ಐಪಿಎಲ್​ನಲ್ಲಿ ಈ ವರೆಗೆ ಗರಿಷ್ಠ ರನ್ ಗಳಿಸಿರುವ ಟಾಪ್ 10 ಬ್ಯಾಟ್ಸ್​​ಮನ್​ಗಳು ಯಾರು ಗೊತ್ತಾ..?

news18
Updated:May 24, 2018, 6:55 PM IST
ಐಪಿಎಲ್​ನಲ್ಲಿ ಈ ವರೆಗೆ ಗರಿಷ್ಠ ರನ್ ಗಳಿಸಿರುವ ಟಾಪ್ 10 ಬ್ಯಾಟ್ಸ್​​ಮನ್​ಗಳು ಯಾರು ಗೊತ್ತಾ..?
news18
Updated: May 24, 2018, 6:55 PM IST


1. ಸುರೇಶ್ ರೈನಾ

ಈ ವರೆಗಿನ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ ಅವರು ಅತಿ ಹೆಚ್ಚು ರನ್​ಗಳಿರುವ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಒಟ್ಟು 175 ಪಂದ್ಯಗಳನ್ನು ಆಡಿರುವ ರೈನಾ 4953 ರನ್ ಕಲೆಹಾಕಿದ್ದಾರೆ. 1 ಶತಕ ಹಾಗೂ 35 ಬಾರಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಸುರೇಶ್ ರೈನಾ ಅವರ ಗರಿಷ್ಠ ಸ್ಕೋರ್ 100 ಆಗಿದೆ.2. ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು 163 ಪಂದ್ಯಗಳಲ್ಲಿ 4948 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್​​ನಲ್ಲಿ ಒಟ್ಟು 4 ಶತಕ ಸಿಡಿಸಿರುವ ಕೊಹ್ಲಿ 34 ಬಾರಿ ಅರ್ಧಶತಕ ಬಾರಿಸಿದ್ದಾರೆ. ಕೊಹ್ಲಿ ಅವರ ಗರಿಷ್ಠ ಸ್ಕೋರ್ 113 ಆಗಿದೆ.


Loading...

3. ರೋಹಿತ್ ಶರ್ಮಾ

ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ ಅವರು 173 ಪಂದ್ಯಗಳನ್ನು ಆಡಿದ್ದು 4493 ರನ್ ಕಲೆಹಾಕಿ 3ನೇ ಸ್ಥಾನದಲ್ಲಿದ್ದಾರೆ. 1 ಬಾರಿ ಶತಕ ಹಾಗೂ 34 ಅರ್ಧಶತಕ ಬಾರಿಸಿರುವ ಶರ್ಮಾ ಅವರ ಗರಿಷ್ಠ ಸ್ಕೋರ್ ಅಜೇಯ 109 ಆಗಿದೆ.4. ಗೌತಮ್ ಗಂಭೀರ್

ಗೌತಮ್ ಗಂಭೀರ್ ಅವರು ಐಪಿಎಲ್​ನಲ್ಲಿ ಈ ವರೆಗೆ ಒಟ್ಟು 154 ಪಂದ್ಯವಾಡಿದ್ದು 4217 ರನ್ ಬಾರಿಸಿದ್ದಾರೆ. 36 ಬಾರಿ ಅರ್ಧಶತಕ ಬಾರಿಸಿರುವ ಗಂಭೀರ್ ಅವರ ಗರಿಷ್ಠ ಸ್ಕೋರ್ 93 ಆಗಿದೆ.5. ರಾಬಿನ್ ಉತ್ತಪ್ಪ

ಕನ್ನಡಿಗ ರಾಬಿನ್ ಉತ್ತಪ್ಪ ಅವರು ಅತ್ಯಧಿಕ ರನ್ ಗಳಿಸಿರುವ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಒಟ್ಟು 164 ಪಂದ್ಯವಾಡಿರುವ ಉತ್ತಪ್ಪ 4084 ರನ್ ಕಲೆಹಾಕಿದ್ದಾರೆ. 23 ಬಾರಿ ಅರ್ಧಶತಕ ಗಳಿಸಿದ್ದು 87 ಗರಿಷ್ಠ ಸ್ಕೋರ್ ಆಗಿದೆ.6. ಎಂ. ಎಸ್. ಧೋನಿ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂ. ಎಸ್. ಧೋನಿ ಅವರು ಐಪಿಎಲ್ ಟೂರ್ನಿಯಲ್ಲಿ ಒಟ್ಟು 174 ಪಂದ್ಯವಾಡಿದ್ದು 4016 ರನ್ ಗಳಿಸಿದ್ದಾರೆ. 20 ಬಾರಿ ಅರ್ಧಶತಕ ಬಾರಿಸಿರುವ ಧೋನಿ ಅವರ ಗರಿಷ್ಠ ಸ್ಕೋರ್ ಅಜೇಯ 79 ಆಗಿದೆ.7. ಡೇವಿಡ್ ವಾರ್ನರ್

ಹಿಂದಿನ ಬಾರಿ ಸನ್​ರೈಸರ್ಸ್​​ ಹೈದರಾಬಾದ್ ತಂಡದ ನಾಯಕನಾಗಿದ್ದ ಡೇವಿಡ್ ವಾರ್ನರ್ ಅವರು 114 ಪಂದ್ಯದಲ್ಲಿ 4014 ರನ್ ಕಲೆಹಾಕಿದ್ದಾರೆ. 3 ಶತಕ ಸಿಡಿಸಿರುವ ವಾರ್ನರ್ 36 ಬಾರಿ ಅರ್ಧಶತಕ ಬಾರಿಸಿದ್ದು 126 ಗರಿಷ್ಠ ಸ್ಕೋರ್ ಆಗಿದೆ.8. ಶಿಖರ್ ಧವನ್

ಶಿಖರ್ ಧವನ್ ಅವರು ಐಪಿಎಲ್​ನಲ್ಲಿ ಒಟ್ಟು 141 ಪಂದ್ಯಗಳನ್ನು ಆಡಿದ್ದು ಅತ್ಯಧಿಕ ರನ್ ಗಳಿಸಿರುವ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. 3998 ರನ್ ಬಾರಿಸಿರುವ ಧವನ್ 32 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಧವನ್ ಅವರ ಗರಿಷ್ಠ ಸ್ಕೋರ್ ಅಜೇಯ 95 ಆಗಿದೆ.9. ಕ್ರಿಸ್ ಗೇಲ್

ಸ್ಪೋಟಕ ಬ್ಯಾಟ್ಸ್​ಮನ್​ ಕ್ರಿಸ್ ಗೇಲ್ ಅವರು ಒಟ್ಟು 112 ಪಂದ್ಯವಾಡಿದ್ದು 3994 ರನ್ ಕಲೆಹಾಕಿದ್ದಾರೆ. 6 ಶತಕ ಹಾಗೂ 24 ಬಾರಿ ಅರ್ಧಶತಕ ಸಿಡಿಸಿರುವ ಗೇಲ್ ಅವರ ಗರಿಷ್ಠ ಸ್ಕೋರ್ ಅಜೇಯ 175 ಆಗಿದೆ.10. ಎಬಿ ಡಿವಿಲಿಯರ್ಸ್​

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಅವರು ಅತ್ಯಧಿಕ ರನ್ ಗಳಿಸಿರುವ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 141 ಪಂದ್ಯ ಆಡಿರುವ ಎಬಿಡಿ 3953 ರನ್ ಗಳಿಸಿದ್ದಾರೆ. 3 ಬಾರಿ ಶತಕ ಹಾಗೂ 28 ಬಾರಿ ಅರ್ಧಶತಕ ಸಿಡಿಸಿದ್ದು ಡಿವಿಲಿಯರ್ಸ್ ಅವರ ಗರಿಷ್ಠ ಸ್ಕೋರ್ ಅಜೇಯ 133 ಆಗಿದೆ.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ