'ಎಲ್ರಿಗೂ ಹೇಳ್ಬಿಡು... ಈ ಸಲ ಕಪ್​ ನಮ್ದೆ ಗುರೂ', ಎಂದ ಪಂಜಾಬ್​ ತಂಡದ ಕೆಎಲ್​ ರಾಹುಲ್​


Updated:April 22, 2018, 3:54 PM IST
'ಎಲ್ರಿಗೂ ಹೇಳ್ಬಿಡು... ಈ ಸಲ ಕಪ್​ ನಮ್ದೆ ಗುರೂ',  ಎಂದ ಪಂಜಾಬ್​ ತಂಡದ ಕೆಎಲ್​ ರಾಹುಲ್​
Image: Facebook Live

Updated: April 22, 2018, 3:54 PM IST
ನ್ಯೂಸ್​ ಕನ್ನಡ

ನವದೆಹಲಿ (ಏ.22): ಈ ಸಲ ಕಪ್ ನಮ್ದೆ' ಎಂದು ಹೇಳಿಕೊಂಡು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್, 11ನೇ ಆವೃತ್ತಿಯ ಅಖಾಡಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡ ಬೆಂಗಳೂರಿನ ಕೆ ಎಲ್​ ರಾಹುಲ್​ ಶಾಕ್​ ನೀಡಿದ್ದಾರೆ.

ಐಪಿಎಲ್​ ಆರಂಭವಾದಾಗಿನಿಂದಲೂ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್​ ನಮ್ದೆ ಎಂದು ಘೋಷಣೆ ಕೂಗುತ್ತಾ ಸಕತ್​ ಟ್ರೋಲ್​ ಮಾಡುತ್ತಿದ್ದರು. ಅಲ್ಲದೇ ಆರ್​ಸಿಬಿ ಆಟಗಾರರೂ ಸಹ ಈ ಸಲ ಕಪ್​ ನಮ್ದೇ ಎಂದು ಹೇಳಿ ತಮ್ಮ ಅಭಿಮಾನಿಗಳಿಗೆ ಚಿಯರಪ್​ ಮಾಡುತ್ತಿದ್ದರು. ಆದರೆ ಶನಿವಾರ ಕೆಕೆಆರ್​ ತಂಡಕ್ಕೆ ಸೋಲಿನ ರುಚಿ ತೋರಿಸಿದ ಪಂಜಾಬ್​ ತಂಡದ ಆಟಗಾರ ಕೆಎಲ್​ ರಾಹುಲ್​ ಈ ಸಲ ಕಪ್​ ನಮ್ದೆ(ಪಂಜಾಬ್​) ಎಂದು ಹೇಳಿದ್ದಾರೆ. ಈ ವೀಡಿಯೋ ಸಕತ್ ವೈರಲ್​ ಕೂಡಾ ಆಗಿದೆ.ಪಂದ್ಯ ಗೆದ್ದ ಬಳಿಕ ಪಂಜಾಬ್​ ಫೇಸ್​ಬುಕ್​ ಪೇಜ್​ನಿಂದ ಲೈವ್​ ಮಾಡಲಾಗಿತ್ತು, ಡ್ರೆಸ್ಸಿಂಗ್​ ರೂಂನಿಂದ ಲೈವ್​ ಬಂದ ಕ್ರಿಕೆಟಿಗ ಕರುಣ್​​ ನಾಯರ್,​ ಉತ್ತಮ ಆಟ ಪ್ರದರ್ಶಿಸಿದ ಕೆಎಲ್​ ರಾಹುಲ್​ಗೆ ಪಂದ್ಯದ ಕುರಿತು ಅಭಿಪ್ರಯಾ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. 'ಈ ಸಲ ಕಪ್​ ನಮ್ದೇ ಗುರು, ಹೇಳ್ಬಿಡು ಎಲ್ಲರಿಗೂ' ಎಂದು ಲೈವ್​ನಲ್ಲಿ ಹೇಳಿದ್ದಾರೆ. ಸದ್ಯ ರಾಹುಲ್ ಮಾತುಗಳು ಸಕ್ಕತ್​ ವೈರಲ್​ ಆಗಿದೆ.

ಕಳೆದ ಬಾರಿ ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದ ರಾಹುಲ್​ನ್ನು ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡ 11 ಕೋಟಿ ಕೊಟ್ಟು ಖರೀದಿಸಿತ್ತು. ಪಂದ್ಯ ಆರಂಭವಾದಾಗಿನಿಂದಲೂ ರಾಹುಲ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ