕೊಂಡಿಲ್ಲ. ಬೌಲಿಂಗ್‍ನಲ್ಲು ಜಸ್‍ಪ್ರೀತ್ ಬುಮ್ರಾ, ಕ್ರುನಾಲ್ ಪಾಂಡ್ಯ, ಮಯಾಂಕ್ ಮಾರ್ಕಂಡೆ, ಮಿಚೆಲ್ ಮೆಕ್ಲೆನಘನ್ ಇನ್ನಷ್ಟು ಶ್ರಮ ವಹಿಸಬೇಕಿದೆ.


6:16 pm (IST)

6:12 pm (IST)

ಪ್ಲೇ ಆಫ್ ಹಂತಕ್ಕೇರಲು ಮುಂಬೈ-ಪಂಜಾಬ್ ಸೆಣೆಸಾಟ

 

ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಐಪಿಎಲ್ ಕದನದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೆಣೆಸಾಟ ನಡೆಸಲಿದೆ. ಉತ್ತಮ ರನ್ ರೇಟ್ ಹೊಂದಿರುವ ಮುಂಬೈಗೆ ಹಾಗೂ ಬಲಿಷ್ಠ ಬ್ಯಾಟಿಂಗ್ ಪಡೆ ಇರುವ ಪಂಜಾಬ್ ತಂಡಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿದೆ. 


5:01 pm (IST)

LOAD MORE
ನ್ಯೂಸ್ 18 ಕನ್ನಡ

ಮುಂಬೈ (ಮೇ. 16): ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಐಪಿಎಲ್ ಕದನದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೆಣೆಸಾಟ ನಡೆಸಲಿದೆ. ಉತ್ತಮ ರನ್ ರೇಟ್ ಹೊಂದಿರುವ ಮುಂಬೈಗೆ ಹಾಗೂ ಬಲಿಷ್ಠ ಬ್ಯಾಟಿಂಗ್ ಪಡೆ ಇರುವ ಪಂಜಾಬ್ ತಂಡಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಎರಡೂ ತಂಡಗಳು ಈ ವರೆಗೆ 12 ಪಂದ್ಯವಾಡಿದ್ದು ಪಂಜಾಬ್ 6ರಲ್ಲಿ ಜಯಗಳಿಸಿ 12 ಅಂಕ ಗಳಿಸಿದ್ದರೆ, ಮುಂಬೈ 5 ಜಯದೊಂದಿದೆ 10 ಅಂಕ ಹೊಂದಿದೆ. ಹಾಗಾಗಿ ಮುಂಬೈ ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದ್ದು, ಎಲ್ಲಾದರು ಸೋತರೆ ಕೂಟದಿಂದ ಹೊರ ಬಿದ್ದು ಪಂಜಾಬ್ ಹಾದಿ ಸುಗಮಗೊಳ್ಳಲಿದೆ.

ಮುಂಬೈ ತಂಡಕ್ಕೆ ಉತ್ತಮ ಆರಂಭ ದೊರಕುತ್ತಿದ್ದರು ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿಲ್ಲ. ಆರಂಭಿಕರಾದ ಸೂರ್ಯಕುಮಾರ್ ಯಾದವ್ ಒಟ್ಟು 473 ರನ್​ ಗಳಿಸಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಕೆಲ ಪಂದ್ಯಗಳಲ್ಲಿ ಎವಿನ್ ಲೆವಿಸ್ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಇನ್ನೂ ಲಯಕಂಡುಕೊಂಡಿಲ್ಲ. ಬೌಲಿಂಗ್‍ನಲ್ಲು ಜಸ್‍ಪ್ರೀತ್ ಬುಮ್ರಾ, ಕ್ರುನಾಲ್ ಪಾಂಡ್ಯ, ಮಯಾಂಕ್ ಮಾರ್ಕಂಡೆ, ಮಿಚೆಲ್ ಮೆಕ್ಲೆನಘನ್ ಇನ್ನಷ್ಟು ಶ್ರಮ ವಹಿಸಬೇಕಿದೆ.

ಇತ್ತ ಪಂಜಾಬ್ ತಂಡ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 88 ರನ್‍ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಈ ಆಘಾತದಿಂದ ಹೊರಬರ ಬೇಕಾದರೆ ಅಶ್ವಿನ್ ಪಡೆ ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ. ಆರಂಭದಲ್ಲಿ ಕೆ. ಎಲ್. ರಾಹುಲ್ ಹಾಗೂ ಕ್ರಿಸ್ ಗೇಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರು. ಆದರೆ ಗೇಲ್ ಈಗ ಮಂಕಾಗದ್ದು ತಂಡಕ್ಕೆ ಹಿನ್ನಡೆಯಾಗುತ್ತಿದೆ. ಬೌಲಿಂಗ್‍ನಲ್ಲಿ ಮುಜೀದ್ ಉರ್ ರೆಹಮಾನ್ ಗಾಯಗೊಂಡಿದ್ದು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ. ಹಾಗಾಗಿ ನಾಯಕ ಆರ್. ಅಶ್ವಿನ್, ಅಕ್ಷರ್ ಪಟೇಲ್, ಆಂಡ್ರೋ ಟೈ, ಮೋಹಿತ್ ಶರ್ಮಾ ಬೌಲಿಂಗ್​ನಲ್ಲಿ ತಮ್ಮ ನೈಜ ಪ್ರದರ್ಶನ ತೋರಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ(ವಾಂಖೆಡೆ ಕ್ರೀಡಾಂಗಣ, ಮುಂಬೈ)

ಮುಖಾಮುಖಿ: 21

ಮುಂಬೈ ಇಂಡಿಯನ್ಸ್: ಗೆಲುವು-11

ಕಿಂಗ್ಸ್ ಇಲೆವೆನ್ ಪಂಜಾಬ್: ಗೆಲುವು-10