ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದ ಏರ್ಟೆಲ್ ಸಂಸ್ಥೆಯನ್ನ ಕೋರ್ಟಿಗೆಳೆದ ಜಿಯೋ.. ಬದಲಾವಣೆಗೆ ಒಪ್ಪಿದ ಏರ್ಟೆಲ್


Updated:April 14, 2018, 5:51 PM IST
ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದ ಏರ್ಟೆಲ್ ಸಂಸ್ಥೆಯನ್ನ ಕೋರ್ಟಿಗೆಳೆದ ಜಿಯೋ.. ಬದಲಾವಣೆಗೆ ಒಪ್ಪಿದ ಏರ್ಟೆಲ್

Updated: April 14, 2018, 5:51 PM IST
-ನ್ಯೂಸ್ 18

ನವದೆಹಲಿ(ಏ.14); ಐಪಿಎಲ್ ಕ್ರಿಕೆಟ್ ಪಂದ್ಯಗಳ ‘ಲೈವ್ ಮತ್ತು ಫ್ರೀ ಅಕ್ಸೆಸ್’ ಆಫರ್ ಕುರಿತಂತೆ ಪ್ರಸಾರವಾಗುತ್ತಿರುವ ಜಾಹೀರಾತಿನಲ್ಲಿ ಬದಲಾವಣೆ ಮಾಡುವುದಾಗಿ ಪ್ರಮುಖ ಟೆಲಿಕಾಂ ಸಂಸ್ಥೆ ಏರ್​ಟೆಲ್ ದೆಹಲಿ ಹೈಕೋರ್ಟ್​ಗೆ ತಿಳಿಸಿದೆ.

ಹಾಟ್ ಸ್ಟಾರ್ ಚಂದಾದಾರರಿಗೆ ಮಾತ್ರ ಪ್ರಸಾರ ಉಚಿತವಾಗಿರಲಿದೆ ಮತ್ತು ಬಳಕೆದಾರರ ಡೇಟಾ ಯೋಜನೆಯ ಪ್ರಕಾರ ಡೇಟಾ ಶುಲ್ಕಗಳು ಅನ್ವಯವಾಗುತ್ತವೆ ಎಂದು ಬದಲಾವಣೆಗಳನ್ನ ಮಾಡುವುದಾಗಿ ಏರ್​ಟೆಲ್ ಸಂಸ್ಥೆ ನ್ಯಾಯಮೂರ್ತಿ ಯೋಗೇರ್ಶ ಖನ್ನಾ ನ್ಯಾಯಪೀಠಕ್ಕೆ ತಿಳಿಸಿದೆ.

ಏರ್​ಟೆಲ್​ನ ಈ ಜಾಹೀರಾತು ಜನರನ್ನ ದಾರಿ ತಪ್ಪಿಸುವ ಜೊತೆಗೆ ಜನರನ್ನ ವಂಚಿಸುತ್ತಿದೆ ಎಂದು ನೂತನ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಸಂಸ್ಥೆ ಹೈಕೋರ್ಟ್​ನಲ್ಲಿ ದಾವೆ ಹೂಡಿತ್ತು.

ಗ್ರಾಹಕರಿಗೆ ಐಪಿಎಲ್ ಪಂದ್ಯಗಳ ಲೈವ್ ಮತ್ತು ಉಚಿತ ಸೇವೆ ನೀಡುವುದಾಗಿ ಏರ್ಟೆಲ್ ಸಂಸ್ಥೆ ತಪ್ಪು ಜಾಹೀರಾತು ನೀಡುತ್ತಿದೆ. ಕೇವಲ 4ಜಿ ಸಿಮ್ ಪಡೆದು ಏರ್​ಟೆಲ್ ಆಪ್ ಡೌನ್ಲೋಡ್ ಮಾಡಿಕೊಂಡರೆ ಟಿ-20 ಸರಣಿಯ ಲೈವ್ ಮತ್ತು ಉಚಿತ ಸೇವೆ ಪಡೆಯಬಹುದು ಎಂದು ತಪ್ಪಾಗಿ ಜಾಹೀರಾತು ನೀಡುತ್ತಿದೆ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಕೆ.ಆರ್. ಸಾಸ್ರಿಪ್ರಭು ವಾದಿಸಿದ್ದಾರೆ.

ಜಿಯೋ ಒಂದು ಅಸೂಯೆಯಿಂದ ಕೂಡಿದ ಸಂಸ್ಥೆಯಾಗಿದ್ದು, ಹಾಟ್ ಸ್ಟಾರ್​ಗೆ ಉಚಿತ ಚಂದಾದಾರರಾಗಿ ಎಂಬ ಅದರ ಜಾಹೀರಾತಿನ ಅರ್ಥವೇನು..? ಎಂದು ಏರ್ಟೆಇಲ್ ಪರ ವಕೀಲ ರಾಜೀವ್ ನಾಯರ್ ಪ್ರಶ್ನಿಸಿದ್ದಾರೆ.

ಗ್ರಾಹಕರು ಕ್ರಿಕೆಟ್ ಲೈವ್ ವೀಕ್ಷಿಸಬೇಕಾದರೆ ಅವರು ಪಡೆದಿರುವ ಡಾಟಾ ಯೋಜನೆಯ ಪ್ರಕಾರ ಡೇಟಾ ಬಳಕೆಯಾಗುತ್ತದೆ ಎಂದು ನಿರ್ದಿಷ್ಟವಾಗಿ ತಿಳಿಸಲಾಗಿದೆ ಎಂದು ಏರ್ಟೆಲ್ ಹೇಳಿದೆ.
Loading...

ಏರ್ಟೆಲ್ ಸಂಸ್ಥೆಯ ನೂತನ ಜಾಹೀರಾತಿನ ತಡೆ ಕೋರಿ ಹೈಕೋರ್ಟ್​ನಲ್ಲಿ ಒಂದು ನಿಷ್ಪ್ರಯೋಜಕ ದೂರು ದಾಖಲಿಸಲಾಗಿದೆ.  ಆದರೆ, ಹೈಕೋರ್ಟ್​ಟನಿಂದ ಯಾವುದೇ ತಡೆ ನೀಡಲಾಗಿಲ್ಲ. ಬದಲಾಗಿ, ಹಕ್ಕುಸ್ವಾಮ್ಯದಾರರಿಗಾಗಿ ಕೆಲ ಸಣ್ಣಪುಟ್ಟ ವಿವರಣೆಯನ್ನ ಕೇಳಿದೆ. ಆದೇಶ ಕೈಸೇರಿದ ಬಳಿಕ ಅಗತ್ಯ ನಿರ್ಧಾರ ಕೈಗೊಳ್ಳುವುದಾಗಿ ಏರ್ಟೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿ: ಪಿಟಿಐ

(ಪ್ರಕಟಣೆ:   ನ್ಯೂಸ್ 18 ಡಾಟ್ ಕಾಮ್, ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ನೆಟ್ವರ್ಕ್ 18 ಮೀಡಿಯಾ ಅಂಡ್ ಇನ್ವೆಸ್ಟ್​ಮೆಂಟ್ ಲಿಮಿಟೇಡ್​ನ ಅಂಗಸಂಸ್ಥೆಯಾಗಿದ್ದು, ರಿಲಯನ್ಸ್ ಜಿಯೋ ಸಹ ಇದೇ ಸಂಸ್ಥೆಯ ಒಡೆತನದಲ್ಲಿದೆ)
First published:April 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ