ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇಂದು ನಡೆದ ಅಂತಿಮ ಫೈನಲ್ ಕಾದಾಟದಲ್ಲಿ ಪಂದ್ಯದ ಮಧ್ಯೆ ಎದುರಾಳಿ ಆಟಗಾರ್ತಿ ಕ್ಯಾರೊಲಿನಾ ಮರಿನ್ ಗಾಯಗೊಂಡ ಹಿನ್ನಲೆಯಲ್ಲಿ ಸೈನಾರನ್ನು ಜಯಶಾಲಿ ಎಂದು ಘೋಷಿಸಲಾಯಿತು.
ಮರಿನ್ ಅವರು 10-4 ಅಂತರದ ಉತ್ತಮ ಮುನ್ನಡೆಯಲ್ಲಿದ್ದರು. ಆದರೆ, ರಿಟರ್ನ್ ನೀಡುವ ವೇಳೆ ಮೊಣಕಾಲಿಗೆ ಗಾಯವಾಗಿದ್ದು, ಪಂದ್ಯವನ್ನು ಮುಂದುರಿಸಲಾಗದೆ ಕಣ್ಣೀರಿಡುತ್ತಾ ಮೈದಾನದಿಂದ ಹೊರ ನಡೆದರು.
ನಿನ್ನೆ ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸೈನಾ ಅವರು ಚೀನಾದ ಹಿ ಬಿಂಗ್ಜಿಯಾವೊ ಅವರನ್ನು 18-21, 21-12, 2118 ಅಂತರದಿಂದ ಸೋಲುಣಿಸಿದ್ದರು. ಈ ಮೂಲಕ ಹೊಸ ವರ್ಷದ ಮೊದಲ ಫೈನಲ್ ಪ್ರವೇಶಿಸಿದ್ದರು.
ಇದನ್ನೂ ಓದಿ: ಜನಾಂಗೀಯ ನಿಂದನೆ ಮಾಡಿದ ಪಾಕ್ ನಾಯಕನಿಗೆ 4 ಪಂದ್ಯಗಳ ನಿಷೇಧ
ಇತ್ತ ಮೂರು ಬಾರಿಯ ವಿಶ್ವಚಾಂಪಿಯನ್ ಸ್ಪೇನ್ನ ಕ್ಯಾರೊಲಿನಾ ಮರಿನ್ ಅವರು 17-21, 21-11, 23-21 ಅಂತರದಿಂದ ಚೀನಾದ ಚೆನ್ ಯುಫೆಇ ಅವರನ್ನು ಮಣಸಿ, ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದರು.
ಈ ಹಿಂದೆ ಸೈನಾ ಅವರು 2018ರಲ್ಲಿ ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಸದ್ಯ ಇಂಡೋನೇಷ್ಯಾ ಮಾಸ್ಟರ್ಸ್ ಪ್ರಶಸ್ತಿಯನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ಮೂಲಕ ಹೊಸ ವರ್ಷವನ್ನು ಭರ್ಜರಿಯಾಗೆ ಆರಂಭಿಸಿದ್ದಾರೆ.
So hard to see as an athlete. Reigning Olympic champion @CarolinaMarin retires hurt with a knee injury vs @NSaina in the final of Indonesia Open. Hope its not too serious for Marin. Congrats Saina. 8th final here 👌 pic.twitter.com/tqjnlLpAld
— Viren Rasquinha (@virenrasquinha) January 27, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ