LIVE NOW

(LIVE): ಕೋಲ್ಕತ್ತಾ​​ vs ಡೆಲ್ಲಿ​​: ಡೆಲ್ಲಿಗೆ ಶಾಕ್ ನೀಡಿದ ಸುನೀಲ್ ನರೈನ್: ತವರಿನಲ್ಲಿ 71 ರನ್ಸ್​ನಿಂದ ಗೆದ್ದು ಬೀಗಿದ ಕೋಲ್ಕತ್ತಾ

Kannada.news18.com | April 17, 2018, 12:20 AM IST
facebook Twitter google Linkedin
Last Updated April 17, 2018
auto-refresh

Highlights

ನ್ಯೂಸ್ 18 ಕನ್ನಡ

ಕೋಲ್ಕತ್ತಾ(ಏ. 16): ಐಪಿಎಲ್ 11ನೇ ಆವೃತ್ತಿಯ 13ನೇ ಪಂದ್ಯ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಮತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಸೆಣೆಸಾಟ ನಡೆಸಲಿವೆ.

ಕೆಕೆಆರ್ ಆಡಿದ 3 ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಜಯ ಗಳಿಸಿದ್ದು ಬಿಟ್ಟರೆ, ಮತ್ತೆರಡು ಪಂದ್ಯಗಳಲ್ಲಿ ಸೋಲುಂಡಿದೆ. ಹಾಗಾಗಿ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡು ಕೆಕೆಆರ್​​ ಅನ್ನು ಗೆಲುವಿನ ಲಯಕ್ಕೆ ತರುವ ಜವಾಬ್ದಾರಿ ಕಾರ್ತಿಕ್ ಮೇಲಿದೆ. ಕೋಲ್ಕತ್ತಾ ತಂಡದಲ್ಲಿ ರಾಬಿನ್ ಉತ್ತಪ್ಪ ಅವರ ಕಳಪೆ ಪ್ರದರ್ಶನ ತಂಡದ ಮೈನಸ್ ಪಾಯಿಂಟ್ ಆಗಿದೆ. ಇನ್ನು ಕ್ರಿಸ್ ಲ್ಯಾನ್, ಕಾರ್ತಿಕ್, ನಿತೀಶ್ ರಾಣ, ರಸೆಲ್‍ರಂತಹ ಬಲಿಷ್ಠ ಬ್ಯಾಟಿಂಗ್ ಪಡೆಯಿದ್ದರು ರನ್‍ ಕಲೆಹಾಕುವಲ್ಲಿ ಮಾತ್ರ ವಿಫಲರಾಗುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸುನೀಲ್ ನರೈನ್ ಉತ್ತಮ ಫಾರ್ಮ್‍ನಲ್ಲಿದ್ದು ಪೀಯುಷ್ ಚಾವ್ಲಾ, ಮಿಚೆಲ್ ಜಾನ್ಸನ್, ವಿನಯ್ ಕುಮಾರ್, ಶಿವಂ ಮಾವಿ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದು, ಇಂದಿನ ಪಂದ್ಯ ತವರಿನಲ್ಲಿ ಆದ್ದರಿಂದ ಮಿಂಚುವ ಸಾಧ್ಯತೆ ಇದೆ.

ಇನ್ನು ಗಂಭೀರ್ ನೇತೃತ್ವದ ಡೆಲ್ಲಿ ತಂಡ ಆರಂಭಿಕ ಎರಡೂ ಪಂದ್ಯಗಳನ್ನು ಸೋತು ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ದ ಜಯಗಳಿಸುವ ಮೂಲಕ ಖಾತೆ ತೆರೆದಿತ್ತು. ಇಂದು ತನ್ನ ಮಾಜಿ ತಂಡದೊಂದಿಗೆ ಮೊದಲ ಪಂದ್ಯವಾಡುತ್ತಿರುವ ಗಂಭೀರ್ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕೆಕೆಆರ್​ನಲ್ಲಿ ಜೇಸರ್ ರಾಯ್ ಹಾಗೂ ಗಂಭೀರ್ ಅದ್ಭುತ ಫಾರ್ಮ್‍ನಲ್ಲಿದ್ದು, ಗ್ಲೇನ್ ಮ್ಯಾಕ್ಸ್​​ವೆಲ್​​, ರಿಷಭ್ ಪಂಥ್, ಕೊಲಿನ್ ಮುನ್ರೋ, ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ಶಕ್ತಿ ಆಗಿದ್ದಾರೆ. ಬೌಲಿಂಗ್ ಕ್ಷೇತ್ರದಲ್ಲು ಡೆಲ್ಲಿ ತಂಡ ಬಿಲಿಷ್ಠವಾಗಿದ್ದು ಮಹ್ಮದ್ ಶಮಿ, ಟ್ರೆಂಟ್ ಬೋಲ್ಟ್, ಕ್ರಿಸ್ ಮೋರಿಸ್, ಡೆನಿಯಲ್ ಕ್ರಿಶ್ಚಿಯನ್, ಅಮೀತ್ ಮಿಶ್ರಾ, ರಾಹುಲ್ ತೇವಾಟಿಯರಂತಹ ವಿಕೆಟ್ ಟೇಕಿಂಗ್ ಬೌಲಲ್​ಗಳಿದ್ದಾರೆ. ಒಟ್ಟಾರೆಯಾಗಿ ಎರಡೂ ತಂಡಕ್ಕು ಇಂದಿನ ಪಂದ್ಯ ಮಹತ್ವದ್ದಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ (ಈಡನ್ ಗಾರ್ಡನ್ ಮೈದಾನ, ಕೋಲ್ಕತ್ತಾ)

ಮುಖಾಮುಖಿ: 20

ಕೋಲ್ಕತ್ತಾ ನೈಟ್ ರೈಡರ್ಸ್​​​: ಗೆಲುವು- 12

ಡೆಲ್ಲಿ ಡೇರ್ ಡೆವಿಲ್ಸ್​​: ಗೆಲುವು- 8
12:20 am (IST)

ಪಂದ್ಯ ಶ್ರೇಷ್ಠ: ನಿತೀಶ್ ರಾಣ

 


Load More