ಐಪಿಎಲ್ ಫೈನಲ್: ಯಾರು ಗೆದ್ದರು ಟ್ರೋಫಿ ಮಾತ್ರ ಚೆನ್ನೈ ಪಾಲಿಗೆ

news18
Updated:May 27, 2018, 4:18 PM IST
ಐಪಿಎಲ್ ಫೈನಲ್: ಯಾರು ಗೆದ್ದರು ಟ್ರೋಫಿ ಮಾತ್ರ ಚೆನ್ನೈ ಪಾಲಿಗೆ
news18
Updated: May 27, 2018, 4:18 PM IST
ನ್ಯೂಸ್ 18 ಕನ್ನಡ

ಐಪಿಎಲ್ ಮಹಾ ಸಂಗ್ರಾಮದಲ್ಲಿ ಇಂದು ಫೈನಲ್ ಕದನ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಆದರೆ ಯಾರು ಗೆದ್ದರು ಟ್ರೋಫಿ ಮಾತ್ರ ಚೆನ್ನೈ ಪಾಲಾಗಲಿದೆ. ಅದು ಹೇಗೆ ಅಂತಿರಾ..? ಈ ಸ್ಟೋರಿ ನೋಡಿ.

ಎರಡೂ ತಂಡಗಳ ಮಾಲೀಕರು ಚೆನ್ನೈನವರೇ ಆಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಇಂಡಿಯನ್ ಸಿಮೆಂಟ್ಸ್​​ನ ಮ್ಯಾನೇಜಿಂಗ್ ಡೈರೆಕ್ಟರ್ ಎನ್. ಶ್ರೀನಿವಾಸ್ ಅವರು ಆಗಿದ್ದಾರೆ. ಅಂತೆಯೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಸನ್ ಟಿವಿ ನೆಟ್ ವರ್ಕ್‍ನ ಮುಖ್ಯಸ್ಥ ಕಲಾನಿಧಿ ಮಾರನ್. ಈ ಎರಡು ಮಾಲೀಕರ ಕಂಪೆನಿಗಳು ಇರುವುದು ದಕ್ಷಿಣ ಚೆನ್ನೈನ ಗ್ರೀನ್‍ವೇಸ್ ರಸ್ತೆಯಲ್ಲಿ.

ಕೇವಲ 300 ಮೀಟರ್ ಅಂತರದಲ್ಲಿರುವ ಈ ಎರಡು ಕಂಪೆನಿಗಳ ತಂಡಗಳು ಇಂದು ಐಪಿಎಲ್ ಫೈನಲ್‍ನಲ್ಲಿ ಮುಖಾಮುಖಿ ಆಗಲಿವೆ. ಅಷ್ಟೇ ಅಲ್ಲ, ಎರಡೂ ತಂಡಗಳ ಮಾಲೀಕರು ಕೂಡ ನೆರಹೊರೆಯವರೆ. ಗ್ರೀನ್ ವೇಸ್ ರಸ್ತೆಯಿಂದ ಕೇವಲ ನಾಲ್ಕುವರೇ ಕಿಲೋ ಮೀಟರ್ ದೂರದಲ್ಲಿರುವ ಬೋಟ್ ಕ್ಲಬ್ ರಸ್ತೆಯ ಐಫೈ ಬಂಗಲೆಯಲ್ಲಿ ಕಲಾನಿಧಿ ಮಾರನ್ ಮತ್ತು ಕೆ. ಶ್ರೀನಿವಾಸನ್ ವಾಸವಾಗಿದ್ದಾರೆ.

ಅಂದ ಮೇಲೆ, ಐಪಿಎಲ್ ಫೈನಲ್ ಪಂದ್ಯವನ್ನು ದಾಯಾದಿಗಳ ಕದನ ಎಂದೇ ಬಣ್ಣಿಸಬಹುದು. ನೆರೆಹೊರೆಯವರ ಕಾದಾಟ ಅಂತಲೂ ಹೇಳಬಹುದು. ಅದೇನೇ ಇರಲಿ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‍ನಲ್ಲಿ ತನ್ನ ಘನತೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದರೆ, ಸನ್ ರೈಸರ್ಸ್‍ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಈಗಾಗಲೇ ಐಪಿಎಲ್ 2018ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಯಾರು ಗೆಲ್ಲುತ್ತಾರೆ ಎನ್ನುವುದರ ಲೆಕ್ಕಚಾರವೂ ಆರಂಭವಾಗಿದೆ. ನೆಚ್ಚಿನ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳ ಕಾತರ ಮುಗಿಲು ಮುಟ್ಟಿದೆ.
First published:May 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...