News18 India World Cup 2019

ಪದಾರ್ಪಣೆ ಟೆಸ್ಟ್​ನಲ್ಲೇ ನೂತನ ದಾಖಲೆ ಬರೆದ ರಿಷಭ್ ಪಂತ್

news18
Updated:August 19, 2018, 3:05 PM IST
ಪದಾರ್ಪಣೆ ಟೆಸ್ಟ್​ನಲ್ಲೇ ನೂತನ ದಾಖಲೆ ಬರೆದ ರಿಷಭ್ ಪಂತ್
news18
Updated: August 19, 2018, 3:05 PM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​ಹ್ಯಾಮ್​​​ನ ಟ್ರೆಂಟ್​​ಬ್ರಿಡ್ಜ್​​​​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದೆ. ಈ ಮಧ್ಯೆ ಯುವ ಆಟಗಾರ ರಿಷಭ್ ಪಂತ್ ಅವರು ಪದಾರ್ಪಣೆ ಮಾಡಿದ ಟೆಸ್ಟ್​ ಕ್ರಿಕೆಟ್​​​ನಲ್ಲೇ ನೂತನ ದಾಖಲೆ ಬರೆದಿದ್ದಾರೆ.

ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಕ್ರೀಸ್​​ಗೆ ಬಂದ ರಿಷಭ್ ಪಂತ್ ತಾವೆದುರಿಸಿದ ಎರಡನೇ ಎಸೆತದಲ್ಲೇ ಸಿಕ್ಸ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದರಿಂದ ಸಿಕ್ಸ್ ಬಾರಿಸುವ ಮೂಲಕ ರನ್ ಖಾತೆ ತೆರೆದ ಭಾರತದ ಮೊದಲ ಬ್ಯಾಟ್ಸ್​ಮನ್​ ಹಾಗೂ ವಿಶ್ವದ 12ನೇ ಬ್ಯಾಟ್ಸ್​ಮನ್​​​ ಎಂಬ ಕೀರ್ತಿಗೆ ಪಂತ್ ಭಾಜನರಾಗಿದ್ದಾರೆ.

291ನೇ ಭಾರತದ ಟೆಸ್ಟ್ ಆಟಗಾರನಾಗಿ 20 ವರ್ಷ ಪ್ರಾಯದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, 22 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...