• Home
  • »
  • News
  • »
  • sports
  • »
  • T20 World Cup 2022: ಕ್ರಿಕೆಟ್​ ಪ್ರೇಮಿಗಳಿಗೆ ಭರ್ಜರಿ ಅವಕಾಶ​, ದೊಡ್ಡ ಪರೆದಯಲ್ಲಿ ಕಣ್ತುಂಬಿಕೊಳ್ಳಿ ಭಾರತ-ಪಾಕ್ ಹೈವೋಲ್ಟೇಜ್ ಕದನ

T20 World Cup 2022: ಕ್ರಿಕೆಟ್​ ಪ್ರೇಮಿಗಳಿಗೆ ಭರ್ಜರಿ ಅವಕಾಶ​, ದೊಡ್ಡ ಪರೆದಯಲ್ಲಿ ಕಣ್ತುಂಬಿಕೊಳ್ಳಿ ಭಾರತ-ಪಾಕ್ ಹೈವೋಲ್ಟೇಜ್ ಕದನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup 2022: ಟಿ20 ವಿಶ್ವಕಪ್ 2022ರ ಭಾರತ ತಂಡದ ಪಂದ್ಯವನ್ನು ವೀಕ್ಷಿಸಲು ಆಸ್ಟ್ರೇಲಿಯಾಕ್ಕೆ ಹೋಗಲು ಸಾಧ್ಯವಾಗದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ. ಇದುವರೆಗೆ ಮೊಬೈಲ್ ಮತ್ತು ಟಿವಿ ಪರದೆಗಳಿಗೆ ಸೀಮಿತವಾಗಿದ್ದ ಕ್ರಿಕೆಟ್ ಪಂದ್ಯಗಳನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸುವ ಅವಕಾಶವನ್ನು ಐನಾಕ್ಸ್ ಕಂಪನಿ ಒದಗಿಸಲಿದೆ.

ಮುಂದೆ ಓದಿ ...
  • Share this:

ಕ್ರಿಕೆಟ್ ಪ್ರೇಮಿಗಳ ಕಾತುರದಿಂದ ಕಾಯುತ್ತಿದ್ದ ಟಿ20 ವಿಶ್ವಕಪ್ 2022 (T20 World Cup 2022)​ ಮಹಾಸಂಗ್ರಾಮ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಪಂದ್ಯಾವಳಿ ಆರಂಭವಾಗಲಿದೆ. ಈ ಪ್ರತಿಷ್ಠಿತ ಟೂರ್ನಿಗೆ ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆ ನಡೆಸಿವೆ. ಕೆಲವು ತಂಡಗಳು ಅಭ್ಯಾಸದಲ್ಲಿ ತೊಡಗಿದ್ದರೆ. ಇನ್ನು ಕೆಲವು ತಂಡಗಳು ಇತರೆ ತಂಡಗಳೊಂದಿಗೆ ಸರಣಿ ಆಡುವ ಮೂಲಕ ಸಾಕಷ್ಟು ಅಭ್ಯಾಸ ನಡೆಸುತ್ತಿವೆ. ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ನವೆಂಬರ್ 13ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.  ಟೀಂ ಇಂಡಿಯಾ (Team India) ಇದೇ ತಿಂಗಳ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ಧದ ಪಂದ್ಯದೊಂದಿಗೆ ಭಾರತ ವಿಶ್ವಕಪ್‌ನಲ್ಲಿ ಪ್ರಶಸ್ತಿ ಬೇಟೆ ಆರಂಭಿಸಲಿದೆ. ಈ ಸೂಪರ್ ಫೈಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ದೊಡ್ಡ ಪರದೆಯಲ್ಲಿ ನೋಡಿ ಟಿ20 ವಿಶ್ವಕಪ್:


ಆದರೆ, ಆಸ್ಟ್ರೇಲಿಯಕ್ಕೆ ಪಂದ್ಯ ವೀಕ್ಷಿಸಲು ಸಾಧ್ಯವಾಗದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದಿದೆ. ಮೊಬೈಲ್ ಮತ್ತು ಟಿವಿ ಪರದೆಗಳಿಗೆ ಸೀಮಿತವಾಗಿದ್ದ ಕ್ರಿಕೆಟ್ ಪಂದ್ಯಗಳನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸುವ ಅವಕಾಶವನ್ನು ಐನಾಕ್ಸ್ ಕಂಪನಿ ಒದಗಿಸಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಐನಾಕ್ಸ್ ಲೀಸರ್ ಹೇಳಿಕೆಯಲ್ಲಿ ತಿಳಿಸಿದೆ.


ಅಕ್ಟೋಬರ್ 23ರಂದು ಭಾರತ-ಪಾಕಿಸ್ತಾನವನ್ನು ಎದುರಿಸುವುದರೊಂದಿಗೆ ಟೀಮ್ ಇಂಡಿಯಾ ಆಡುವ ಎಲ್ಲಾ ಗುಂಪು ಪಂದ್ಯಗಳನ್ನು INOX ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ತಿಳೀಸಿದೆ. ಈ ಪಂದ್ಯದಿಂದ ಐನಾಕ್ಸ್ ಸ್ಟ್ರೀಮಿಂಗ್ ಪ್ರಾರಂಭಿಸುತ್ತದೆ. ಈ ಲೈವ್ ಪಂದ್ಯಗಳನ್ನು 25ಕ್ಕೂ ಹೆಚ್ಚು ನಗರಗಳಲ್ಲಿ INOX ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಐನಾಕ್ಸ್ ದೇಶದ 74 ನಗರಗಳಲ್ಲಿ 165 ಮಲ್ಟಿಪ್ಲೆಕ್ಸ್‌ಗಳನ್ನು ಹೊಂದಿದೆ. 705 ಸ್ಕ್ರೀನ್‌ಗಳೊಂದಿಗೆ 1.57 ಲಕ್ಷ ಆಸನ ಸಾಮರ್ಥ್ಯ ಹೊಂದಿದೆ.


ಇದನ್ನೂ ಓದಿ: IND vs NZ: ಟಿ20 ವಿಶ್ವಕಪ್​ ನಂತರ ಭಾರತ-ನ್ಯೂಜಿಲೆಂಡ್​ ಸರಣಿ, ವೇಳಾಪಟ್ಟಿ ಪ್ರಕಟ


ಟಿಕೆಟ್​ ದರ ಎಷ್ಟಿದೆ?:


ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿ ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಸೂಪರ್ 12 ಹಂತವು ಅಕ್ಟೋಬರ್ 22 ರಂದು ಪ್ರಾರಂಭವಾಗುತ್ತದೆ. ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ಫೈನಲ್ ನಡೆಯಲಿದೆ. ಥಿಯೇಟರ್‌ನಲ್ಲಿ ದೊಡ್ಡ ಪರದೆಯಲ್ಲಿ ಪಂದ್ಯಗಳನ್ನು ವೀಕ್ಷಿಸಿದರೆ, ಕ್ರಿಕೆಟ್ ಮೈದಾನದಲ್ಲಿ ಪಂದ್ಯಗಳನ್ನು ನೋಡುವ ಅನುಭವವಾಗುತ್ತದೆ ಎಂದು ಐನಾಕ್ಸ್ ಕಂಪನಿ ಹೇಳಿದೆ. ನಗರಕ್ಕೆ ಅನುಗುಣವಾಗಿ ಪಂದ್ಯ ವೀಕ್ಷಿಸಲು ಟಿಕೆಟ್ ದರ 200 ರಿಂದ 500 ರೂ.ವರೆಗೆ ಬದಲಾಗುತ್ತದೆ ಎನ್ನಲಾಗಿದೆ.


ಭಾರತ-ಪಾಕ್ ಗ್ರ್ಯಾಂಡ್ ಮ್ಯಾಚ್:


ಟೀಂ ಇಂಡಿಯಾ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಕಳೆದ ವರ್ಷ, ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿದ್ದು ಪಾಕಿಸ್ತಾನ. ಆದರೆ ಈ ಬಾರಿ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಖ್ಯವಾಗಿ, ಸುಮಾರು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಎಂಸಿಜಿಯಲ್ಲಿ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳು ಮುಂಚಿತವಾಗಿ ಮಾರಾಟವಾಗಿವೆ. ಹೀಗಾಗಿ ಈ ಅಮೋಘ ಪಂದ್ಯದ ವೇಳೆ ಎರಡೂ ತಂಡಗಳಿಗೆ ಮೈದಾನದಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗಲಿದೆ.


ಇದನ್ನೂ ಓದಿ: T20 World Cup 2022: ರಾಹುಲ್ ಬದಲಿಗೆ ಹೊಸ ಓಪನರ್, ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ಹೊಸ ರಣತಂತ್ರ


ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Published by:shrikrishna bhat
First published: