ಫೈನಲ್ ಪ್ರವೇಶಕ್ಕೆ ಕೋಲ್ಕತ್ತಾ-ಹೈದರಾಬಾದ್ ಸೆಣೆಸಾಟ: ಮಹತ್ವದ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಸಜ್ಜು

news18
Updated:May 25, 2018, 5:18 PM IST
ಫೈನಲ್ ಪ್ರವೇಶಕ್ಕೆ ಕೋಲ್ಕತ್ತಾ-ಹೈದರಾಬಾದ್ ಸೆಣೆಸಾಟ: ಮಹತ್ವದ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಸಜ್ಜು
news18
Updated: May 25, 2018, 5:18 PM IST
ನ್ಯೂಸ್ 18 ಕನ್ನಡ

ಕೋಲ್ಕತ್ತಾ (ಮೇ. 25): ಐಪಿಎಲ್​​ನ 11ನೇ ಆವೃತ್ತಿಯು ಅಂತಿಮ ಘಟ್ಟದ ಸಮೀಪದಲ್ಲಿದ್ದು ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಎರಡು ಬಾರಿ ಪ್ರಶಸ್ತಿ ಮುಡಿಗೇರಿಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಒಂದು ಬಾರಿ ಚಾಂಪಿಯನ್ ಆಗರುವ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಲಿದೆ. ಇಂದಿನ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಗೆದ್ದವರು ಫೈನಲ್​ನಲ್ಲಿ ಚೆನ್ನೈ ಸೂರ್ ಕಿಂಗ್ಸ್​ ತಂಡವನ್ನು ಎದುರಿಸಲಿದೆ.

ಕಳೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಬೌಲರ್​ಗಳ ಅಮೋಘ ಪ್ರದರ್ಶನದ ಫಲವಾಗಿ ಕೆಕೆಆರ್ ತಂಡ 25 ರನ್​ಗಳ ಜಯ ಸಾಧಿಸಿತ್ತು. ಕೋಲ್ಕತ್ತಾ ಪರ ಬ್ಯಾಟಿಂಗ್​ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ಆಂಡ್ರೋ ರಸೆಲ್ ಉತ್ತಮ ಕೊಡುಗೆ ನೀಡಿದ್ದರು. ಕಾರ್ತಿಕ್ ಅರ್ಧಶತಕ ಬಾರಿಸಿದ್ದರೆ, ಕೊನೆ ಹಂತದಲ್ಲಿ ಆಂಡ್ರೊ ರಸೆಲ್ ಅವರು ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಏರಿಸಿದ್ದರು. ಇನ್ನು ಉಳಿದ ಬ್ಯಾಟ್ಸ್​ಮನ್​ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು ಇಂದಿನ ಪಂದ್ಯದಲ್ಲಿ ಮಿಂಚ ಬೇಕಾಗಿದೆ. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ, ಪಿಯೂಷ್ ಚಾವ್ಲಾ, ಸುನೀಲ್ ನರೈನ್, ಕುಲ್ದೀಪ್ ಯಾದವ್ ಭರ್ಜರಿ ಫಾರ್ಮ್​​ನಲ್ಲಿದ್ದು ಎದುರಾಳಿಗಳಿಗೆ ಕಂಟಕವಾಗಿ ಪರಿಣಮಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಇದೇ ಲಯದಲ್ಲಿ ಬೌಲಿಂಗ್ ಮಾಡಿದ್ದೆ ಆದಲ್ಲಿ ಹೈದರಾಬಾದ್ ಬ್ಯಾಟ್ಸ್​ಮನ್​ಗಳು ತಬ್ಬಿಬ್ಬಾಗುವುದು ಖಚಿತ.

ಇತ್ತ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕೂದಲೆಳೆಯಿಂದ ಗೆಲುವು ಕಳೆದುಕೊಂಡ ಹೈದರಾಬಾದ್ ಇಂದು ಗೆಲ್ಲಲೇ ಬೇಕೆಂಬ ನಿರ್ಧಾರದಲ್ಲಿದೆ. ಬೌಲಿಂಗ್​ನಲ್ಲಿ ದೊಡ್ಡ ಶಕ್ತಿಯನ್ನೇ ಹೊಂದಿರುವ ವಿಲಿಯಮ್ಸನ್ ಪಡೆ ಬ್ಯಾಟಿಂಗ್​ನಲ್ಲಿ ಕೊಂಚ ಮಂಕಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ಶಿಖರ್ ಧವನ್ ಉತ್ತಮ ಫಾರ್ಮ್​​ನಲ್ಲಿದ್ದಾರೆ ಆದರು ಕಳೆದ ಪಂದ್ಯದಲ್ಲಿ ಬೇಗನೆ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಬ್ರಾಥ್​ವೈಟ್ 43 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳು ಉತ್ತಮ ಪ್ರದರ್ಶನ ತೋರಲಿಲ್ಲ. ಹಾಗಾಗಿ ಬ್ಯಾಟಿಂಗ್ ವೈಫಲ್ಯದಿಂದ ಹೈದರಾಬಾದ್ ಹೊರಬರಬೇಕಿದ್ದು ಇಂದಿನ ಪಂದ್ಯದಲ್ಲಿ ತಮ್ಮ ಖದರ್ ತೋರಸಬೇಕಿದೆ. ಬೌಲಿಂಗ್​ನಲ್ಲಂತು ಹೈದರಾಬಾದ್ ಅದ್ಭುತ ಪ್ರದರ್ಶನ ತೋರುತ್ತಿದೆ. ಎದುರಾಲಿಗಳಿಗೆ ಭಯ ಹುಟ್ಟಿಸಿರುವ ರಶೀದ್ ಖಾನ್ 15 ಪಂದ್ಯದಲ್ಲಿ 18 ವಿಕೆಟ್ ಕಿತ್ತಿದ್ದರೆ, ಸಿದ್ಧಾರ್ಥ್​​ ಕೌಲ್ 19 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ (ಈಡನ್ ಗಾರ್ಡನ್ಸ್​ ಮೈದಾನ, ಕೋಲ್ಕತ್ತಾ)

ಮುಖಾಮುಖಿ: 14

ಸನ್​​ ರೈಸರ್ಸ್​​ ಹೈದರಾಬಾದ್: ಗೆಲುವು- 05
Loading...

ಕೋಲ್ಕತ್ತಾ ನೈಟ್ ರೈಡರ್ಸ್​​: ಗೆಲುವು-09
First published:May 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ